ಮುಂಬೈ, ಆಗಸ್ಟ್ 31 ಬಾಲಿವುಡ್ ಬಹುಬೇಡಿಕೆಯ ನಟಿ ವಿದ್ಯಾ ಬಾಲನ್, ತಮ್ಮ ಪತಿ ಹಾಗೂ ಚಿತ್ರ ನಿರ್ಮಾಪಕ ಸಿದ್ಧಾರ್ಥ ರಾಯ್ ಕಪೂರ್ ಅವರೊಂದಿಗೆ ಒಂದೇ ಚಿತ್ರದಲ್ಲಿ ಕಾರ್ಯನಿರ್ವಹಿಸಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾ, ನನಗೆ ಚಿತ್ರದ ಕುರಿತು ಯಾವುದಾದರೂ ಸಮಸ್ಯೆ ಎದುರಾದರೇ, ನಿರ್ದೇಶಕ ಹಾಗೂ ನಿರ್ಮಾಪಕರೊಂದಿಗೆ ಜಗಳ ಮಾಡುತ್ತೇನೆ. ಅದೇ ಪತಿ ಸಿದ್ಧಾರ್ಥ ಅವರೊಂದಿಗೆ ಜಗಳ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮೊದಲಿನಿಂದಲೂ ಚಿತ್ರಕ್ಕಾಗಿ ನಮ್ಮಿಬ್ಬರ ಸಂಬಂಧ ಹಾಳಾಗಬಾರದು ಎಂಬುದು ಅಭಿಲಾಷೆ. ಸಿದ್ಧಾರ್ಥ ಹಾಗೂ ನನಗೆ ಒಂದೇ ಚಿತ್ರಕಥೆಗಳು ಇಷ್ಟವಾಗಿದ್ದು ಉಂಟು. ಆದರೆ, ಒಟ್ಟಿಗೆ ಕೆಲಸ ಮಾಡಬಾರದೆಂದು ನಿರ್ಧರಿಸಿ ಅನೇಕ ಬಾರಿ ಇಬ್ಬರಲ್ಲಿ ಒಬ್ಬರೂ ಚಿತ್ರದಿಂದ ಹಿಂದೆ ಸರಿದೇವು. ಅಲ್ಲದೇ, ಪತಿಯ ಜೊತೆ ವೇತನದ ಕುರಿತು ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ವಿದ್ಯಾಬಾಲನ್ ಅಭಿನಯದ 'ಮಿಷನ್ ಮಂಗಲ್' ಚಿತ್ರ ಬಿಡುಗಡೆಗೊಂಡಿದ್ದು, ಪ್ರೇಕ್ಷಕ ವರ್ಗ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.