ನೂರಾರು ವರ್ಷಗಳ ಹಿಂದೆ ಒಬ್ಬ ಸನ್ಯಾಸಿ ಮಾಡಿದ ಭಾಷಣದ ನೆನಪೊಂದು ಇವತ್ತಿಗೂ ಜನಮಾನಸದಲ್ಲಿ ಮಾಸದೆ, ಇನ್ನೂ ಹಾಗೇ ಇದೆ ಅಂದರೆ, ಅದು ಕೇವಲ ಒಂದು ಭಾಷಣ ಮಾತ್ರವಾಗಿರಲಿಲ್ಲ ಬದಲಾಗಿ ಅದರಲ್ಲಿ ಇಡೀ ಜಗತ್ತಿನ ಕಲ್ಯಾಣದ ಸಂದೇಶಗಳಿದ್ದವು. ಹಾಗಾಗಿ ಆ ದಿನವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ! ಸಂತರ ಸಂತ, ಮಹಾತ್ಮರ ಮಹಾತ್ಮ, ಮಹಾನ್ ದೇಶಭಕ್ತ ಸ್ವಾಮಿ ವಿವೇಕಾನಂದರನ್ನು ನೆನೆಸಿಕೊಂಡಾಗಲೆಲ್ಲ ನಮ್ಮಲ್ಲಿ ಸ್ವಾಭಿಮಾನ, ಉತ್ಸಾಹ ಹೆಚ್ಚುತ್ತದೆ. ಅಂತರಾಳದಲ್ಲಿ ದೇಶಭಕ್ತಿಯ ಅಲೆಗಳು ಸಾಗರದ ಅಲೆಗಳಂತೆ ಪುಟಿದೇಳುತ್ತವೆ. ಅಷ್ಟೊಂದು ಪ್ರೇರಣಾದಾಯಿ ವ್ಯಕ್ತಿ ಇವರು. 1947 ರಲ್ಲಿ ನಮಗೆ ಸಿಕ್ಕಿದ್ದು ಅದು ಕೇವಲ ರಾಜಕೀಯ ಸ್ವಾತಂತ್ರ್ಯ ಮಾತ್ರ. ಆದರೆ ಧಾಮರ್ಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಆಥರ್ಿಕವಾಗಿ ಮತ್ತು ರಾಜಕೀಯವಾಗಿ ಗುಲಾಮಿತನದಲ್ಲಿದ್ದಂತಹ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1893 ಸಪ್ಟೆಂಬರ್ 11 ರಂದು. ಅದು ಚಿಕಾಗೋದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದ ವೇದಿಕೆಯ ಮೇಲೆ. ಅದನ್ನು ತಂದು ಕೊಟ್ಟವರು ಸ್ವಾಮಿ ವಿವೇಕಾನಂದರು. ಹಾಗಾಗಿ ಅವರು 'ನವಯುಗಾಚಾರ್ಯ. ಇಡೀ ವಿಶ್ವವೇ ಸಂಚಲನಗೊಂಡು ಸರ್ವಶ್ರೇಷ್ಠ ಪರಿವರ್ತನೆ ಆಗಬಲ್ಲಂತಹ ಸಂದರ್ಭಗಳಿಗೆ ಆ ದೇವರು ಹೇಗೆಲ್ಲ ವೇದಿಕೆಯನ್ನು ಸಜ್ಜುಗೊಳಿಸಿ ಸ್ವಾಮಿ ವಿವೇಕಾನಂದರಂತಹ ಮಹಾತ್ಮರಲ್ಲಿ ಸಮ್ಮಿಲನಗೊಳ್ಳುತ್ತಾನೆ ನೋಡಿ. ನಾವೆಲ್ಲ ನಮ್ಮ ಕನಸುಗಳಿಗೆ ಒಂದಿಷ್ಟು ಅಡೆತಡೆಗಳು ಬಂದೊದಗಿಬಿಟ್ಟರೆ ಆ ಗುರಿಯನ್ನೇ ತ್ಯಜಿಸಿಬಿಡುತ್ತೇವೆ. ಆದರೆ ಸ್ವಾಮಿ ವಿವೇಕಾನಂದರು ಅಂದು ಹಾಗೆ ಮಾಡಲಿಲ್ಲ. ಸಾಕಷ್ಟು ಕಷ್ಟ ನೋವುಗಳನ್ನು ಮೆಟ್ಟಿನಿಂತು ಜಗತ್ತಿನೆದುರು ಸನಾತನ ಧರ್ಮದ ವೈಭವವನ್ನು ಸಾರಿಹೇಳಿ, ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದರು.
ಆಧ್ಯಾತ್ಮ ಎಂದರೆ ಕಷ್ಟದಲ್ಲಿರುವವರ ಕಣ್ಣೀರು ಒರೆಸಿ, ಸೇವೆಯಲ್ಲಿ ತೊಡಗುವುದೆಂದು ಅವಸಮ್ಮೇಳನದವರೆಗೂ ಅದು ಮಾನವೀಯತೆಯ ಮಹತ್ಕಾರ್ಯ. ಬಡವರನ್ನು ಕಂಡಾಗಲೆಲ್ಲ ಸ್ವಾಮೀಜಿಯವರ ಹೃದಯ ಮಿಡಿಯುತ್ತಿತ್ತು. ಹಾಗಾಗಿ ಬಡವರ ಉದ್ಧಾರಕ್ಕಾಗಿ ಪಣತೊಟ್ಟ ಆ ವೀರ ಸನ್ಯಾಸಿ ಇಡೀ ದೇಶಾದ್ಯಂತ ಬಡವರ ಊರುಗಳಿಗೆ ತೆರಳಿದರು. ಅಲ್ಲಿ ಅವರೊಂದಿಗೆ ಕಾಲ ಕಳೆದು ಅವರ ಕಷ್ಟ ನೋವುಗಳನ್ನು ಆಲಿಸಿದರು. ಸ್ವಾಮೀಜಿ ಪರಿವ್ರಾಜಕರಾಗಿ ಮಾಡಿದ ಮಹಾನ್ ಕಾರ್ಯವಿದು. ಬಡವರ, ದೀನ ದಲಿತರ ನೋವುಗಳನ್ನು ಆಲಿಸುತ್ತಿದ್ದ ಆ ಸಂದರ್ಭದಲ್ಲಿ ಅವರ ಎದೆಯಲ್ಲಿ ಎದ್ದಂತಹ ಅಲೆಗಳು ಹಿಂದೂ ಮಹಾ ಸಾಗರದ ಅಲೆಗಳಿಗಿಂತಲೂ ಪ್ರಬಲವಾಗಿದ್ದವು. ಸಾಗರದಲ್ಲಿ ಎದ್ದ ಅಲೆಗಳು ಕೇವಲ ಸಮುದ್ರದ ದಡದಲ್ಲಿ ಅಪ್ಪಳಿಸಬಹುದು, ಆದರೆ ವಿವೇಕಾನಂದರ ಎದೆಯಲ್ಲಿ ಎದ್ದ ಆ ಅಲೆಗಳು ಇಡೀ ಜಗತ್ತಲ್ಲೆಲ್ಲ ಅಪ್ಪಳಿಸಿ ಅಲ್ಲಿನ ಪಾಪವನ್ನು ತೊಳೆದಿವೆ, ಅವರ ಅಧರ್ಮವನ್ನು ತೊಳೆದಿವೆ. ವಿಶ್ವದ ಜನರಿಗೆ ಸ್ವಾಭಿಮಾನದ ಶಕ್ತಿಯನ್ನು ತುಂಬಿವೆ. ಹಾಗಾಗಿ ಅವರೊಬ್ಬ 'ವೀರ ವೇದಾಂತಿ'. ಕೇವಲ ತತ್ವಗಳಿಂದ ತನ್ನ ಬಡ ಜನರಿಗೆ ಮುಕ್ತಿದೊರೆಯುವುದಿಲ್ಲ. ಅವರಿಗೆ ಅನ್ನ ಬೇಕು, ವಸ್ತ್ರಬೇಕು, ಶಿಕ್ಷಣ ಬೇಕು, ಹಣ ಬೇಕು. ಅದಕ್ಕಾಗಿ ನಾನು ವಿದೇಶಗಳಿಗೆ ಹೋಗುತ್ತೇನೆ. ಅಲ್ಲಿ ಉಪನ್ಯಾಸಗಳನ್ನು ಕೊಟ್ಟು ಅಲ್ಲಿನ ಸಂಪತ್ತನ್ನು ಭಾರತಕ್ಕೆ ತಂದು ಇಲ್ಲಿನ ಗುಡಿಸಲುಗಳಲ್ಲಿರುವ ಬಡಜನರಿಗೆ ಅದನ್ನು ಹಂಚುತ್ತೇನೆ. ಆ ಮೂಲಕ ಒಂದು ಹೊಸ ಯುಗ ನಿಮರ್ಾಣವಾಗಬೇಕೆನ್ನುವ ಹಂಬಲ ಸ್ವಾಮೀಜಿಯದಾಗಿತ್ತು. 'ಕಡಿಜಜಟಿಛಿಜ ಠಜಿ ಟಟಿಜ' ಅಂತ ಹೇಳುತ್ತಾರಲ್ಲ ಅದಂತು ಸ್ವಾಮೀಜಿ ಅವರಲ್ಲಿ ಅದ್ಭುತವಾಗಿತ್ತು. ಯಾರಿಂದಾದರೂ ಅತ್ಯಂತ ಅವಹೇಳನಕಾರಿಯಾದ ಪ್ರಶ್ನೆಗಳು, ಟೀಕೆಗಳು ಬಂದಾಗಲೂ ಕಿಂಚಿತ್ತೂ ಕೊಪಗೊಳ್ಳದೆ ಸಂತೋಷದಿಂದ ಉತ್ತರಿಸುತ್ತಿದ್ದರು.
1893 ರ ಸಪ್ಟೆಂಬರ್ 11 ರಂದು ಅಮೇರಿಕಾದ ಚಿಕಾಗೋ ದಲ್ಲಿ ನಿಶ್ಚಯವಾಗಿದ್ದ ಸರ್ವಧರ್ಮ ಸಮ್ಮೇಳದಲ್ಲಿ ಭಾರತದಿಂದ ಹಿಂದೂ ಧರ್ಮದ ಪ್ರತಿನಿಧಿಯಾಗಿ ಸ್ವಾಮಿ ವಿವೇಕಾನಂದರೆ ಅದರಲ್ಲಿ ಭಾಗ ವಹಿಸಬೇಕೆಂಬುದು ನಿಶ್ಚಯವಾದಾಗ ಅಲ್ಲಿಗೆ ಹೋಗಲು ಸ್ವಾಮೀಜಿಯ ಬಳಿ ಹಣವಿರಲಿಲ್ಲ. ಖೇತ್ರಿ ಮಹಾರಾಜರ ಹಾಗೂ ಜನರ ಸಹಕಾರದಿಂದ ಹಣವನ್ನು ಹೊಂದಿಸಿಕೊಂಡು ಅಮೆರಿಕಾದತ್ತ ಪ್ರಯಾಣ ಬೆಳೆಸುತ್ತಾರೆ. ಸ್ವಾಮೀಜಿ ಅಮೆರಿಕ ತಲುಪಿದಾಗ ಸಮ್ಮೇಳನ ಇನ್ನೂ ಒಂದುವರೆ ತಿಂಗಳುಗಳ ಕಾಲ ಬಾಕಿ ಇತ್ತು. ಅವರ ಬಳಿ ಇದ್ದ ಹಣ ನಿಧಾನವಾಗಿ ಖಚರ್ಾಗತೊಡಗಿತು. 'ನಮ್ಮವರಾರು' ಇಲ್ಲದ ಈ ದೇಶದಲ್ಲಿ ಅಷ್ಟು ದಿನಗಳ ಕಾಲ ಎಲ್ಲಿರುವುದು? ಎಂದು ಆಲೋಚಿಸುತ್ತ ಇದ್ದ ಆ ಸಂತ, ಒಂದು ಕ್ಷಣ ಸಂತೆಯಲ್ಲಿ ಕಳೆದ ಹೋದ ಮಗುವಿನ ಹಾಗೆ ನಿಂತು ಬಿಟ್ಟರು. ಅದೇ ಸಂದರ್ಭದಲ್ಲಿ ಈ ಕಾಷಾಯಧಾರಿ ಸಂತನನ್ನು ಕಂಡ ಜೋಸೆಫ್ ಕ್ಯಾಥರೀನ್ ಅನ್ನೋ ಓರ್ವ ಕ್ಯಾಥೊಲಿಕ್ ಕ್ರಿಶ್ಚಿಯನ್ ಧರ್ಮದ ಮಹಿಳೆ ಅವರನ್ನು ಕೇಳುತ್ತಾಳೆ; ನಿಮ್ಮನ್ನು ನೋಡಿದರೆ ನೀವು ಭಾರತದ ಸನ್ಯಾಸಿ ಹಾಗೆಯೇ ಕಾಣಿಸುತ್ತಿದ್ದಿರಿ! ನಿಮ್ಮಲ್ಲಿ ಏನೋ ಒಂಥರಾ ವಿಶೇಷತೆ ಇರಬಹುದು ಅಂತ ನನಗನಿಸುತ್ತಿದೆ ಎನ್ನುತ್ತಾಳೆ, ಸ್ವಾಮೀಜಿ ತಕ್ಷಣ ಥಿಜ ' ಚಿಟ ಟಿಜಚಿಟಿ ಟಠಟಿಞ' ಎಂದು ಹೇಳುತ್ತ, ತಾವು ಬಂದ ಉದ್ದೇಶಗಳನ್ನ ಸ್ಪಷ್ಟಪಡಿಸಿದರು. ಆಗ ಅವಳು ವಿವೇಕಾನಂದರನ್ನು ಬೋಸ್ಟನ್ ನಗರದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿ ಸಮ್ಮೇಳನದವರೆಗೂ ಅವರನ್ನು ಉಪಚರಿಸುತ್ತಾಳೆ. ಸಮ್ಮೇಳನ ಇನ್ನೂ ಹತ್ತಾರು ದಿನ ಬಾಕಿ ಇರುವಾಗ ಆ ಮಹಿಳೆ ಈ ಸಂತನ ವಿಶೇಷತೆಯ ಬಗ್ಗೆ ತಿಳಿಯುವ ಕೂತುಹಲದಿಂದಾಗಿ ತನಗೆ ಚಿರಪರಿಚಿತವಿರುವ ಅಮೇರಿಕಾದ ಹಾರ್ವಡರ್್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾನ್ ಹೆನ್ರಿ ರೈಟ್ಸ್ ರವರನ್ನು ತನ್ನ ಮನೆಗೆ ಆಹ್ವಾನಿಸಿ ವಿವೇಕಾನಂದರನ್ನು ಪರಿಚಯಿಸುತ್ತಾಳೆ. ವಿವೇಕಾನಂದರೊಂದಿಗೆ ಹತ್ತು ನಿಮಿಷಗಳ ಕಾಲ ಮಾತನಾಡಿ ಹೊಗಲು ಬಂದಿದ್ದ ಆ ಪ್ರೊಫೆಸರ್, ಸ್ವಾಮೀಜಿ ಅವರೊಂದಿಗೆ ಮಾತನಾಡುತ್ತ ಇಡೀ ದಿನವನ್ನೇ ಅವರೊಂದಿಗೆ ಕಳೆದುಬಿಟ್ಟರು. ವಾಪಾಸ್ ಹೋಗುವ ಕೊನೆಯ ಸಂದರ್ಭದಲ್ಲಿ ಆ ಪ್ರೊಫೆಸರ್ ಜೋಸೆಫ್ ಕ್ಯಾಥರೀನಳಿಗೆ ಈ ರೀತಿ ಹೇಳುತ್ತಾರೆ. " ಖಟಿಛಿಜ 400 ಥಿಜಚಿಡಿ ಠಟಿ ಣಜ ಟಚಿಟಿಜ ಠಜಿ ಂಟಜಡಿಛಿಚಿ ತಿಜ ಛಿಠಣಟಜ ಟಿಠಣ ಚಿತಿ ಚಿ ಠಿಜಡಿಠಟಿ ಟಞಜ ತಿಚಿಟ ಗಿತಜಞಚಿಟಿಚಿಟಿಜಚಿ. ಊ ಟಿಣಜಟಟಜಛಿಣ ರಡಿಜಚಿಣಜಡಿ ಣಚಿಟಿ ಚಿಟಟ ಠಣಡಿ ಟಿಣಜಟಟಜಛಿಣಣಚಿಟ ಠಜಿ ಂಟಜಡಿಛಿಚಿ. ಜಿ ಥಿಠಣ ತಿಟಟ ಠಿಣಣ ಚಿಟಟ ಠಣಡಿ ಚಿಟಜಡಿಛಿಚಿಟಿ ಠಿಡಿಠಜಿಜಠಡಿ, ರಡಿಜಚಿಣ ಟಿಣಜಟಟಜಛಿಣಣಚಿಟ ಠಟಿ ಠಟಿಜ ಜಜ ಚಿಟಿಜ ತಿಚಿಟ ಗಿತಜಞಚಿಟಿಚಿಟಿಜಚಿ ಠಟಿ ಠಣಜಡಿ ಜಜ ಟಿಣಜಟಟಜಛಿಣ ಜಿಚಿಡಿ ರಡಿಜಚಿಣಜಡಿ ಣಚಿಟಿ ಚಿಟಟ ಠಣಜಡಿ". ಕಳೆದ ನಾಲ್ಕುನೂರು ವರ್ಷಗಳ ಅಮೇರಿಕಾದ ಇತಿಹಾಸದಲ್ಲಿ ಇಂತಹ ಅದ್ಭುತ ಜ್ಞಾನ ಇರುವ ವ್ಯಕ್ತಿಯೊಬ್ಬ ಅಮೇರಿಕಾದ ಭೂಮಿಯ ಮೇಲೆ ತಿರುಗಾಡಿರಲಿಲ್ಲ. ಅಮೇರಿಕಾದಲ್ಲಿ ಬೌದ್ಧಿಕ ಸಾಮಥ್ರ್ಯ ವಿರುವ ಎಲ್ಲಾ ವ್ಯಕ್ತಿಗಳನ್ನು ಒಂದು ತಕ್ಕಡಿಯಲ್ಲಿ ಹಾಕಿ, ಇನ್ನೊಂದು ತಕ್ಕಡಿಯಲ್ಲಿ ವಿವೇಕಾನಂದರನ್ನು ಹಾಕಿದರೆ ವಿವೇಕಾನಂದರ ಬೌದ್ಧಿಕ ಮಟ್ಟದ ತೂಕವೇ ಹೆಚ್ಚಾಗುತ್ತದೆ". ಎಂಬ ಮಾತನ್ನು ಹೇಳಿ ಹೊರಟು ಹೋದರು.
ಆ ಸರ್ವಧರ್ಮ ಸಮ್ಮೇಳನದ ದಿನ ಹತ್ತಿರಬರುತ್ತಿದ್ದಂತೆ ಆ ಸಮ್ಮೇಳನದಲ್ಲಿ ನೀವು ಮಾತನಾಡಲು ಸಾಧ್ಯವಿಲ್ಲ. ಸ್ಪೀಕರ್ ಗಳ ಸೂಚನಾ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದಾಗ ಭಾರತದಿಂದ ನೂರಾರು ಮೈಲುಗಳವರೆಗೆ, ತಿಂಗಳಾನುಗಟ್ಟಲೆ ಪ್ರವಾಸದ ನಂತರ ಇಲ್ಲಿಯವರೆಗೆ ಬಂದಿದ್ದು ವ್ಯರ್ಥವಾಗಿ ಬಿಡುತ್ತದೆ ಅಂತ ಒಂದು ಕ್ಷಣ ಸ್ವಾಮೀಜಿಗೆ ಅನಿಸಿಬಿಟ್ಟಿತು. ಆಗ ಸ್ವಾಮೀಜಿ ತಮಗೆ ಪರಿಚಿತರಿರುವ ಪ್ರಾಧ್ಯಾಪಕ ಜಾನ್ ಹೆನ್ರಿ ರೈಟ್ ರವರ ಬಳಿ ವಿಷಯವನ್ನು ಹೇಳುತ್ತಾರೆ. ಅದಕ್ಕೆ ಅವರು ಸ್ವಾಮೀಜಿಯ ಜ್ಞಾನ, ಪ್ರೇಮಮಯ ಹೃದಯವನ್ನು ಕಂಡು 'ಸೂರ್ಯನಿಗೆ ಈ ಜಗತ್ತನ್ನ ಬೆಳಗೊದಕ್ಕೆ ಏನಿದೆ ಅಧಿಕಾರ? ಅಂತ ಪ್ರಶ್ನೆಯನ್ನ ಕೇಳುವುದು, ನಿಮಗೆ ಪರಿಚಯ ಪತ್ರ ಕೇಳುವುದು ಒಂದೆ ಎಂಬುದಾಗಿ ಹೇಳುತ್ತಾ, ನಿಮಗಲ್ಲದೆ ಇನ್ಯಾರಿಗೆ ಅರ್ಹತಾ ಪತ್ರ ನೀಡಲು ಸಾಧ್ಯ? ಎಂದವರೆ ಪರಿಚಯ ಪತ್ರವನ್ನು ಬರೆದುಕೊಟ್ಟರು.
1893 ರರ ಸಪ್ಟೆಂಬರ್ 11 ರಂದು ಸರ್ವಧರ್ಮ ಸಮ್ಮೇಳನ ಆರಂಭವಾದಾಗ ಕಿಕ್ಕಿರಿದು ತುಂಬಿದ ಜನರ ಆ ಬೃಹತ್ ಸಭೆಯಲ್ಲಿ ಏಳು ಸಾವಿರಕ್ಕೂ ಅಧಿಕ ಜನ ಪ್ರೇಕ್ಷಕರಿದ್ದರು. ಮೊದಲ ಹಾಗೂ ಎರಡನೇ ಅವಧಿಯೂ ಮುಗಿಯಿತು. ಆಗಲೂ ಸ್ವಾಮೀಜಿ ಮಾತನಾಡಲಿಕ್ಕಾಗಿ ಏಳಲೇ ಇಲ್ಲ. ಮೂರನೆಯ ಹಾಗೂ ಕೊನೆಯ ಅವಧಿಯ ಕೊನೆಗೆ ಕಾರ್ಯಕ್ರಮದ ಸಭಿಕರು ಸ್ವಾಮೀಜಿ ಅವರಿಗೆ ಹೇಳುತ್ತಾರೆ, ಇದು ಕೊನೆಯ ಅವಧಿ ಈಗ ನೀವು ಮಾತನಾಡದಿದ್ದರೆ ನಿಮಗೆ ಅವಕಾಶವೇ ಇಲ್ಲ ಎಂದಾಕ್ಷಣ, ಎದ್ದು ನಿಂತ ಸ್ವಾಮಿ ವಿವೇಕಾನಂದರು ಕೇವಲ ಐದೇ ಐದು ಪದಗಳಿಂದ ವಿಶ್ವದ ಅಸಂಖ್ಯ ಮನಸ್ಸುಗಳನ್ನು ಗೆದ್ದುಬಿಟ್ಟರು. 'ಖಣಜಡಿ ಚಿಟಿಜ ಛಡಿಠಣಜಡಿ ಠಜಿ ಂಟಜಡಿಛಿಚಿ' ಎಂದು ಉದ್ಗರಿಸುತ್ತಿದ್ದಂತೆ ಕಿವಿಗಡಚಿಕ್ಕುವಂತ ಚಪ್ಪಾಳೆಯ ಕರತಾಡನ...!! ಅಲ್ಲಿ ನೆರದಿದ್ದ ಹೆಣ್ಣುಮಕ್ಕಳ ಕಣ್ಣಲ್ಲಿ ಆನಂದಾಶ್ರು! ಅವರನ್ನು ಹತ್ತಿರದಿಂದ ನೋಡಬೇಕೆಂದು ಕುಚರ್ಿ, ಬೆಂಚುಗಳನ್ನು ಹಾರಿಕೊಂಡು ಬಂದ ಸಾವಿರಾರು ಮನಸ್ಸುಗಳು ಕ್ಷಣಾರ್ಧದಲ್ಲಿ ಸ್ವಚ್ಚಂದವಾಗಿಬಿಟ್ಟವು.! ಅಮೇರಿಕಾದ ಜನರಿಗೆ 'ಸೋದರ-ಸೋದರಿ' ಎಂಬ ಶಬ್ದ ಪರಿಚಯವಿಲ್ಲವೆಂದೇನಲ್ಲ. ವಿವೇಕಾನಂದರು ಅದನ್ನು ಹೇಳುವಾಗ ಅವರಲ್ಲಿದ್ದ ಭಾವುಕತೆ, ಅವರ ಹೃದಯಾಂತರಾಳದಿಂದ ಹೊರಡುತ್ತಿದ್ದ ಮಾನವೀಯ ಪ್ರೇಮ, ಅವರ ಕಣ್ಣುಗಳಲ್ಲಿದ್ದ ಕಾಂತಿ, ತೇಜಸ್ಸು, ಮುಖದಲ್ಲಿನ ಗಂಭಿರ ಭಾವದ ಜತೆಗೆ ಮಂದಹಾಸ, ಈ ಎಲ್ಲಾ ಗುಣಗಳಿಂದಲೇ ಆ ಜನರ ಮನಸ್ಸುಗಳನ್ನು ಸೆಳೆಯಲು ಸಾಧ್ಯವಾಯಿತು. ಭಾಷಣದಲ್ಲಿ ಅವರು ಭಾರತದ ಅಂತಃಸತ್ವವನ್ನು ಪರಿಚಯಿಸಿ ಕೊಟ್ಟ ಬಗೆ, ಸನಾತನ ಧರ್ಮದ ಮಹಿಮೆಯನ್ನು, ಮಾನವೀಯ ಮೌಲ್ಯದ ಅಂಶಗಳನ್ನು ಸ್ಥೂಲವಾಗಿ ಪರಿಚಯಿಸಿದರ ಪರಿಣಾಮವೇ ಭಾರತದ ಭಾಗ್ಯೋದಯಕ್ಕೆ ನಾಂದಿ ಯಾಯಿತು. ಜಗತ್ತು ನಮ್ಮನ್ನು ನೋಡುವ ದೃಷ್ಟಿಕೋನಗಳೇ ಬದಲಾದವು. ಆ ಭಾಷಣದ ನಂತರ ಸ್ವಾಮೀಜಿ ಅವರಿಗೆ ಇಡೀ ಅಮೇರಿಕಾದ್ಯಂತ ಸಾಕಷ್ಟು ಕಡೆಗಳಲ್ಲಿ ಭಾಷಣದ ಆಹ್ವಾನಗಳು ಬಂದವು. ಆ ಒಂದೇ ದಿನದಲ್ಲಿ ಸ್ವಾಮೀಜಿ ವಿಶ್ವದ ಹೀರೊ ಆಗಿ ಬಿಟ್ಟಿದ್ದರು. ವಿವೇಕಾನಂದರು ಅಮೇರಿಕಾಕ್ಕೆ ಬಂದಿದ್ದು ಖ್ಯಾತಿ ಗಳಿಸಲು ಅಲ್ಲ. ಅವರು ಬಂದದ್ದು, ಯುರೋಪಿಯನ್ನರು ಭಾರತ ಮತ್ತು ಭಾರತೀಯರ ಬಗ್ಗೆ ಮಾಡುತ್ತಿದ್ದ ಅಪಪ್ರಚಾರಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಕ್ಕಾಗಿ. 'ಭಾರತೀಯರೆಂದರೆ ಅಜ್ಞಾನಿಗಳಲ್ಲ, ಅವರು ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡಬಲ್ಲ ಅಮೃತ ಪುತ್ರರು' ಎಂದು ಸಾರಲು. ಯಾವ ಭಾರತವನ್ನು ಅಮೆರಿಕನ್ನರು ಅಜ್ಞಾನದ, ಬಡತನದ, ಮೂಢನಂಬಿಕೆಗಳ ದೇಶ ಎಂದು ಕರೆಯುತ್ತಿದ್ದರೋ, ಅದೇ ಅಮೆರಿಕನ್ನರು ಸ್ವಾಮೀಜಿ ಭಾಷಣಗಳ ಬಳಿಕ ಭಾರತದಿಂದ ನಾವು ಕಲಿಯುವುದು ತುಂಬ ಇದೆ, ಅಲ್ಲಿನ ಸತ್ಯ ಸಾಮಥ್ರ್ಯಗಳು ನಮ್ಮನ್ನು ದೃಢಗೊಳಿಸಬಲ್ಲವು ಎಂಬುದನ್ನು ನಂಬಿದರು. ನಂತರ ವಿವೇಕಾನಂದರು ಅಮೇರಿಕಾದಲ್ಲಿ ಅಸಂಖ್ಯಾತ ಅನುಯಾಯಿಗಳನ್ನು ಹೊಂದಿದರು. ಪ್ರಖರ ವಾಗ್ಮಿ ಪಂಡಿತರೆಂದು ಕರೆಯಿಸಿ ಕೊಂಡವರೆಲ್ಲರು ಇವರಿಗೆ ತಲೆಬಾಗಿ 'ನಿಮ್ಮ ಪ್ರತಿಯೊಂದು ಮಾತುಗಳೂ ಹೊಸ ಶಕ್ತಿಯನ್ನು ಕೊಡುತ್ತವೆ' ಎಂದರು. ಧರ್ಮಗಳ ಹೆಸರಲ್ಲಿ ಸಿಕ್ಕಸಿಕ್ಕವರು ಏನೇನೋ ಹೇಳಿ ಮನಸ್ಸುಗಳನ್ನು ವಿಭಜಿಸಿ, ಜನರ ದಿಕ್ಕನ್ನು ತಪ್ಪಿಸುತ್ತಿದ್ದರಲ್ಲ ಅಂಥ ಸಂದರ್ಭದಲ್ಲಿ ಸ್ವಾಮೀಜಿ ವಿಶ್ವಧರ್ಮದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಮೂಡಿಸಿ, 'ನಾವೆಲ್ಲ ಒಂದೇ' ಎಂಬ ಸಾಮರಸ್ಯದ ಭಾವನೆಯನ್ನು ಅಲ್ಲಿ ನಿಮರ್ಿಸಿದರು.
ವಿಶ್ವಧರ್ಮ ಎಂದರೆ ಅದು ದೇಶ, ಕಾಲಗಳ ಮಿತಿ ಮೀರಬೇಕು. ಆ ಧರ್ಮದ ಬೆಳಕು ಕೃಷ್ಣನ ಅನುಯಾಯಿಗಳ ಮೇಲೆ, ಪಾಪಿಗಳ ಮೇಲೆ, ಕ್ರೈಸ್ತನ ಅನುಯಾಯಿಗಳ ಮೇಲೆ, ಪುಣ್ಯವಂತರ ಮೇಲೆ ಸಮವಾಗಿ ಬೀಳಬೇಕು. ದೇಶದ ಸುಧಾರಣೆ ಅಭಿವೃದ್ಧಿಗೂ ಅಪಾರ ಅವಕಾಶ ಹೊಂದಿರಬೇಕು. ಸರ್ವರಿಗೂ ಆಶ್ರಯವನ್ನು ನೀಡು ವಂತಹದ್ದಾಗಿರಬೇಕು. ಎಂಬ ವಿವೇಕಾನಂದರ ಮಾತುಗಳು ಎಷ್ಟೊಂದು ಅರ್ಥಪೂರ್ಣ!
ಒಂದು ಭಾಷಣದಲ್ಲಿ ಸ್ವಾಮೀಜಿ ಹೇಳುತ್ತಾರೆ. 'ಮನುಕುಲದ ಸೇವೆ ಮಾಡಲಾಗದ, ನೊಂದವರ ಕಣ್ಣೀರು ಒರೆಸಲಾಗದ ಅಧ್ಯಾತ್ಮಕ್ಕೆ ಅರ್ಥ ಇಲ್ಲ. 'ನಾನೊಬ್ಬ ಸನ್ಯಾಸಿ. ಆದರೆ ಒಬ್ಬ ವಿಧವೆಯ ಕಣ್ಣೀರು ಒರೆಸಲಾಗದ ಅಥವಾ ಅನಾಥ ಶಿಶುವಿಗೆ ಒಂದು ತುತ್ತು ಅನ್ನ ಉಣಿಸಲಾರದ ದೇವರಲ್ಲೂ, ಧರ್ಮದಲ್ಲೂ ನನಗೆ ನಂಬಿಕೆ ಇಲ್ಲ. ನೀವು ನಿಮ್ಮ ಧರ್ಮವೆಂದು ತುಂಬ ಜಂಭದಿಂದ ಹೇಳಿಕೊಳ್ಳುತ್ತಿರೋ ಅದನ್ನು ಅನುಷ್ಠಾನಕ್ಕೆ ತನ್ನಿ ಎಂದು ಹೇಳಿದ ಆ ಮಾತುಗಳು ಜನರ ಹೃದಯವನ್ನು ಸ್ಪಶರ್ಿಸಿದ್ದವು. ಸ್ವಾಮೀಜಿಯವ ಗಟ್ಟಿತನ ಹೇಗಿತ್ತೆಂದರೆ, ಧರ್ಮದ ಹೆಸರಲ್ಲಿ ತಪ್ಪು ಮಾಡಿದ ಯಾರೊಬ್ಬರನ್ನೂ ಸ್ವಾಮೀಜಿ ಬಿಡುತ್ತಿರಲಿಲ್ಲ, ಸ್ವತಃ ತಪ್ಪಿತಸ್ಥ ಸನ್ಯಾಸಿಗಳ ಬಗ್ಗೆ ಅವರು ಹೇಳುತ್ತಾರೆ. 'ಸನ್ಯಾಸಿಗಳಾದ ನಾವು ಏನು ಮಾಡುತ್ತಿದ್ದೇವೆ! ಮೂರ್ಖ ಜನರ ತಾಮಸ ಆತಿಥ್ಯದಿಂದ ಉದರ ಪೋಷಣೆ ಮಾಡಿಕೊಳ್ಳುತ್ತಾ ಅಲೆಯುತ್ತಿರುವ ಲಕ್ಷಾಂತರ ಸನ್ಯಾಸಿಗಳು ನಾವೇನು ಮಾಡಿದ್ದೇವೆ! ತತ್ವ ಬೋಧನೆ, ತತ್ವ ಬೋಧನೆ ಛೀ ಛೀ ವೈರಾಗಿಗಳೇ, ನಿಮ್ಮ ತತ್ವ ಬೋಧನೆಗೆ ಬೆಂಕಿ ಬೀಳಲಿ. ಹೊಟ್ಟೆಗಿಲ್ಲದೆ ಕಂಗೆಟ್ಟಿರುವ ದೇಶದಲ್ಲಿ ನಿಮ್ಮ ಧರ್ಮ ಬೋಧನೆ ಯಾರಿಗೆ ಬೇಕಿದೆ...!! ಆಹಾ ವೇದ ಮಾತೇ ನಿನ್ನ ಈ ಸನ್ಯಾಸಿಗಳ ಲೀಲೆಯನ್ನು ನೋಡು, ಕಾಲಡಿ ಭೂಮಿಯನ್ನು ಹಿಡಿಯಲಾಗದ ಅಶಕ್ತರಿಗೆ ಅನಂತ ಆಕಾಶವನ್ನು ತೋರಿಸಿಬಿಡುತ್ತಿದ್ದೇವೆ'. ಎಂದು ಉದ್ಘರಿಸಿದ ಸ್ವಾಮೀಜಿಯ ಆ ದಿಟ್ಟತನವನ್ನು ಮೆಚ್ಚಲೇಬೇಕು.
ಧರ್ಮದ ಜೊತೆಗೆ ಬಹು ಮುಖ್ಯವಾಗಿ ಶಕ್ತಿ ಬೇಕು, ಹಣ ಬೇಕು, ತಂತ್ರಜ್ಞಾನ ಬೇಕು. ಪಾಶ್ಚಿಮಾತ್ಯದ ತಂತ್ರಜ್ಞಾನ ಹಾಗೂ ಭಾರತದ ಆಧ್ಯಾತ್ಮ ಎರಡನ್ನೂ ಕೂಡಿಸಿ ಹೊಸ ಜಗತ್ತನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ ಎಂದಿದ್ದ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿದ್ದಾಗಲೇ ಮೈಸೂರಿನ ಮಹಾರಾಜ ಜಯಚಾಸದಾಜೇಂದ್ರ ಒಡೆಯರ್ ರಿಗೊಂದು ಪತ್ರ ಬರೆದು ಅದರಲ್ಲಿ ನೀವು ಬಡವರ ಕಲ್ಯಾಣಕ್ಕಾಗಿ, ಅವರ ಉದ್ದಾರಕ್ಕಾಗಿ ಏನನ್ನಾದರೂ ಮಾಡಿ ಆಗ ಅದನ್ನು ನೋಡಲು ನಾನು ಬರುತ್ತೇನೆ'.ಸ್ವಾಮೀಜಿಯ ಆ ಪತ್ರದ ಪರಿಣಾಮವಾಗಿ ಅರಸರು, ಕೆ.ಆರ್ ಎಸ್, ಮೈಸೂರು ವಿಶ್ವವಿದ್ಯಾಲಯ, ಭದ್ರಾವತಿಯಲ್ಲಿ ಉಕ್ಕಿನ ಕಾಖರ್ಾನೆ, ಜೋಗದಲ್ಲಿ ವಿದ್ಯುತ್ ಸ್ಥಾವರವನ್ನು ಪ್ರಾರಂಭಿಸಿದರು. ಜೇಮಸೇಠ್ಜೀ ಟಾಟಾರಿಗೆ ವಿವೇಕಾನಂದರು ಹೇಳಿದ ಒಂದು ಮಾತಿನ ಮಹತ್ವದ ಪರಿಣಾಮವಾಗಿ ಬೆಂಗಳೂರಿನಲ್ಲಿ 'ಟಿಜಚಿಟಿ ಟಿಣಣಣಣಜ ಠಜಿ ಛಿಜಟಿಛಿಜ' ಪ್ರಾರಂಭವಾಯಿತು. ವಿವೇಕಾನಂದರಿಂದ ಪ್ರೇರಿತರಾದ ಅದೆಷ್ಟೋ ಸಂಘ ಸೇವಾ ಸಂಸ್ಥೆಗಳು, ವಿವೇಕಾನಂದರ ಹೆಸರಿನ ಮೂಲಕ ಬಡವರ ಸೇವೆಯಲ್ಲಿ ಸನ್ನದ್ಧವಾಗಿವೆ. ಯುವಕರ ಪಡೆಗಳಂತೂ ದೇಶದ ಮೂಲೆ ಮೂಲೆಗಳಿಗೆ ತೆರಳಿ ಬಡವರ ಕಣ್ಣಿರು ಒರೆಸುತ್ತಿದ್ದಾರೆ. ದೊಡ್ಡ ಡೊಡ್ಡ ವ್ಯಕ್ತಿಗಳು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು ವಿದೇಶದ ಗಣ್ಯವ್ಯಕ್ತಿಗಳು ವಿವೇಕಾನಂದರಿಂದ ಸಾಕಷ್ಟು ಸ್ಪೂತರ್ಿ ಗೊಂಡಿದ್ದಾರೆ. ಫ್ರೆಂಚ್ ದೇಶದ ನೊಬೆಲ್ ಪುರಸ್ಕೃತ, ಖ್ಯಾತ ನಾಟಕ ಕಾದಂಬರಿಕಾರ ರೋಮಿ ರೊಲ್ಯಾಂಡ್ ಹಾಗೂ ಭಾರತದ ನೋಬೆಲ್ ಪುರಸ್ಕೃತರು ಆದಂತಹ ರವೀಂದ್ರನಾಥ ಟ್ಯಾಗೋರ್ ಈ ಈರ್ವ ದಿಗ್ಗಜರ ಆಕಸ್ಮಿಕ ಭೇಟಿಯ ಸಂದರ್ಭವೊಂದು ಚಚರ್ೆಯತ್ತ ಸಾಗುತ್ತದೆ, ಆಗ ರೋಮಿ ರೊಲ್ಯಾಂಡ್ ಟ್ಯಾಗೋರ್ ಅವರಿಗೆ ಕೇಳುತ್ತಾರೆ, ನಾನು ಭಾರತದ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಶಯ ಇದೆ. ಅದಕ್ಕೆ ಯಾವ ಪುಸ್ತ ಅಧ್ಯಯನ ಮಾಡಬೇಕು? ಅದಕ್ಕೆ ಟ್ಯಾಗೋರರು "ಜಿ ಥಿಠಣ ತಿಚಿಟಿಣ ಣಠ ಞಟಿಠತಿ ಟಿಜಚಿ, ಣಣಜಥಿ ತಿಚಿಟ ಗಿತಜಞಚಿಟಿಚಿಟಿಜಚಿ. ಟಿ ಟ ಜತಜಡಿಥಿಣಟಿರ' ಠಿಠಣತಜ ಟಿಠಣಟಿರ ಟಿಜರಚಿಣತಜ". ಎನ್ನುತ್ತಾರೆ. ಅಂತಹ ನೊಬೆಲ್ ಪುರಸ್ಕೃತರೇ ಸ್ವಾಮಿ ವಿವೇಕಾನಂದರ ಬಗ್ಗೆ ಎಷ್ಟೊಂದು ಸಮ್ಮೋಹಿತರಾಗುತ್ತಾರೆ. "ಖಿಜ ಟಜಿಜ ಠಜಿ ಗಿತಜಞಚಿಟಿಚಿಟಿಜಚಿ ಚಿಟಿಜ ಣಜ ಣಟಿತಜಡಿಚಿಟ ರಠಠಿಜಟ" ಎಂಬ ಪುಸ್ತಕ ಬರೆಯುತ್ತಾರೆ. " ಟಠಠಞ ಣಠಿಠಟಿ ಖತಿಚಿಟ ಗಿತಜಞಚಿಟಿಚಿಟಿಜಚಿ ಚಿ ಚಿ ಜಿಡಿಜ ಠಜಿ ಠಿಡಿಣಣಚಿಟ ಜಟಿಜಡಿರಥಿ" ಎಂದು ತನ್ನ ಮೇಲಾದ ಪ್ರಭಾವವನ್ನು ಅದರಲ್ಲಿ ಹೇಳಿಕೊಳ್ಳುತ್ತಾರೆ.
ಅಲ್ಲದೆ ಮಹಾತ್ಮಾ ಗಾಂಧಿ, ಗೋಪಾಲಕೃಷ್ಣ ಗೋಖಲೆ, ನೇತಾಜಿ ಸುಭಾಷ್ ಚಂದ್ರ ಬೋಸ್, ಆಚಾರ್ಯ ವಿನೋಬಾ ಭಾವೆ, ಅರವಿಂದ ಘೋಷ್, ಬಾಲಗಂಗಾಧರ ತಿಲಕ, ನೆಹರು, ಆರ್ ಸಿ ಮಜುಂದಾರ್, ಚಕ್ರವತರ್ಿ ರಾಜಗೋಪಾಲಾಚಾರಿ ಹಾಗೂ ವಿದೇಶಿ ಚಿಂತಕ ರೋಮಿರೊಲಾಂಡ್, ಮ್ಯಾಕ್ಸ್ ಮುಲ್ಲರ್, ಲಿಯೋ ಟಾಲ್ಸ್ಟಯ್, ಲಾಡರ್್ ವೆಕೇನ್, ಮೇರಿಲೂಯಿಸ್, ವಿಲ್ ರೊಲ್ಯಾಂಡ್ ಮತ್ತು ರಾಜ ಮಹಾರಾಜರು, ಉದ್ದಿಮೆದಾರರು, ಯುವಕರು, ಚಿಂತಕರು, ವಿಜ್ಞಾನಿಗಳು ಹೀಗೆ ಇಡೀ ಮನುಷ್ಯ ಕುಲಕ್ಕೆ ಸ್ಪೂತರ್ಿ ಪ್ರೇರಣೆ ನೀಡಿದ ವಿವೇಕಾನಂದರಿಗೆ ನಮ್ಮ ಹೃದಯ ಮಂದಿರದಲ್ಲೊಂದು ಜಾಗವಿಡೋಣ. ಆ ವೇದಾಂತಕೇಸರಿಗೆ ಧನ್ಯತೆಯನ್ನು ಸಮಪರ್ಿಸೋಣ.