ವೀರಶೈವರು ಲಿಂಗದಾರಿಗಳಾಗಿ ಬದುಕಬೇಕು: ಡಾ.ಮಹಾದೇವ ಸ್ವಾಮಿಜೀ
ಕುಕನೂರು 12: ವೀರಶೈವರು ಸಮಾಜದಲ್ಲಿ ಲಿಂಗವಂತರಾಗಿ, ಆಚಾರ, ವಿಚಾರ ನಡೆತೆಯನ್ನು ಶುದ್ದವಾಗಿಟ್ಟುಕೊಂಡು ಧರ್ಮ ಜಾಗೃತರಾಗಿ ಜೀವನ ನಡೆಸಬೇಕು ಎಂದು ಕುಕನೂರು ಅನ್ನದಾನೀಶ್ವರ ಮಠದ ಡಾ.ಮಹಾದೇವ ಸ್ವಾಮಿಜೀ ಹೇಳಿದರು. ಅವರು ಕುಕನೂರ ತಾಲ್ಲೂಕಿನ ಹರಿಶಂಕರಬಂಡಿ ಗ್ರಾಮದಲ್ಲಿ ರೇಣುಕಾಚಾರ್ಯರ ಜಯಂತೋತ್ಸವದ ಅಂಗವಾಗಿ ಲಿಂಗಧಾರಣೆ ಕಾರ್ಯಕ್ರಮ ನೆರವೇರಿಸಿ, ಮಾತನಾಡುತ್ತಾ ಪ್ರತಿಯೊಂದು ಸಮಾಜದಲ್ಲಿ ಲಿಂಗಕ್ಕೆ ಮಹತ್ವವಿದೆ, ಆದಿ ಜಗದ್ಗುರು ರೇಣುಕರು ಕೇವಲ ಜಾತಿ ಮತಗಳಿಗೆ ಸಿಮೀತರಾದವರಲ್ಲಾ, ಅವರು ಇಡಿ ಮನುಕುಲಕ್ಕೆ ಧರ್ಮ ಭೋಧನೆ ಮಾಡಿ, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ವೇದದಂತೆ, ಆದಿ ಕಾಲದಲ್ಲಿಯೇ ಲಿಂಗಧಾರಣೆ ಮಾಡಿದ ಮಹಾಮಹೀಮರು ಇವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಲು ಮುಂದಾಗಬೇಕಿದೆ ಎಂದರು. ಇಂದಿನ ಯುಗದಲ್ಲಿ ದೇವರು, ಗುರು, ಹಿರಿಯರಿಗೆ ಗೌರವವೇ ಇಲ್ಲದಂತಾಗಿದೆ. ಸಮಾಜದಲ್ಲಿನ ಇಂದಿನ ಯುವ ಪೀಳಿಗೆ ಜಾಗೃತರಾಗಬೇಕು, ತಮ್ಮ ತಮ್ಮ ಧರ್ಮಗಳ ಬಗ್ಗೆ ಗೌರವ ಹೊಂದಬೇಕು, ಯಾವ ಧರ್ಮಗಳಲ್ಲೂ ದ್ವೇಷ, ಅಸೂಯೇ, ಮೋಸ ಮಾಡಿ ಬದುಕು ಎಂದು ಹೇಳಿಲ್ಲಾ, ಎಲ್ಲಾ ಧರ್ಮಗಳಲ್ಲೂ ಮಾನವ ಧರ್ಮವನ್ನು ಪ್ರೀತಿಸುವಂತೆ ಹೇಳಿವೆ, ಆದರೆ ಆಚರಣೆ ಬದಲಾಗಿರಬಹುದು, ಆಚಾರ ಬದಲಾಗಿರಬಹುದು, ಆದರೆ ಎಲ್ಲಾ ಧರ್ಮಗಳ ವಿಚಾರ ಒಂದೇ ಧರ್ಮಗಳ ಪಾಲನೆ ಎಂದು ಅವರು ಹೇಳಿದರು. ನಂತರ ಮಾತನಾಡಿದ ಕುಕನೂರಿನ ಸಂಗಮೇಶ ಕಲ್ಮಠ. ಹಣೆಯ ಮೇಲೆ, ಮೈಮೇಲೆ ವಿಭೂತಿ ಧರಿಸುವದರಿಂದ ಹಲವಾರು ಪ್ರಯೋಜನಗಳಿವೆ, ಅದರಿಂದ ಹಲವಾರು ಚರ್ಮ ಖಾಯಿಲೆಗಳು ದೂರ ಸರಿಯಲಿವೆ. ಸುಮ್ಮನೆ ವಿಭೂತಿ ಧಾರಣೆ ಮಾಡು ಎಂದರೇ ಯಾರು ಧರಿಸುವುದಿಲ್ಲಾ ಅದಕ್ಕೆ ಒಂದು ಆಚಾರವಿಟ್ಟು ಭಸ್ಮ ಧರಿಸಲು ತಿಳಿಸಲಾಗಿದೆ. ಅದರಂತೆ ಎದೆ ಮದ್ಯೆ ಆತ್ಮವಿದ್ದು ಅಲ್ಲಿ ಒಂದು ಲಿಂಗವನ್ನು ಧಾರಣೆ ಮಾಡಿದಲ್ಲಿ ಮುಕ್ತಿ ಪಡೆದು, ನಮಗೆ ಯಾವ ದಾರಿದ್ರ್ಯವು ತಗುಲದಂತೆ ಯಾವುದೇ ದುಷ್ಟ ಶಕ್ತಿ ನಮ್ಮ ಮೇಲೆ ಬರದಂತೆ ತಡೆಯಲು ಲಿಂಗಧಾರಣೆ ಮುಖ್ಯವಾಗಿದೆ ಎಂದರು.ಆದ್ದರಿಂದ ಪ್ರತಿಯೊಬ್ಬ ವೀರಶೈವ ಮಹಿಳೆಯರು ಪುರುಷರು ಭಸ್ಮ ಮತ್ತು ಲಿಂಗವನ್ನು ಕಡ್ಡಾಯವಾಗಿ ಧಾರಣೆ ಮಾಡಬೇಕು ಎಂದು ಕಿವಿ ಮಾತನ್ನು ಹೇಳಿದರು.ಈ ಸಂದರ್ಭದಲ್ಲಿ ಬಸಯ್ಯ ಕರಡಿ, ಶರಣಯ್ಯ ಗೋಡಿ, ಬಸಯಾಯ ನಿಟ್ಟಾಲಿ, ಸೋಮಯ್ಯ ಕಲ್ಮಠ, ಶೇಖರಯ್ಯ ಕೋರಗಲ್ ಮಠ, ಮುದಕಯ್ಯ, ಚನ್ನಬಸಯ್ಯ ದೇವರಾಳ, ಆನಂದ ಮಡಿವಾಳರ ಸೇರೀದಂತೆ ಭಕ್ತಾಧಿಗಳು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.