ಬೆಂಗಳೂರು(ಫೆ. 11): ನಾಲ್ಕು ನಗರಸಭೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿ ನಗರಸಭೆಯಲ್ಲಿ ಅಧಿಕಾರ ಹಿಡಿದಿದೆ.
ಹುಣಸೂರು, ಚಿಕ್ಕಬಳ್ಳಾಪುರ, ಸಿಂಧಗಿ, ಸಿರಗುಪ್ಪದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಐದು ನಗರಸಭೆ ವಾರ್ಡ್ ಲೆಕ್ಕಾಚಾರದಲ್ಲಿ ಬಿಜೆಪಿ ಮುಂದಿದೆ. ಇಲ್ಲಿ ಬಿಜೆಪಿ 52, ಕಾಂಗ್ರೆಸ್ 47 ಸ್ಥಾನಗಳನ್ನು ಗೆದ್ದಿವೆ.ಮೈಸೂರು ಮಹಾನಗರ ಪಾಲಿಕೆಯ 18ನೇ ವಾರ್ಡ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರವೀಂದ್ರ ನಾಯಕ್ 103 ಮತಗಳಿಂದ ಗೆಲುವು ಪಡೆದಿದ್ದಾರೆ. ಬಳ್ಳಾರಿಯ ಕರೂರು ತಾ.ಪಂ. ಉಪಚುನಾವಣೆಯಲ್ಲೂ ಬಿಜೆಪಿಯ ವಿ. ಅಮರಮ್ಮ ಜಯ ಸಾಧಿಸಿದ್ದಾರೆ. ಕೋಲಾರದ ಮಾಲೂರು ತಾಲೂಕಿನ ಲಕ್ಕೂರು ತಾ.ಪಂ. ಉಪಚುನಾವಣೆಯಲ್ಲಿ ಬಿಜೆಪಿಯ ಮನೋಹರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕೋಡಿಹಳ್ಳಿ ಮಂಜುನಾಥ್ಗೆ ಗೆಲುವು ಪಡೆದಿದ್ದಾರೆ. ಹಾವೇರಿಯ ಹಾನಗಲ್ ತಾಲೂಕಿನ ತಿಳವಳ್ಳಿ ತಾ.ಪಂ. ಉಪಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಭಾರಿಸಿದೆ.
ಹುಣಸೂರು ನಗರಸಭೆ ಫಲಿತಾಂಶ:
ಒಟ್ಟು ವಾರ್ಡ್ 31
ಕಾಂಗ್ರೆಸ್: 12
ಬಿಜೆಪಿ: 4
ಜೆಡಿಎಸ್: 7
ಎಸ್ಡಿಪಿಐ: 2
ಪಕ್ಷೇತರ: 2
ಚಿಕ್ಕಬಳ್ಳಾಪುರ ನಗರಸಭೆ:
ಒಟ್ಟು ವಾರ್ಡ್: 31
ಕಾಂಗ್ರೆಸ್: 6
ಬಿಜೆಪಿ: 6
ಜೆಡಿಎಸ್: 3
ಪಕ್ಷೇತರ: 2
ಹೊಸಕೋಟೆ ನಗರಸಭೆ:
ಒಟ್ಟು ವಾರ್ಡ್ 31
ಬಿಜೆಪಿ 22
ಶರತ್ ಬಚ್ಚೇಗೌಡ ಬೆಂಬಲಿತ ಗುಂಪು 7
ಎಸ್ಡಿಪಿಐ 1
ಪಕ್ಷೇತರ 1
ಕಾಂಗ್ರೆಸ್ 0
ಬಳ್ಳಾರಿಯ ಸಿರಗುಪ್ಪ ನಗರಸಭೆ:
ಒಟ್ಟು ವಾರ್ಡ್ 31
ಕಾಂಗ್ರೆಸ್ 11
ಬಿಜೆಪಿ 8
ಪಕ್ಷೇತರ 1
ವಿಜಯಪುರದ ಸಿಂಧಗಿ ಪುರಸಭೆ:
ಒಟ್ಟು ವಾರ್ಡ್ 23
ಕಾಂಗ್ರೆಸ್ 11
ಜೆಡಿಎಸ್ 6
ಬಿಜೆಪಿ 3
ಪಕ್ಷೇತರರು 3
ಬಳ್ಳಾರಿಯ ತೆಕ್ಕಲಕೋಟೆ ಪ.ಪಂ.:
ಒಟ್ಟು ವಾರ್ಡ್ 20
ಬಿಜೆಪಿ 9
ಕಾಂಗ್ರೆಸ್ 7
ಬಳ್ಳಾರಿಯ ಕರೂರು ತಾ.ಪಂ. ಉಪಚುನಾವಣೆ:
ಬಿಜೆಪಿ ಅಭ್ಯರ್ಥಿ ವಿ. ಅಮರಮ್ಮ ಗೆಲುವು
ಹಾವೇರಿಯ ಹಾನಗಲ್ ತಾಲೂಕಿನ ತಿಳವಳ್ಳಿ ತಾ.ಪಂ. ಉಪಚುನಾವಣೆ:
ಕಾಂಗ್ರೆಸ್ನ ಫಯಾಜ್ ಅಹ್ಮದ್ ಲೋಹಾರ್ಗೆ ಗೆಲುವು ಕೋಲಾರದ ಮಾಲೂರು ತಾಲೂಕಿನ ಲಕ್ಕೂರು ತಾ.ಪಂ. ಉಪಚುನಾವಣೆ:
ಬಿಜೆಪಿಯ ಮನೋಹರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕೋಡಿಹಳ್ಳಿ ಮಂಜುನಾಥ್ಗೆ ಜಯಎಸ್‌ಡಿಪಿಐ ಈ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಹುಣಸೂರು ನಗರ ಸಭೆಗೆ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿ 2ರಲ್ಲಿ ಜಯಗಳಿಸಿದೆ. ಹೊಸಕೋಟೆ ನಗರಸಭೆಯಲ್ಲಿ ಒಂದು ಸ್ಥಾನದಲ್ಲಿ ಗೆಲುವು ಪಡೆದಿದೆ.