ವಿಜಯಪುರ: ಲೋಕಸಭಾ ಚುನಾವಣೆ: ಪೊಲೀಸ್ ಪಥಸಂಚಲನ

ಲೋಕದರ್ಶನ ವರದಿ

ವಿಜಯಪುರ 21: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತಾ ಕ್ರಮವಾಗಿ ನಗರದಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು.

ವಿಜಯಪುರ ನಗರದ ಪೊಲೀಸ್ ಹೆಡ್ಕ್ವಾಟರ್ಸ್ದಿಂದ ಪ್ರಾರಂಭವಾದ ಪಥಸಂಚಲನವು ವಾಟರ್ಟ್ಯಾಂಕ್ ಮಾರ್ಗವಾಗಿ ಶಿವಾಜಿ ಸರ್ಕಲ್, ಉಪಲಿಬುರ್ಜ, ರಾಮಮಂದಿರ ರೋಡ, ನಾಗೂರ ಆಸ್ಪತ್ರೆ ಕ್ರಾಸ್, ಸಿದ್ದೇಶ್ವರ ದೇವಸ್ಥಾನ, ಗಾಂಧಿವೃತ್ತ, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್ದವರೆಗೆ ಸಂಚರಿಸಿ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಮುಕ್ತಾಯವಾಯಿತು.

ಪಥಸಂಚಲನದಲ್ಲಿ ಚುನಾವಣಾ ವೀಕ್ಷಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕಮಾಂಡೆಂಟ್ ಸಿಐಎಸ್ಎಫ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯಪುರ, ಪ್ರೋಬೆಷನರಿ ಐಪಿಎಸ್ ಪ್ರಶಿಕ್ಷಣಾರ್ಥಿಗಳು  ಪೊಲೀಸ್ ಉಪಾಧೀಕ್ಷಕರು ವಿಜಯಪುರ, ಬ.ಬಾಗೇವಾಡಿ  ಹಾಗೂ ಡಿಎಸ್ಪಿ ಡಿಎಆರ್ ಘಟಕ ವಿಜಯಪುರ, ಸಿಐಎಸ್ಎಫ್ ತುಕುಡಿಗಳು, ಪ್ರಶಿಕ್ಷಣಾರ್ಥಿ  ಪೊಲೀಸ್ ಸಿಬ್ಬಂದಿ, ಜೈಲ ವಾರ್ಡರ್ಗಳು,  ನಾಗರೀಕ ಪೊಲೀಸ್ ಸಿಬ್ಬಂದಿಗಳು, ಗೃಹರಕ್ಷಕ ಸಿಬ್ಬಂದಿಗಳು, ಸೇರಿದಂತೆ ಸುಮಾರು 500 ಜನ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.