ವಿದ್ಯಾಮಂದಿರ ಪ್ರೌಢಶಾಲೆ ನೇಸರಗಿಯ ಹಳೆಯ ವಿದ್ಯಾರ್ಥಿಗಳಿಂದ ಶಿಷ್ಯ ವೇತನಕ್ಕೆ ಸಹಾಯಧನ
ನೇಸರಗಿ 6 : ನೇಸರಗಿಯ ವಿದ್ಯಾಮಂದಿರ ಪ್ರೌಢಶಾಲೆಯ 1989-1990 ನೇ ಸಾಲಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗಳಿಂದ ತಾವು ಕಲಿತ ಶಾಲೆಯ ಸವಿ ನೆನಪಿಗಾಗಿ ಪ್ರತಿವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಒಬ್ಬ ವಿದ್ಯಾರ್ಥಿ ಹಾಗೂ ಒಬ್ಬ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವ ಸಲುವಾಗಿ ತಮ್ಮ ಮಾಧ್ಯಮಿಕ ಶಾಲೆಯ ಬಳಗದ ವತಿಯಿಂದ ಸಂಗ್ರಹವಾದ ಸುಮಾರು 59000/- ರೂಪಾಯಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಫಾ.ಹ್ಯಾರಿ ವಿಕ್ಟರ ಡಿಕ್ರೂಜರವರಿಗೆ ನೀಡಿ,ಅದರಲ್ಲಿನ 55000/- ರೂಪಾಯಿ ಬ್ಯಾಂಕಿನಲ್ಲಿಟ್ಟು ಬರುವ ಬಡ್ಡಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ಸಮನಾಗಿ ನೀಡುವಂತೆಯೂ, ಉಳಿದ 4000/-ರೂಪಾಯಿ ಈ ವರ್ಷ ಹೆಚ್ಚು ಅಂಕ ಗಳಿಸಿದ ಇಬ್ಬರಿಗೂ ತಲಾ 2000/-ರೂಪಾಯಿ ನೀಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಬಳಗದ ಸದಸ್ಯರಾದ ಸುರೇಶ ಶಿವಪುತ್ರ್ಪ ನಾವಲಗಟ್ಟಿ ತಮ್ಮ ಬಳಗದ ವತಿಯಿಂದ ತಮ್ಮ ಸಹಪಾಟಿಯೋರ್ವ ಅರ್ಧಾಂಗವಾಯುವಿಗೆ ತುತ್ತಾದಾಗ 35000/- ರೂಪಾಯಿ ಹಾಗೂ ಆಹಾರ ಧಾನ್ಯ, ಮತ್ತೋರ್ವ ಸಹಪಾಟಿಯ ಮಗನಿಗೆ ಆರೋಗ್ಯ ಸರಿಯಿಲ್ಲದಾಗ 25000/- ರೂಪಾಯಿ ಸಹಾಯ ಮಾಡಿರುವ ಬಗ್ಗೆ ತಿಳಿಸಿ ಮುಂದೆಯೂ ತಮ್ಮ ಬಳಗದ ವತಿಯಿಂದ ಕೈಲಾದ ಸಮಾಜಮುಖಿ ಕಾರ್ಯ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ 1989-90ನೇ ಸಾಲಿನ ಬಳಗದ ಪರವಾಗಿ ಯಲ್ಲನಗೌಡ ದೊಡ್ಡಗೌಡ್ರ, ಮಲ್ಲೇಶ ಹುಲಮನಿ,ದೊಡ್ಡಪ್ಪ ಕರವೀರನವರ, ಮಹಾಂತೇಶ ಮಾಸ್ತಮರ್ಡಿ, ಸುರೇಶ ನಾವಲಗಟ್ಟಿ, ಪರ್ವತಗೌಡ್ರ ಸರ್,ಸುರೇಖಾ ಮೇಟಿ, ಉಮಾ ಪುಗಟಿ, ಕಮಲಾ ನಾವಲಗಟ್ಟಿ ಹುದ್ದಾರ ಸಿಸ್ಟರ್ ಮುಂತಾದವರು ಹಾಜರಿದ್ದರು.ಶಾಲಾ ಮುಖ್ಯೋಪಾಧ್ಯಾಯರು ಬಳಗದ ಕಾರ್ಯ ಶ್ಲಾಘನೀಯವೆಂದು ಹೇಳಿ,ಮುಂದೆ ನಮ್ಮ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳುವ ಸ್ನೇಹಕೂಟ ಹಾಗೂ ಗುರುವಂದನಾ ಕಾರ್ಯಕ್ರಮ ಕ್ಕೆ ಸಹಾಯ ನೀಡುವುದಾಗಿ ತಿಳಿಸಿದರು.