ಬೆಳಗಾವಿ : ನೆರೆ ಸಂತ್ರರಿಗೆ ಪರಿಹಾರವನ್ನು ಸರಿಯಾಗಿ ನೀಡಿಲ್ಲ. ಹಾಗೂ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸರಕಾರ ನಿರ್ಲಕ್ಷ ತೋರುತ್ತಿರುವದನ್ನು ವಿರೋಧಿಸಿ ನಗರದಲ್ಲಿ ಗ್ರಾಮೀಣ ಭಾಗದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ನೂರಾರು ಸಂತ್ರಸ್ತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದರು.
ನಗರದಲ್ಲಿ ಶನಿವಾರ ಮಧ್ಯಾಹ್ನ ನೂರಾರು ಸಂಖ್ಯೆಯಲ್ಲಿ ಸೇರಿದ್ದ ನೆರೆ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೂಲಕ ಆಗಮಿಸಿ, ಕಚೇರಿ ಆವರಣದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿಯೊಂದನ್ನು ಸಲ್ಲಿಸಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನರು ಕೃಷಿಯನ್ನು ಅವಲಂಬಿತರಾಗಿದ್ದು, ಕಳೆದ ಅಗಷ್ಟ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಕ್ಷೇತ್ರದ ಜನರು ಬೆಳೆ, ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇದ್ದ ಆಸ್ತಿ ಬೆಳೆಗಳನ್ನು ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೆ ಪರದಾಡುವಂತೆ ಪರಿಸ್ಥಿತಿ ನಿಮರ್ಾಣವಾಗಿದೆ.
ಗ್ರಾಮೀಣ ಮತಕ್ಷೇತ್ರದಲ್ಲಿನ 7ರಿಂದ 8 ಸಾವಿರ ಮನೆಗಳಿಗೆ ಹಾನಿ ಉಂಟಾಗಿದೆ. ಇದರಲ್ಲಿ ಅಲ್ಪ ಪ್ರಮಾಣದ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದ್ದು, ಇನ್ನು ಸಂತ್ರಸ್ತರಿಗೆ ಬರಬೇಕಾದ ಹಣ ಬಾಕಿ ಇದೆ. ಈ ಹಿಂದೆ ಮನೆ ಹಾನಿಗೆ ಪರಿಹಾರ ನೀಡುವಂತೆ ಕೋರಲಾಗಿತ್ತು. ಆದರೆ ಸುಮಾರು 6 ತಿಂಗಳು ಕಳೆದರು ಇಲ್ಲಿಯವರೆಗೆ ಪರಿಹಾರ ನೀಡಿಲ್ಲ. ಕ್ಷೇತ್ರದಲ್ಲಿ ಉದ್ಯೋಗ, ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ಪರಿಹಾರ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇಂದಿನ ಪ್ರತಿಭಟನೆಯಲ್ಲಿ ತಾಪಂ ಅಧ್ಯಕ್ಷ ಶಂಕರಗೌಡಾ ಪಾಟೀಲ, ಸಿ.ಸಿ.ಪಾಟೀಲ, ಮಾಜಿ ಬುಡಾ ಅಧ್ಯಕ್ಷ ಕದಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಿವೃತ್ತ ಸರಕಾರಿ ನೌಕರರಿಂದ 19ರಂದು ವಿಧಾನಸೌಧ ಚಲೋ
ಬೆಳಗಾವಿ : ಮೂಲಭೂತ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಿವೃತ್ತ ರಾಜ್ಯ ಸರಕಾರಿ ನೌಕರರ ಸಂಘದಿಂದ ಪೆ. 19ರಂದು ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ನೌಕರರ ಸಂಘದ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಎಸ್.ಜಿ. ಸಿದ್ನಾಳ ಇಂದಿಲ್ಲಿ ಹೇಳಿದರು.
ನಗರದ ನೌಕರರ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಸ್ಥಾಪನೆಯಾಗಿ ಸುಮಾರು 60 ವರ್ಷ ಗತಿಸಿದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ನಿವೃತ್ತ ನೌಕರು ಎಂಬ ಅಸಡ್ಡೆಯಿಂದ ಯಾವುದೇ ಸೌಲಭ್ಯ ನೀಡುತ್ತಿಲ್ಲ ಇದನ್ನು ವಿರೋಧಿಸಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪೆ. 19ರಂದು ಬೆಂಗಳೂರಿನಲ್ಲಿ ವಿಧಾನ ಸೌಧ ಚಲೋ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ರ್ಯಾಲಿಯನ್ನು ಬೆಂಗಳೂರು ನಗರದ ಸಂಗೊಳ್ಳಿ ರಾಯಣ್ಣಾ ವೃತ್ತದಿಂದ ಆನಂದರಾವ ವೃತ್ತದ ಮುಖಾಂತರ ಸಂಚರಿಸಿ ಪ್ರೀಡಂ ಪಾರ್ಕನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ ಎಂದರು.
ನಮ್ಮ ಸಂಘದ ವಿವಿಧ ಬೇಡಿಕೆಗಳಾದ ನಿವೃತ್ತ ನೌಕರರಿಗೆ ಸಂಜೀವಿನಿ ಯೋಜನೆಯನ್ನು ಮತ್ತು ನಗದು ರಹಿತ ಯೋಜನೆಯನ್ನು ಜಾರಿಗೊಳಿಸಬೇಕು, ನೆರೆ ರಾಜ್ಯಗಳಾದ ಕೇರಳ ಮತ್ತು ಮಹಾಷ್ಟ್ರಗಳಲ್ಲಿ ಜಾರಿಗೆ ತಂದಂತೆ ಮೂಲ ಪಿಂಚಣಿಯನ್ನು 75 ವರ್ಷ ವಯೋಮಿತಿ ಉಳ್ಳವರಿಗೆ ಶೇ. 15ರಷ್ಟು ಹೆಚ್ಚಿಸಬೇಕು, ಪ್ರಯಾಣ ದರದ ರಿಯಾಯಿತಿಯನ್ನು ಶೇ. 50ರಷ್ಟು ಹೆಚ್ಚಿಸಬೇಕು ಹಾಗೂ ನಿವೃತ್ತ ನೌಕರರ ಶವ ಸಂಸ್ಕಾರಕ್ಕೆ ಹತ್ತು ಸಾವಿರ ರೂ. ಭತ್ಯೆಯನ್ನು ಮಂಜೂರು ಮಾಡಬೇಕು, ರಿಯಾಯಿತಿ ದರದಲ್ಲಿ ನಿವೇಶನಗಳನ್ನು ಮಂಜೂರು ಮಾಡಬೇಕು ಎಂದರು.
ಆದಾಯ ತೆರಿಗೆಯಿಂದ ವಿನಾಯಿತಿ ಕೊಡಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರತ್ಯೇಕ ಕೌಂಟರಗಳನ್ನು ತೆರೆಯುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇಸಬೇಕು ಎಂದು ಒತ್ತಾಯಿಸಿದರು.; ಈ ಸಂದರ್ಭದಲ್ಲಿ ಎಂ. ಎಸ್.ಮುದಕವಿ, ವಿ.ಬಿ.ಮಡಿಯಾಳ, ಪ್ರಕಾಶ ಬಾಪಟ್, ಕೃಷ್ಣಾ ಹಿರಳೇಕರ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.