ಹಂಪಿ ಉತ್ಸವದಲ್ಲಿ ವಾಸುಕಿ ವೈಭವ್ ಗಾಯನ ವೈಭವ

Vasuki Vaibhav singing glory at Hampi festival

ವಿಜಯನಗರ (ಹೊಸಪೇಟೆ) 02: ಹಂಪಿ ಉತ್ಸವ ಎಂ.ಪಿ.ಪ್ರಕಾಶ್ ಪ್ರಧಾನ ವೇದಿಕೆಯ ಶನಿವಾರ ರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಸಿನಿಮಾ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಅವರ ಗಾಯನ ವೈಭವ ಕಂಡು ಬಂದಿತು.  

ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರ ಪ್ರಸಿದ್ಧ ಗೀತೆ ’ಅರೆ ಅರೇ ರೇ ಅವಳ ನಗುವ’ ಹಾಡಿನ ಮೂಲಕ ವಾಸುಕಿ ವೈಭವ್ ತಮ್ಮ ಗಾಯನ ಆರಂಭಿಸಿದರು. ನಂತರ  ’ಪ್ರಸದ್ಧಿ ರಂಗಗೀತೆ ಮೈಸೂರು ರಾಜ್ಯದ ದೊರೆಯೇ’ ಪ್ರಸ್ತುತ ಪಡಿಸಿದರು. ಜನಪದ ಸೊಗಡಿನ ’ ಸಾವಿರ ಶರಣವ್ವ ಕರಿಮಾಯಿ ತಾಯಿ’ ಗೀತೆಯನ್ನು ಸಹಚರರೊಂದಿಗೆ ಹಾಡಿ ಜನರಿಂದ ಮೆಚ್ಚುಗೆ ಗಳಿಸಿದರು.  

ರಾತ್ರಿಯ ಹಿತವಾದ ಚಳಿಯಲ್ಲಿ ’ಮುಂದಿನ ನಿಲ್ದಾಣ’ ಚಿತ್ರದ ’ಇನ್ನೂ ಬೇಕಾಗಿದೆ’ ಗೀತೆ ಸಭಿಕರಿಗೆ ಬೆಚ್ಚಗಿನ ಅನುಭವ ನೀಡಿತು. ಕಿರಿಕ್ ಪಾರ್ಟಿ ಚಿತ್ರದ ’ಕಾಗಗದ ದೋಣಿಯಲಿ’ ಎಂಬ ಗೀತೆ ಭಗ್ನ ಪ್ರೇಮಿಗಳ ಕಣ್ಣಂಚಲ್ಲಿ ನೀರು ತರಿಸಿತು. ಪುನೀತ್ ರಾಜ್ ಕುಮಾರ್ ಹಾಡಿದ ’ಕಾಣದಂತೆ ಮಾಯವಾದನು’ ಹಾಡನ್ನು ವಾಸುಕಿ ವೈಭವ್ ಪ್ರಸ್ತುತ ಪಡಿಸಿದರು. ಬಡವ ರಾಸ್ಕಲ್ ಸಿನಿಮಾದ ಶಿರ್ಷೀಕೆ ಗೀತೆ ಹಾಗೂ ಆಲ್ಬಮ್ ಗೀತೆ ಮನಸ್ಸಿನಿಂದ ಯಾರು ಕೆಟ್ಟವರ ಗೀತೆ ಪ್ರಸ್ತುತ ಪಡಿಸಿದರು.