ಲೋಕದರ್ಶನ ವರದಿ
ವಿಜಯಪುರ 11: ಪತ್ರಿಕೋದ್ಯಮ ಎನ್ನುವುದು ಒಂದು ಚೌಕಟ್ಟಿನಲ್ಲಿರದೇ ಬೇರೆ ಬೇರೆ ವಿಷಯಗಳನ್ನು ಕೆಲ ಹಾಕಿದರೆ ಅದು ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಕೆನಡಾದ ಇಂಡಿಯಾ ಆಬ್ಸ್ರ್ವರ್ ಪತ್ರಿಕೆಯ ಸಂಪಾದಕ ಮತ್ತು ಬಿ.ವಿ.ನಾಗ್ ಕಮ್ಯೂನಿಕೇಷನ್ಸ್ನ ಅಧ್ಯಕ್ಷ ಬಿ.ವಿ. ನಾಗರಾಜು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಪ್ರತಿಯೊಂದರಲ್ಲಿ ಆಸಕ್ತಿ ತೋರಿಸಿದರೆ ವಿಷಯದ ಬಗ್ಗೆ ಹೆಚ್ಚು ಮಾಹಿತಿ ದೊರೆಯುತ್ತದೆ. ಆ ಮಾಹಿತಿಯು ಸಮಾಜದ ಬದಲಾವಣೆಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು ಇಂದು ತಂತ್ರಜ್ಞಾನ ಅತೀ ವೇಗದಲ್ಲಿ ಬೆಳವಣಿಗೆ ಆಗುತ್ತಿದೆ. ಅದರ ಜೊತೆ ಜೊತೆಯಲ್ಲಿಯೇ ನೀವು ಬೆಳವಣಿಗೆಯಾಗಬೇಕು. ಇದರಿಂದ ನಿಮ್ಮ ವ್ಯಕ್ತಿತ್ವವೂ ವೃದ್ಧಿಸುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೆನಡಾದ ಸಂವಹನ ತಜ್ಞೆ ಗೀತಾ ನಾಗರಾಜು ಹಾಗೂ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ಕೋಲಾರ ಮತ್ತು ಸಂದೀಪ ನಾಯಕ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.