ವಾಯುಪುತ್ರ ಎಡಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ

Vayuputra Edahalli first place for Taluk

ತಾಳಿಕೋಟೆ 27: ಸ್ಥಳೀಯ ವೀರಶೈ ವಿದ್ಯಾವರ್ಧ ಸಂಘದ ಪ್ರತಿಷ್ಠಿತ ಎಸ್ ಕೆ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಂಟನೇ ವರ್ಗದ ವಿದ್ಯಾರ್ಥಿ ಕುಮಾರ ವಾಯುಪುತ್ರ ಪರಶುರಾಮ ಎಡಹಳ್ಳಿ, ರಾಷ್ಟ್ರೀಯ (ಎನ್ ಎಂ ಎಂ ಎಸ್) ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಿಷ್ಯವೇತನಕ್ಕೆ ಅರ್ಹನಾಗಿದ್ದಾನೆ.  

ತಾಲೂಕಿನ ಹರನಾಳ ಗ್ರಾಮದ ಪರಶುರಾಮ ಮತ್ತು ಅಕ್ಷತಾ ಎಡಹಳ್ಳಿ ದಂಪತಿಗಳ ಮಗ ಓದಿನಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ನಿರಂತರ ಅಧ್ಯಯನದಲ್ಲಿ ತೊಡಗಿರುತ್ತಾನೆ . ಅವನಿಗೆ ನ್ಯಾಷನಲ್ ಮೀನ್ಸ್‌ - ಕಮ್ ಮೆರಿಟ್ ಸ್ಕಾಲರ್ಶಿಪ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 180ಕ್ಕೆ 109 ಅಂಕ ಬಂದಿವೆ. ಅವನು ಮುದ್ದೇಬಿಹಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಿಷ್ಯ ವೇತನಕ್ಕೆ ಅರ್ಹನಾಗಿದ್ದಾನೆ.  

ವೀರಶೈವ ವಿದ್ಯಾವರ್ಧಕ ಸಂಘದ ಚೇರಮನ್ ವ್ಹಿ. ಸಿ. ಹಿರೇಮಠ, ವಾಯ್ಸ್‌ ಚೇರ್ಮನ್ ಬಿ. ಎನ್‌. ಹಿಪ್ಪರಗಿ, ಕಾರ್ಯದರ್ಶಿಗಳಾದ ಎಂ.ಎಸ್‌.ಸರಶೆಟ್ಟಿ, ಸಹ ಕಾರ್ಯದರ್ಶಿಗಳಾದ ಕೆ.ಎಸ್‌. ಮುರಾಳ, ಹೈಸ್ಕೂಲ್ ವಿಭಾಗದ ಚೇರ್ಮನ್ ಎಂ.ಜಿ.ಕತ್ತಿ, ಪದವಿಪೂರ್ವ ಕಾಲೇಜಿನ ಚೇರ್ಮನ್ ಎಂ.ಆರ್‌.ಕತ್ತಿ, ಉಪಪ್ರಾಚಾರ್ಯ ಜೆ.ಎಸ್‌. ಕಟ್ಟಿಮನಿ ಹಾಗೂ ಸಮಸ್ತ ಶಿಕ್ಷಕ ಬಳಗ ಈ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ