ವೈಷ್ಣೋದೇವಿ: ಈ ವರ್ಷ 77 ಲಕ್ಷ ಯಾತ್ರಾರ್ಥಿಗಳ ಭೇಟಿ

ಜಮ್ಮು, ಡಿ 25 ವಿಶ್ವ ವಿಖ್ಯಾತ ವೈಷ್ಣೋದೇವಿ ಗುಹಾಂತರ ದೇವಾಲಯಕ್ಕೆ ಈ ವರ್ಷ ಸುಮಾರು 77 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ರಿಯಾಸಿ ಜಿಲ್ಲೆಯ ತ್ರಿಕೂಟಾಚಲದಲ್ಲಿರುವ ದೇಗುಲಕ್ಕೆ 2018 ರಲ್ಲಿ, 84 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ತೀರ್ಥಯಾತ್ರೆ ಕೈಗೊಂಡಿದ್ದರು. ಈ ವರ್ಷದ ಅಕ್ಟೋಬರ್‌ನಲ್ಲಿ ನವರಾತ್ರಿ ಸಮಯದಲ್ಲಿ ಸ್ಥಾಪಿಸಲಾದ ‘ಗೋಲ್ಡನ್ ಗೇಟ್’ ಯಾತ್ರಾರ್ಥಿಗಳ ಆಕರ್ಷಣೆಯ ಕೇಂದ್ರವಾಗಿದ್ದು, ಈ ವರ್ಷ 11 ತಿಂಗಳಲ್ಲಿ 73 ಲಕ್ಷಕ್ಕೂ ಹೆಚ್ಚು (73,68,891) ಯಾತ್ರಿಕರು ಗುಹಾಂತರ ದೇಗುಲಕ್ಕೆ ಭೇಟಿ ನೀಡಿದ್ದು, ಜೂನ್ ಮತ್ತು ಮೇ ತಿಂಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿತ್ತು. ಅಧಿಕೃತ ಅಂಕಿಅಂಶಗಳ ಪ್ರಕಾರ, ಜನವರಿ ತಿಂಗಳಲ್ಲಿ 5,01,880 ಲಕ್ಷ ಯಾತ್ರಿಕರು ವೈಷ್ಣೋದೇವಿಯ ದರ್ಶನ ಪಡೆದಿದ್ದಾರೆ. ಫೆಬ್ರವರಿಯಲ್ಲಿ 2,69,739, ಮಾರ್ಚ್ 4,62,369, ಏಪ್ರಿಲ್ 6,90,893, ಮೇ 8,07,125, ಜೂನ್ 11,59,715, ಜುಲೈ 8,45,071, ಆಗಸ್ಟ್ 6,02,088, ಸೆಪ್ಟೆಂಬರ್ 6,56,167, ಅಕ್ಟೋಬರ್ನಲ್ಲಿ 7,96,087, ನವೆಂಬರ್ 5,77,757 ಮತ್ತು ಡಿಸೆಂಬರ್ 20 ರವರೆಗೆ 2,83,458 ಯಾತ್ರಾರ್ಥಿಗಳು ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 2019 ಮುಗಿಯಲು ಇನ್ನೂ ಒಂದು ವಾರ ಬಾಕಿಯಿದ್ದು, ಅಷ್ಟರಲ್ಲಿ ಸುಮಾರು 1.5 ಲಕ್ಷ ಯಾತ್ರಾರ್ಥಿಗಳು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.