ವಿಜಯಪುರ: ನ್ಯಾಯವಾದಿಗಳ ಸಂಘ: ನೂತನ ಅಧ್ಯಕ್ಷರಾಗಿ ಖಾಸನೀಸ ಆಯ್ಕೆ

ಲೋಕದರ್ಶನ ವರದಿ

ವಿಜಯಪುರ 20: ವಿಜಯಪುರ ಜಿಲ್ಲಾ ನ್ಯಾಯವಾದಿಗಳ ಸಂಘದ 2019-20ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

      ನೂತನ ಅಧ್ಯಕ್ಷರಾಗಿ ಎಂ.ಎಚ್. ಖಾಸನೀಸ ಹಾಗೂ ಉಪಾಧ್ಯಕ್ಷರಾಗಿ ಎ.ಎನ್. ರುಣವಾಲ ಆಯ್ಕೆಯಾಗಿದ್ದಾರೆ.

     ಕಾರ್ಯದಶರ್ಿಗಳಾಗಿ ಆರ್.ಎನ್. ಅಡ್ಡೋಡಗಿ, ಜಂಟಿ ಕಾರ್ಯದಶರ್ಿಯಾಗಿ ಸಿ.ಎ. ಇಂಚಗೇರಿ, ಗ್ರಂಥಾಲಯ ಕಾರ್ಯದರ್ಶಿಯಾಗಿ ಎಸ್.ಎಸ್. ಚೂರಿ, ಆಡಳಿತ ಮಂಡಳಿ ಸದಸ್ಯರಾಗಿ ಬಿ.ಬಿ. ಹಿಪ್ಪರಗಿ, ಕೆ.ಸಿ. ರಾಠೋಡ, ಎಂ.ಆರ್. ಹವಾಲ್ದಾರ, ವಿ.ಎಸ್. ಪಾಟೀಲ ನಾಗರಹಳ್ಳಿ, ಐ.ಬಿ. ಅಳ್ಳಿಗುಡದ, ಗೀತಾ ಕನಕರೆಡ್ಡಿ ಅವರು ಆಯ್ಕೆಯಾಗಿದ್ದಾರೆ ಎಂದು  ಚುನಾವಣಾಧಿಕಾರಿ ಆರ್. ಎಚ್.ಮನಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯವಾದಿಗಳ ಸಮಸ್ಯೆಗಳಿಗೆ ಸ್ಪಂದಿಸಿ, ನ್ಯಾಯವಾದಿಗಳಿಗೆ ವಿವಿಧ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.