ವಿದ್ಯಾಥರ್ಿನಿ ಅತ್ಯಾಚಾರ ತನಿಖೆಗೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ

ಲೋಕದರ್ಶನ ವರದಿ

ಧಾರವಾಡ 20: ರಾಯಚೂರಿನ ನವೋದಯ ಇಂಜಿನಿಯರಿಂಗ ಕಾಲೇಜಿನ ವಿದ್ಯಾಥರ್ಿನಿಯಾದ ಮಧು ಪತ್ತಾರ  ಹತ್ಯ ನಡೆದ ಘಟನೆಯ ಕುರಿತು  ಧಾರವಾಡದ ವಿಶ್ವಕರ್ಮ ಸಮುದಾಯದವರು ಸಮಗ್ರ ತನಿಕೆ ಮಾಡಿ ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.  

      ದಿವಂಗತ ಮಧು ಅವಳಿಗೆ ಮತ್ತು ಅವರ ಕುಟುಂಬಕ್ಕೆ ಹಾಗೂ ಸಮಾಜದಲ್ಲಿ ನ್ಯಾಯಕ್ಕೆ ಸ್ಥಾನವಿದೆ ಇದನ್ನು ಎತ್ತಿ ಹಿಡಿಯಲು ಇಲಾಖೆ ಮತ್ತು ಸರಕಾರಗಳು ಸಮಾಜ ಸಮರ್ಥ ಎಂಬುದನ್ನು ಹಾಗೂ ಅಧಿಕಾರಿ ವರ್ಗದಲ್ಲಿ ನಂಬಿಕೆ ಬರಬೇಕಾದರೆ ಸಮಗ್ರ ತನಿಖೆ ನಡೆಸಿ, ಈ ಕೂಡಲೇ ಆರೋಪಿತರನ್ನು ಬಂಧಿಸಿ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು. 

ಈ ಪ್ರಕರಣದ ವಿರುದ್ಧ ಸ್ಥಳೀಯ ಪೋಲಿಸರು ರಾಜಕೀಯ ಒತ್ತಡಕ್ಕೆ ಸೂಕ್ತ ತನಿಖೆ ನಡೆಸದೆ ಕಾಟಾಚಾರಕ್ಕೆವೆಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಈ ಸಾವನ್ನು ಸಹಜ ಸಾವು ಎಂದು ದಾಖಲಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತೀಯ ವಿಶ್ವಕರ್ಮ ಛಾತ್ರ ಯುವ ಸಂಘದ ಮತ್ತು ಸಮಗ್ರ ಕನರ್ಾಟಕ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ಖಂಡನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ತನಿಖೆಗೆ ಆದೇಶಿಸಿವಂತೆ ಮನವಿ ಸಲ್ಲಿಸಿದರು.