ವಿಜಯಪುರ: ಸದೃಢ ಭಾರತ ನಿರ್ಮಾಣ ಯುವಕರ ಕೈಯಲ್ಲಿದೆ: ಪ್ರಕಾಶ

ಲೋಕದರ್ಶನ ವರದಿ

ವಿಜಯಪುರ 21: ಸ್ವಾಮಿ ವಿವೇಕಾನಂದರ ಆದಿಯಾಗಿ ಭಾರತ ದೇಶವನ್ನು ವಿಶ್ವ ಮಾದರಿ ರಾಷ್ಟ್ರವನ್ನಾಗಿ ಮಾಡುವುದಕ್ಕಾಗಿ ಹಗಲು ರಾತ್ರಿ ಪ್ರಯತ್ನ ನಡೆದೆ ಇದೆ. ಪ್ರಸ್ತುತ ಸನ್ನಿವೇಶದಲ್ಲಿ ಆ ಗುರುತರವಾದ ಜವಾಬ್ದಾರಿ ಭಾರತದ ಯುವಕರ ಹೆಗಲಮೇಲೆ ಇದೆ. ಆ ನಿಟ್ಟಿನಲ್ಲಿ ಯುವಕರು ದೃಢವಾದ ಹೆಜ್ಜೆ ಇಡಬೇಕು ಎಂದು ಹೇಳಿದರು. ಪ್ರಸ್ತುತ ಚುನಾವಣೆ ಹೊಸ್ತಿಲಲ್ಲೇ ಇರುವುದರಿಂದ ಪ್ರತಿಯೊಬ್ಬ ಯುವಕನು ಜವಾಬ್ದಾರಿ ಹೆಜ್ಜೆಯನ್ನು ಇಡುವ ಮೂಲಕ ಕಡ್ಡಾಯವಾಗಿ ಮತದಾನ ಮಾಡಿ ಸುಭದ್ರ ಸರ್ಕಾರ  ರಚನೆಗೆ ಕಾರಣವಾಗಬೇಕು ಎಂದು ನ್ಯಾಯವಾದಿ ಪ್ರಕಾಶ ಎಸ್ ಉಡುಪೀಕರ ಕರೆ ನೀಡಿದರು.

ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ವಾರ್ಷಿಕ  ಸ್ನೇಹ ಸಮ್ಮೇಳನ ಹಾಗೂ ಪಠ್ಯೇತರ ಚಟುವಟಿಕೆಗಳ ಮುಕ್ತಾಯ ಸಮಾರಂಭ ಮತ್ತು ವಿದ್ಯಾರ್ಥಿಗಳ  ಬೀಳ್ಕೊಡುಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಭಾರತ ದೇಶ ಸನಾತನ ಸಂಸ್ಕೃತಿ ಹಾಗೂ ಪರಂಪರೆಯನ್ನು ಒಳಗೊಂಡ ದೇಶವಾಗಿದೆ ಇಲ್ಲಿರುವ ಜನಸಂಖ್ಯೆಯಲ್ಲಿ ಬಹುಪಾಲು ಯುವಕರೆ ಇದ್ದಾರೆ. ಹೀಗಾಗಿ ಇಡೀ ಭಾರತದ ಭವಿಷ್ಯ ಯುವಕರ ಕೈಯಲ್ಲಿಯೇ ಇದೆ. ಹಾಗೂ ಆ ಭವಿಷ್ಯ ನಿರ್ಮಾಣ ಮಾಡುವುದಕ್ಕಾಗಿ ಮತದಾನ ಎನ್ನುವ ಅಸ್ತ್ರವನ್ನು ಸಹ ನೀಡಲಾಗಿದ್ದು ಅದನ್ನು ಸರಿಯಾಗಿ ಬಳಸಿ ಸದೃಢ ಭಾರತವನ್ನು ನಿರ್ಮಾಣ  ಮಾಡಬೇಕು ಎಂದು ಹೇಳಿದರು. ಹಾಗೂ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಆಶೆ ಆಮಿಶಗಳಿಗೆೊಳಗಾಗದೇ ಸ್ವಂತಃ ಆಲೋಚನಾ ಶಕ್ತಿಯ ಮೂಲಕ ಮತಚಲಾಯಿಸಿ ಭಾರತಕ್ಕೆ ಒಂದು ಸದೃಢ ಸಕರ್ಾರ ರಚನೆ ಮಾಡಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಣಿಚನ್ನಮ್ಮ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯನರಸಿಂಹ ರಾಯಚೂರ ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳು ಆಗುತ್ತಿವೆ. ಕೇವಲ ಮಾಹಿತಿ ಶಿಕ್ಷಣಕ್ಕೆ ಬದಲಾಗಿ ಬದುಕು ಕಟ್ಟಿಕೊಳ್ಳುವ ಉದ್ಯೋಗ ಶಿಕ್ಷಣವನ್ನು ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಪಠ್ಯಾಧಾರಿತ ಶಿಕ್ಷಣವನ್ನು ನೀಡುವುದರ ಜೊತೆಗೆ ಸ್ಪರ್ಧಾತ್ಮಕ  ತಯಾರಿ ನಡೆಸುವ ಕುರಿತು ಸಹ ತರಬೇತಿ ನೀಡಿದಲ್ಲಿ ಪದವಿ ಮುಗಿಸಿ ಹೊರ ಬರುತ್ತಿದ್ದಂತೆ ಎಲ್ಲ ರೀತಿಯಿಂದಲೂ ಸಿದ್ಧರಾದಂತಾಗಿರುತ್ತಾರೆ. ಇದರಿಂದ ತಮಗೆ ಅನುಕೂಲವಾಗುವ ಪರೀಕ್ಷೆಯನ್ನು ಎದುರಿಸಿ ಉದ್ಯೋಗವನ್ನು ಪಡೆದುಕೊಂಡು ಬದುಕನ್ನು ಕಟ್ಟಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ರಾಜೇಶ ದರಬಾರ ಅವರು; ಕನರ್ಾಟಕದ ಹಲವು ಕ್ಷೇತ್ರಗಳಿಗೆ ನಮ್ಮ ಮಹಾವಿದ್ಯಾಲಯದ ಕೊಡುಗೆ ಅಪಾರವಾದುದಾಗಿದೆ. ಜಿಲ್ಲೆಯ ಎಂಟು ಮತಕ್ಷೇತ್ರಗಳ ನಾಯಕರುಗಳಲ್ಲಿ ನಾಲ್ಕುಜನರನ್ನು ನೀಡಿದ್ದು ನಮ್ಮ ಮಹಾವಿದ್ಯಾಲಯವೇ ಎನ್ನುವುದು ಹೆಮ್ಮೆಯ ವಿಷಯ. ಅಷ್ಟೇ ಮಾತ್ರವಲ್ಲ ಆಡಳಿತಗಾರರು, ಆರಕ್ಷಕರು, ಭಾರತದ ಆಯೋಗಸೇವೆಯ ಅಧಿಕಾರಿಗಳು ಸೇರಿಂದತೆ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಸಮನ್ವಯ ಅಧಿಕಾರಿ ಡಾ.ವ್ಹಿ,ಬಿ.ಗ್ರಾಮಪುರೋಹಿತ, ಪ್ರಾಚಾರ್ಯ ಜಿ.ಹೆಚ್.ಮಣ್ಣೂರ, ಉಪನ್ಯಾಕ ಮನೋಹರ ದೊಡ್ಡಮನಿ ಉಪಸ್ಥಿತರಿದ್ದರು. ಬಿ.ಎಸ್.ಖರ್ಜಗಿ ಹಾಗೂ ಶ್ರೀನಿವಾಸ ಖೇಡ್ಕರ ಪ್ರಾಥರ್ಿಸಿದರು, ಸುನೀಲ ಯಾದವ ಪರಿಚಯಿಸಿದರು ಎಂ.ಎಂ.ಜುನಗೊಂಡ ನಿರೂಪಿಸಿದರು ಹಾಗೂ ಸೀಮಾ ಪಾಟೀಲ ವಂದಿಸಿದರು.