ಬಾಗಲಕೋಟೆ 24:
ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ ಎಂಬ ಹೆಸರಿನ ಒಬ್ಬ
ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು.
ನಂತರ ತನ್ನ ತಪ್ಪಿನ ಅರಿವು
ಮೂಡಿ ಶೋಕದಿಂದ ಶ್ಲೋಕವನ್ನು ರಚಿಸಿ ರಾಮಾಯಣ ಗ್ರಂಥ ರಚಿಸಿದ ಮಹಾನ ವ್ಯಕ್ತಿ ಆದಿ
ಕವಿ ಮಹಷರ್ಿ ವಾಲ್ಮೀಕಿ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ
ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಷರ್ಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ವಾಲ್ಮೀಕಿ
ಒಬ್ಬ ಕವಿಯಾಗಿರದೇ ಬರಹಗಾರನಾಗಿರದೇ ಶ್ರೇಷ್ಠ ದಾರ್ಶನಿಕರಾಗಿದ್ದರು. ಅವರು ರಚಿಸಿದ ರಾಮಾಯಣವನ್ನೇ
ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ಕವಿ ಕುವೆಂಪು ಅವರ
ಹಾದಿಯಲ್ಲಿ ಅವರನ್ನೇ ಅನುಕರಿಸಿ ಆ ಎಲ್ಲ ತತ್ವವನ್ನು
ಹಿಡಿದಿಟ್ಟು, ಸಾವಿರಾರು ವರ್ಷಗಳ ಹಿಂದಿನ ರಾಮಾಯಣವನ್ನು ಪುನಃ ಸ್ಥಾಪಿಸಿ ಪ್ರತಿಯೊಬ್ಬರ
ಮನದಲ್ಲಿ ಮಹಷರ್ಿ ವಾಲ್ಮೀಕಿಯವರನ್ನು ಗಟ್ಟಿಗೊಳಿಸಿದ್ದಾರೆ ಎಂದರು.
ವಾಲ್ಮೀಕಿಯವರು
ರಚಿಸಿದ ರಾಮಾಯಣದಲ್ಲಿ ಪ್ರತಿಯೊಂದು ಸಂದರ್ಭ ಮನದಾಳದಲ್ಲಿ ನೆಲೆಯೂರುವಂತಹ ಶಬ್ದಗಳನ್ನು ಒಳಗೊಂಡಿದೆ. ಅದರಲ್ಲಿ ವಾಲಿ ಸುಗ್ರೀವ್ರ ಕಥೆ,
ಭರತನ ಸಹೋದರ ಪ್ರೇಮ, ಆಂಜನೇಯನ ಸ್ವಾಮಿ ನಿಷ್ಠೆ, ರಾಮನ ತತ್ವಾದರ್ಶ, ರಾವಣನ
ಜೊತೆಗಿನ ಸಂಘರ್ಷ, ದಶರಥನ ಪುತ್ರ ಶೋಕ, ಕೈಕೆಯ ಮಾತೃ
ಪ್ರೀತಿ, ಸೀತೆಯ ಬಂಗಾರದ ಜಿಂಕೆ ವ್ಯಾಮೋಹ ಈ ಎಲ್ಲ ಘಟನೆಗಳನ್ನು
ಗಮನಿಸಿದಾಗ ಪ್ರತಿಯೊಂದು ಘಟನೆಗಳು ಶೋಕದಿಂದ ಪ್ರಾರಂಭಗೊಂಡು ಶ್ಲೋಕವಾಗಿ ಹೊರಹೊಮ್ಮಿ ಮುಕ್ತಾಯಗೊಂಡಿವೆ ಎಂದರು. ಮುಖ್ಯ
ಅತಿಥಿಗಳಾಗಿ ಆಗಮಿಸಿದ್ದ ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಜು ನಾಯ್ಕರ ಮಾತನಾಡಿ
ಕಳೆದ ಬಾರಿ ಬೆಂಗಳೂರಿನಲ್ಲಿ ಮಹಷರ್ಿ
ವಾಲ್ಮೀಕಿ ಪುತ್ಥಳಿ ಸ್ಥಾಪನೆ ಸಮಾರಂಭ ಇದ್ದುದರಿಂದ ವಿಜೃಂಭಣೆಯಿಂದ ಮಹಷರ್ಿ ವಾಲ್ಮೀಕಿ ಜಯಂತಿ ಆಚರಿಸಲಾಗಲಿಲ್ಲ. ಈ ಬಾರಿಯು ಕೂಡಾ
ಅಂತಹದೇ ಸಮಯ ಒದಗಿ ಬಂದಿರುವುದರಿಂದ
ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿಲ್ಲ. ಬದಲಾಗಿ ಬರುವ ನವೆಂಬರ 11 ರಂದು
ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಸರಕಾರದಿಂದಲೇ ಆಚರಿಸಬೇಕೆಂಬ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಅಶೋಕ
ದುಡಗುಂಟಿ ಮಾತನಾಡಿ ಕ್ರಿ.ಶ ಪೂರ್ವದಲ್ಲಿ
ವಾಲ್ಮೀಕಿ ಜಗತ್ತಿನ ಜನಮಾನಸದಲ್ಲಿ ನೆಲೆಯೂರಿದವರಾಗಿದ್ದು, ಜೀವನದಲ್ಲಿ ಬಡತನ ಕಷ್ಟ ಸುಖಗಳಿಂದ
ಬಳಲಿ ಶ್ರೇಷ್ಠ ಕವಿ ಎನಿಸಿಕೊಂಡಿದ್ದಾರೆ. ಇಂತಹ ವಾಲ್ಮೀಕಿ
ಯಾವುದೇ ಜಾತಿ ಪಂಗಡಗಳಿಗೆ ಸೀಮಿತವಾಗಿರದ
ವ್ಯಕ್ತಿಯಾಗಿದ್ದು, ಇಂತಹವರ ಆದರ್ಶ ಅನುಕರಣೀಯವಾದುದು. ಕೇವಲ ಜಯಂತಿ ಆಚರಿಸಿದರೆ
ಸಾಲದು ಅದನ್ನು ಪ್ರತಿಯೊಬ್ಬರು ಅನುಷ್ಠಾನಕ್ಕೆ ತರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್
ಸಮಾಜದ ಮುಖಂಡರಾದ ಶಂಭುಗೌಡ ಪಾಟೀಲ, ದ್ಯಾಮಣ್ಣ ಗಾಳಿ ಉಪಸ್ಥಿತರಿದ್ದರು. ಸಮಾಜ
ಕಲ್ಯಾಣ ಅಧಿಕಾರಿ ಜಗದೀಶ ಹೆಬ್ಬಳ್ಳಿ ಸ್ವಾಗತಿಸಿದರು. ಮಲ್ಲಿಕಾಜರ್ುನ ಗುಡೂರ ವಂದಿಸಿದರು.