ಬಿಜೆಪಿಯಿಂದ ಮನಮೋಹನ್ ಸಿಂಗ್ ಸಿಎಎಗೆ ಬೆಂಬಲ ಸೂಚಿಸಿದ್ದ ವಿಡಿಯೋ ಬಿಡುಗಡೆ

ನವದೆಹಲಿ, ಡಿ 19 ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿಪಕ್ಷಗಳು ಹಾಗೂ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಯ್ದೆಯನ್ನು ಬೆಂಬಲಿಸಿ ಮಾತನಾಡಿದ ವಿಡಿಯೋವನ್ನು ಬಿಜೆಪಿ ಬಿಡುಗಡೆಗೊಳಿಸಿದೆ.   ಮನಮೋಹನ್ ಸಿಂಗ್ ಅವರು 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದರು.   “ಅಂದು ರಾಜ್ಯಸಭೆಯ ವಿಪಕ್ಷ ನಾಯಕರಾಗಿದ್ದ ಸಿಂಗ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಅಲ್ಪಸಂಖ್ಯಾತರಿಗೆ ಪೌರತ್ವ ಒದಗಿಸುವ ನಿಟ್ಟಿನಲ್ಲಿ ಉದಾರ ಮನೋಭಾವ ತೋರುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.” ಎಂದು ಬಿಜೆಪಿ ತಮ್ಮ ಪಕ್ಷದ ಟ್ವಿಟರ್ ಖಾತೆಯಲ್ಲಿ ಆರೋಪಿಸಿದೆ.    2014 ಹಾಗೂ 2019ನೇ ಸಾಲಿನ ಲೋಕಸಭಾ ಚುನಾವಣಾ ಪ್ರಣಾಳೀಕೆಯಲ್ಲಿ ಬಿಜೆಪಿ, ಸಿಎಎ ಅನ್ನು ಜಾರಿಗೆ ತರುವ ಭರವಸೆ ನೀಡಿತ್ತು.   ಡಿಸೆಂಬರ್ 5ರಂದು ಟ್ವೀಟ್ ಮಾಡಿದ್ದ ಬಿಜೆಪಿಯ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಲ್ವಿಯಾ, “ಅಂತಹ ದುರದೃಷ್ಟಕರ ಜನರಿಗೆ ಪೌರತ್ವ ನೀಡುವ ಸಂಬಂಧ ನಾವು ಉದಾರ ಮನೋಭಾವ ತೋರಬೇಕು. ಮಾಜಿ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದರು.   ಅಡ್ವಾಣಿ ಹಾಗೂ ಹಿರಿಯ ನಾಯಕ ಪ್ರಮೋದ್ ಮಹಾಜನ್ ಅವರು ತಾಳ್ಮೆಯಿಂದ ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ವಿಡಿಯೋವನ್ನು ಕೂಡ ಬಿಜೆಪಿ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.   ವಿಶೇಷವೆಂದರೆ, ಇಂದಿನ ಮಣಿಪುರದ ರಾಜ್ಯಪಾಲರದ ಡಾ.ನಜ್ಮಾ ಹೆಪ್ತಲ್ಲಾ ಅವರು, ಅಂದು “ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರು ಕೂಡ ಶೋಷಣೆಗೊಳಗಾಗಿದ್ದಾರೆ” ಎಂಬ ಹೇಳಿಕೆ ನೀಡಿದ್ದಾರೆ.