ಗದಗ : ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದು , ಪ್ರತಿಯೊಬ್ಬರೂ ಸ್ವಾಭಿಮಾನದ ಬದುಕು ನಡೆಸಲು ಚೆನ್ನಮ್ಮ ಪ್ರೇರಣೆಯಾಗಿದ್ದಾಳೆ ಎಂದು ರಾಜ್ಯದ ಗಣಿ , ಭೂ ವಿಜ್ಞಾನ , ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಅವರು ನುಡಿದರು.
ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಅಂಗವಾಗಿ ಜರುಗಿದ ಸರಳ ಸಮಾರಂಭದಲ್ಲಿ ರಾಣಿ ಚೆನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಪೂಜಾ ಗೌರವ ಸಲ್ಲಿಸಿ ಅವರು ಮಾತನಾಡಿದರು.
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮುಂಚೆಯೇ ಬ್ರಿಟಿಷರೊಡನೆ ಸಂಧಾನ ಮಾಡಿಕೊಳ್ಳದೇ ಹೋರಾಟ ಮಾಡಿ ಸ್ವಾಭಿಮಾನ ಸಂದೇಶವನ್ನು ಥ್ಯಾಕರೆಗೆ ಕಳುಹಿಸಿದರು. ಸ್ವಾತಂತ್ರ್ಯವೇ ಮುಖ್ಯ ಎಂದು ಅದಕ್ಕಾಗಿ ಪ್ರಾಣ ತೆತ್ತ ರಾಣಿ ಚೆನ್ನಮ್ಮಳ ಸ್ವಾತಂತ್ರ್ಯ ಹೋರಾಟದ ಕುರಿತು ಸರಿಯಾದ ಇತಿಹಾಸ ದಾಖಲಾಗುವ ಅವಶ್ಯಕತೆ ಇದೆ.
ರಾಣಿ ಚೆನ್ನಮ್ಮ ಅವರಿಂದ ಸ್ವಧರ್ಮ ನಿಷ್ಟೆ ಪರಧರ್ಮ ಸಹಿಷ್ಣುತೆ ನಾವು ಕಲಿಯಬೇಕಾಗಿದೆ ಬ್ರಿಟನ್ನಿನ ಲೈಬ್ರರಿಯಲ್ಲಿ ಈಗಲೂ ರಾಣಿ ಚೆನ್ನಮ್ಮಳ ಖಡ್ಗ ಹಾಗೂ ಯುದ್ಧ ಸಾಮಗ್ರಿಗಳು ಇದ್ದು , ಇವುಗಳನ್ನು ವಾಪಸ್ಸು ತರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಅಗತ್ಯದ ಕ್ರಮ ವಹಿಸಬೇಕು ಎಂದು ಸಚಿವ ಸಿ.ಸಿ.ಪಾಟೀಲ ಅವರು ತಿಳಿಸಿದರು.
ರಾಜ್ಯದಲ್ಲಿ ಮತ್ತೆ ನೆರೆ ಸಂಕಷ್ಟ ಪರಿಸ್ಥಿತಿ ಎದುರಾಗಿದ್ದು ರಾಜ್ಯ ಸರ್ಕಾರ ಈ ಅಪಾರ ಪ್ರಮಾಣದ ಹಾನಿ ನಡುವೆ ನೆರೆ ಸಂತ್ರಸ್ತರ ಬದುಕನ್ನು ಪುನ: ರೂಪಿಸಲು ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ಮಾಡುತ್ತಿದೆ. ಈ ಕುರಿತು ಟೀಕೆಗಳ ಬದಲಾಗಿ ಸರ್ವರೂ ಸಹಕಾರ ನೀಡಿ ಒಗ್ಗಟ್ಟಿನಿಂದ ಜನರ ನೋವಿಗೆ ಸ್ಪಂದಿಸುವ ಅಗತ್ಯವಿದೆ ಎಂದು ಸಚಿವ ಸಿ.ಸಿ.ಪಾಟೀಲ ನುಡಿದರು.
ಇದೇ ಸಂದರ್ಭದಲ್ಲಿ ಸಮಾರಂಭಕ್ಕೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಲು ನಿರ್ಧರಿಸಲಾಯಿತು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶ್ರೀನಾಥ ಜೋಶಿ, ಸಮುದಾಯದ ಜಯಶ್ರೀ ಉಗಲಾಟ, ಶಿವಲೀಲಾ ಅಕ್ಕಿ, ಪಾರ್ವತಿ ಮರಿಗೌಡ್ರ , ವೇದಿಕೆ ಮೇಲಿದ್ದರು. ಆಯುಷ್ ಇಲಾಖೆಯ ಅಧಿಕಾರಿ ಡಾ. ಸುಜಾತಾ ಪಾಟೀಲ, ಸಮಾಜದ ಮುಖಂಡರಾದ ವಿಜಯಕುಮಾರ್ ಗಡ್ಡಿ, ಮೋಹನ ಮಾಳಶೆಟ್ಟಿ, ಶಿವರಾಜಗೌಡ ಹಿರೇಮನಿ ಪಾಟೀಲ, ಅನಿಲ ಪಾಟೀಲ, ಶಿವರಾಜಗೌಡ ಶಿವನಗೌಡ , ಅಯ್ಯಪ್ಪ ಅಂಗಡಿ, ಅಜ್ಜನಗೌಡ ಹಿರೇಮನಿ ಪಾಟಿಲ, ಬಸವರಾಜ ಕುಂದಗೋಳ , ಮಹೇಶ ಕರಿಬಿಷ್ಟಿ , ಬಸವರಾಜ ಗಡ್ಡೆಪ್ಪನವರ, ಬಸವಗೌಡ ಸೂರಪ್ಪಗೌಡ , ಸುರೇಶ ಕೊಂಡಿಕೊಪ್ಪ, ವೀರೇಶ ತಾಳಿಕೋಟಿ, ಕುಮಾರ ಹೊಂಬಳ, ಶರಣಪ್ಪ ಗೊಳಗೊಳಕಿ, ಸೋಮು ತುಪ್ಪದ, ಜಯಶ್ರೀ ಅಣ್ಣಿಗೇರಿ, ಶಿವಲೀಲಾ ಉಮಚಗಿ, ಕಮಲಾಕ್ಷಿ ಬಳಿಶೆಟ್ರ , ಪ್ರೇಮಾ ದೇಶಪ್ಪನವರ, ಸುಮಾ ಪಾಟೀಲ, ಜ್ಯೋತಿ ಭರಮಗೌಡ್ರ , ಹೇಮಾ ಪೊಂಗಾಲಿಯಾ, ಪಾರ್ವತಿ ಪಟ್ಟಣಶೆಟ್ಟಿ, ಶಾರದಾ ಸಜ್ಜನರ , ವಿದ್ಯಾ ಗಂಜಿಹಾಳ, ಶಾಂತಾ ಮುಂದಿನಮನಿ, ಶುಭಾ ಕುಂದಗೋಳ, ಶಕುಂತಲಾ ಬಾಳಿಗೆರಿ, ಶರಣವ್ವ ಭಾವಿಕಟ್ಟಿ, ಕಮಲಾ ತಕ್ಕಲಕೋಟಿ, ಸಮಾಜದ ಗುರು ಹಿರಿಯರು, ಗಣ್ಯರು, ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕ ಸಿದ್ಧಲಿಂಗೇಶ ರಂಗಣ್ಣವರ ಸರ್ವರನ್ನು ಸ್ವಾಗತಿಸಿ ವಂದಿಸಿದರು.