ಕರಿಯಮ್ಮದೇವಿಯ 96ನೇ ಜಾತ್ರಾಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಿದವು
ಗದಗ27: ಗದಗ- ಬೆಟಗೇರಿ ಅವಳಿ ನಗರದಲ್ಲಿರುವ ಕರಿಯಮ್ಮನ ಕಲ್ಲ ದೇವಿ ಇತಿಹಾಸವಿದ್ದು, ದೇವಿಯು ನಗರಕ್ಕೆ ಹೇಗೆ ಬಂದಳು ಎಂಬುದು ಇತಿಹಾಸ.ಮೂಲತಃ ಮಲಯಾಳಿ (ಕೇರಳ) ದಿಂದ ಬಂದವಳು ಕರಿಯಮ್ಮ ದೇವಿಯನ್ನ ಸುಮಾರು 5 ನೂರು ವರ್ಷಗಳ ಹಿಂದೆಯೇ ಯಾತಾಳಿ ಚನ್ನಬಸಪ್ಪ ಕರೆತಂದಿದ್ದು, ದೇವಾಂಗ ಸಮುದಾಯದಲ್ಲಿ ಜನಿಸಿದ್ದು,ಮಂತ್ರ ವಿದ್ಯೆಯನ್ನ ಕಲಿಯುವ ಆಸಕ್ತಿ ಹೆಚ್ಚಿನದ್ದು ಇದ್ದುದರಿಂದ ಕೇರಳಕ್ಕೆ ಹೋಗಿದ್ದರು.ಅಂದಿನ ಕಾಲದಲ್ಲಿ ಬೆಟಗೇರಿ ಯಿಂದ ಕಾಲ್ನಡಿಗೆಯಲ್ಲಿ ಕೇರಳಕ್ಕೆ ಹೊರಟರು.ಮಾರ್ಗ ಮಧ್ಯೆದಲ್ಲಿ ಆಹಾರ ನೀರು ಸೇವಿಸುತ್ತಾ ಹೊರಟಾಗ ಮಾರ್ಗ ಮಧ್ಯೆ ಆಂಭವಿ ಎಂಬ ರಾಕ್ಷಸಿ ಅವತಾರದಲ್ಲಿ ಬಂದು ಯಾತಾಳ ಚನ್ನಬಸಪ್ಪ ನನ್ನು ನಾಯಿ ರೂಪ ಮಾಡಿದಳು.ನಂತರ ಗಿಳಿಯಾಗಿ ಪಂಜರದಲ್ಲಿ ಕೂಡಿಟ್ಟು ಸುಮಾರು 12 ವರ್ಷಗಳ ಕಾಲ ಯಾತಾಳ ಚನ್ನಬಸಪ್ಪ ಸಂಕಷ್ಟ ಅನುಭವಿಸಿದರು ಎಂದು ಕರಿಯಮ್ಮ ದೇವಿ ಬಡಾವಣೆ ಸುಧಾರಣಾ ಸಮಿತಿ ಗೌರವಾಧ್ಯಕ್ಷರಾದ ಎಲ್ ಡಿ ಚಂದಾವರಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಕರಿಯಮ್ಮದೇವಿ ಬಡಾವಣೆ ಸುಧಾರಣಾ ಸಮಿತಿಯ 25 ನೇ ವರ್ಷದ ರಜತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಕರಿಯಮ್ಮದೇವಿಯ 96ನೇ ಜಾತ್ರಾಮಹೋತ್ಸವವು ದಿನಾಂಕ 28-03-2025 ರಿಂದ 31-03-2025 ರ ವರೆಗೆ ಜರುಗಲಿದ್ದು, ಮಹಾರಥೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳ್ಳಿ ಉತ್ಸವ ಮೂರ್ತಿ ದರ್ಶನ,ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ವಚನಗಾಯನ ಸ್ಪರ್ಧೆ, ಚಂಡಿಕಾ ಹೋಮ,ಮುತ್ತೈದೆಯರಿಗೆ ಉಡಿ ತುಂಬುವದು, ಕುಂಭ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ,ಅನ್ನ ಸಂತರೆ್ಣ, ಕಡುಬಿನ ಕಾಳಗ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿದ್ದು,ಈ ಜಾತ್ರೆ ಅತೀ ವಿಜ್ರಂಭಣೆಯಿಂದ ನಡೆಯಲಿದೆ ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಸುಧಾರಣಾ ಸಮಿತಿ ಗೌರವಾಧ್ಯಕ್ಷ ಎಲ್. ಡಿ ಚಂದಾವರಿ ಹೇಳಿದರು. ಸಂದರ್ಭದಲ್ಲಿ ಕರಿಯಮ್ಮದೇವಿ ಬಡಾವಣೆ ಸುಧಾರಣಾ ಸಮಿತಿ ಅಧ್ಯಕ್ಷರಾದ ಸಿ ಕೆ ಮಾಳಶೆಟ್ಟಿ, ಜಾತ್ರಾ ಸಮಿತಿ ಅಧ್ಯಕ್ಷ ಎ ಟಿ ನರೇಗಲ್ಲ, ಎನ್ ಎಮ್ ಅಂಬಲಿ, ಎಸ್ ಎಲ್ ದಿಂಡೂರ,ಅಂದಾನಪ್ಪ ವಿಭೂತಿ, ಗದಗ-ಬೆಟಗೇರಿ ನಗರಸಭೆ ಸದಸ್ಯೆ ವಿಜಯಲಕ್ಷ್ಮೀ ಎಸ್ ದಿಂಡೂರ ಸೇರಿದಂತೆ ಅನೇಕರು ಭಾಗಿಯಾಗಿದ್ದರು.