ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕರ ಉಸ್ತುವಾರಿ ವಿಜಯ್ ಕುಮಾರ್ ಜೊಹ್ರಿ

 ನವದೆಹಲಿ, ಆಗಸ್ಟ್ 31 :  ಐಪಿಎಸ್ ವಿವೇಕ್ ಕುಮಾರ್ ಜೊಹ್ರಿ ಶನಿವಾರ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಮಹಾ ನಿದರ್ೆಶಕರ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ   

ಬಿಎಸ್ಎಫ್ ವಿಶ್ವದ ಅತಿದೊಡ್ಡ ಗಡಿ ಕಾವಲು ಪಡೆಯಾಗಿದ್ದು, ಸುಮಾರು ಎರಡು ಲಕ್ಷ ಅರವತ್ತೈದು ಸಾವಿರ ಧೈರ್ಯಶಾಲಿ ಮತ್ತು ಸಮಪರ್ಿತ ಪುರುಷ ಮತ್ತು ಮಹಿಳಾ ಸೈನಿಕರನ್ನು ಹೊಂದಿದೆ. ಇದು ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ಅಂತಾರಾಷ್ಟ್ರೀಯ ಗಡಿಗಳನ್ನು ರಕ್ಷಿಸುತ್ತದೆ. 

ವಿವೇಕ್ ಕುಮಾರ್ ಜೊಹ್ರಿ ಅವರು, ಗಡಿ ಭದ್ರತಾ ಪಡೆಯ 25ನೇ ಮಹಾ ನಿದರ್ೆಶಕರಾಗಿದ್ದು, ಅವರು ಭೋಪಾಲ್ನ ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. 

ಅವರು, ಮಧ್ಯಪ್ರದೇಶದ ಪನ್ನಾ, ಭಿಂದ್, ಹೋಶಂಗಾಬಾದ್, ರತ್ನಂ ಮತ್ತು ಜಬಲ್ಪುರ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.   

 1991 ರಲ್ಲಿ ಅಸ್ಸಾಂನ ಯುನೈಟೆಡ್ ಲಿಬರೇಶನ್ ಫ್ರಂಟ್ ಉಲ್ಫಾ ವಿರೋಧಿ ಕಾಯರ್ಾಚರಣೆಗಾಗಿ ಕೆಲಸ ಮಾಡುವ ಎಂಪಿಎಸ್ಎಎಫ್ ಸೈನಿಕ ಪಡೆಗೆ ಅವರು ಕಮಾಂಡರ್ ಆಗಿದ್ದರು.  

 ಗಡಿ ಭ್ರತಾ ಪಡೆ ಸೇರುವ ಮುನ್ನ ಸಿಬಿಐ ಪೊಲೀಸ್ ಅಧೀಕ್ಷಕರಾಗಿ ಮತ್ತು ನಂತರ ನವದೆಹಲಿಯ ಕ್ಯಾಬಿನೆಟ್ ಕ್ಯಾಬಿನೆಟ್ ಸಚಿವಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.