ವಿದ್ಯಾಸಾಗರ.ವಸತಿ.ಶಾಲೆಯಲ್ಲಿ.ಸಿಬಿಎಸ್‌ಇ.ಪಠ್ಯಕ್ರಮ.ಆರಂಭ : ಪ್ರಾಚಾರ್ಯ. ಪಿ.ನಾಗೇಶ್ವರರಾವ್
ಕಂಪ್ಲಿ 07: ಪಟ್ಟಣದ ವಿದ್ಯಾಸಾಗರ ವಸತಿ ಶಾಲೆಯಲ್ಲಿ ಏಪ್ರಿಲ್‌ನಿಂದ ನೂತನವಾಗಿ ಸಿಬಿಎಸ್‌ಇ ಪಠ್ಯಕ್ರವನ್ನು ಆರಂಭಿಸಲಾಗುವುದು ಎಂದು ಶಾಲೆಯ ಪ್ರಾಚಾರ್ಯ ಪಿ.ನಾಗೇಶ್ವರರಾವ್ ತಿಳಿಸಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ 2003 ರಿಂದ ಪಟ್ಟಣದಲ್ಲಿ ನವ ಭಾರತ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆರಂಭವಾಗಿರುವ ವಿದ್ಯಾಸಾಗರ ಹಿರಿಯ ಪ್ರಾಥಮಿಕ ಶಾಲೆಯು 22 ವರ್ಷಗಳಿಂದಲೂ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಉತ್ತಮ ಸಾಧನೆಯನ್ನು ಮಾಡಿದೆ. ಸಿಬಿಎಸ್‌ಇ ಪಠ್ಯಕ್ರಮಕ್ಕಾಗಿ ಕಳೆದ ಹಲವು ವರ್ಷಗಳಿಂದ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ಪ್ರಯತ್ನಗಳನ್ನು ನಡೆಸುತ್ತಿದ್ದು ಈ ವರ್ಷ ಕೇಂದ್ರ ಸಮಿತಿಯಿಂದ ಸಿಬಿಎಸ್‌ಇ ಪಠ್ಯಕ್ರಮಕ್ಕೆ ಪರವಾನಿಗೆ ದೊರೆತಿದೆ. ತಾಲ್ಲೂಕಿನಲ್ಲಿಯೇ ಪ್ರಥಮ ಬಾರಿಗೆ ನಮ್ಮ ಶಾಲೆಗೆ ಸಿಬಿಎಸ್‌ಇ ಪಠ್ಯಕ್ರಮ ತರಗತಿಗಳನ್ನು ನಡೆಸಲು ಪರವಾನಿಗೆ ಸಿಕ್ಕಿರುವುದು ಸಂತಸದ ವಿಷಯವಾಗಿದ್ದು, ತಾಲ್ಲೂಕಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಕೇಂದ್ರೀಯ ಪಠ್ಯಕ್ರಮದ ಬೊಧನೆಯನ್ನು ಮಾಡಲಾಗುವುದು ಎಂದರು. ಸಿಬಿಎಸ್‌ಇ ಪಠ್ಯಕ್ರಮಕ್ಕೆ 2025ನೇ ಸಾಲಿನ ಏಪ್ರಿಲ್‌ನಿಂದ ದಾಖಲಾತಿ ಆರಂಭವಾಗಲಿದೆ 1 ರಿಂದ 10 ನೇತರಗತಿಯವರೆಗೆ ಸಿಬಿಎಸ್‌ಇ ಪಠ್ಯಕ್ರಮದಂತೆ ತರಗತಿಗಳು ನಡೆಯಲಿದ್ದು, 2027 ರಲ್ಲಿ ಹತ್ತನೇ ತರಗತಿಯ ಸಿಬಿಎಸ್‌ಇ ಪಠ್ಯಕ್ರಮದ ಪ್ರಥಮ ತಂಡ ಪರೀಕ್ಷೆಯನ್ನು ಬರೆಯಲಿದೆ. ಪಟ್ಟಣವೂ ಸೇರಿದಂತೆ ತಾಲ್ಲೂಕಿನ ನಾಗರೀಕರು ತಮ್ಮ ಮಕ್ಕಳನ್ನು ಸಿಬಿಎಸ್‌ಇ ಪಠ್ಯಕ್ರಮಕ್ಕೆ ದಾಖಲಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಬೇಕೆಂದರು.ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಸಾಯಿಕಿಶೋರ್ ಹಾಗೂ ಆಡಳಿತ ಮಂಡಳಿಯ ಉಪಾಧ್ಯಕ್ಷ ಟಿ.ಕೊಟ್ರೇಶ್ ಮತ್ತು ಆಡಳಿಯ ಮಂಡಳಿಯ ಸದಸ್ಯರು ಇದ್ದರು. ಸಿಬಿಎಸ್‌ಇ ಪಠ್ಯಕ್ರಮದ ದಾಖಲಾತಿ ಕುರಿತಂತೆ ಶಾಲೆಯ ಪ್ರಾಚಾರ್ಯರಾದ ಪಿ.ನಾಗೇಶ್ವರರಾವ್ ( ದೂ.ವಾ.ಸಂ.94481 48628) ಹಾಗೂ ಉಪ ಪ್ರಾಚಾರ್ಯರಾದ ಸಾಯಿಕಿಶೋರ್ ಪಲೇಟಿ( ದೂ.ವಾ.ಸಂ. 81978 79676) ಸಂಪರ್ಕಿಸಬಹುದು ಫೆ.02 ಪಾಸ್ ಪೋಟೋ: ಪಿ.ನಾಗೇಶ್ವರರಾವ್.