ವಿಜಯ ಹಜಾರೆ: ಕರ್ನಾಟಕದ ಸವಾಲು ಎದುರಿಸಲಿದೆ ಮುಂಬೈ

ಬೆಂಗಳೂರು, ಅ.9:   ವಿಜಯ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಜಯ ಸಾಧಿಸಿರುವ ಆತಿಥೇಯ ತಂಡ 16 ಅಂಕ ಕಲೆ ಹಾಕಿ ಮೊದಲ ಸ್ಥಾನದಲ್ಲಿದೆ. ಇನ್ನ ಮುಂಬೈ ಐದು ಪಂದ್ಯಗಳಿಂದ 12 ಅಂಕ ಕಲೆ ಹಾಕಿದ್ದು, ಏಳನೇ ಸ್ಥಾನದಲ್ಲಿದೆ.  ಕರ್ನಾಟಕ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಲಾಢ್ಯವಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅನುಭವ ಹೊಂದಿರುವ ಮನೀಷ್ ಪಾಂಡೆ ಹಾಗೂ ಕೆ.ಎಲ್ ರಾಹುಲ್ ರನ್ ಕಲೆ ಹಾಕುತ್ತಿದ್ದು ತಂಡದ ಚಿಂತೆಯನ್ನು ದೂರ ಮಾಡಿದೆ. ಮನೀಷ್ ಪಾಂಡೆ 342, ರಾಹುಲ್ 278 ಹಾಗೂ ದೇವದತ್ ಪಡೀಕ್ಕಲ್ 172 ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಬೇಕಿದೆ.     ಮನೀಷ್ ಪಾಂಡೆಯ ಬೌಲಿಂಗ್ ಗೆ ಶ್ರೇಯಸ್ ಗೋಪಾಲ್ 11, ಪ್ರಸೀದ್ಧ ಕೃಷ್ಣ ಹಾಗೂ ರೋನಿತ್ ಮೋರೆ ತಲಾ 9, ಕೆ. ಗೌತಮ್ 7 ವಿಕೆಟ್ ಪಡೆದು ಕೊಂಡಿದ್ದಾರೆ. ಗುರುವಾರ ನಡೆಯುವ ಪಂದ್ಯದಲ್ಲಿ ಮನಮೋಹಕ ದಾಳಿ ನಡೆಸಲು ಬೌಲರ್ ಗಳು ಪ್ಲಾನ್ ಮಾಡಿಕೊಂಡಿದ್ದಾರೆ.  ಮುಂಬೈ ತಂಡದ ಸೂರ್ಯಕುಮಾರ್ ಯಾದವ್ 200, ಆದಿತ್ಯ ತಾರೆ 205, ಜೈಸ್ವಾಲ್ 157, ಶ್ರೇಯಸ್ ಅಯ್ಯರ್ 170 ರನ್ ಗಳನ್ನು ಕಲೆ ಹಾಕಿದ್ದು ಎದುರಾಳಿಗಳನ್ನು ಕಾಡಬಲ್ಲರು. ಮುಂಬೈ ಪರ ಶಾಮ್ ಮುಲಾನಿ 9, ಶಾದರ್ೂಲ್ ಠಾಕೂರ್ 5, ಧವಳ್ ಕುಲಕಣರ್ಿ 4 ವಿಕೆಟ್ ಕಬಳಿಸಿದ್ದಾರೆ. ಈ ಪಂದ್ಯ ಗೆದ್ದು ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಮುಂಬೈ ತಂಡದ್ದಾಗಿದೆ.