ವಚನ ಚಳವಳಿ ಬಹುದೊಡ್ಡ ಸಾಂಸ್ಕೃತಿಕ ಚಳವಳಿ: ಡಾ.ಡಿ.ವಿ.ಪರಮಶಿವಮೂರ್ತಿ

Vachana movement is a great cultural movement: Dr. D. V. Paramashivamurthy

ಹಂಪಿ 29: ವಚನ ಚಳವಳಿ : ಸಮಕಾಲೀನ ಸಂದರ್ಭದ ಜೊತೆ ಮುಖಾಮುಖಿ ಎಂಬ ವಿಷಯ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಉದ್ಘಾಟಿಸಿದರು. ಪ್ರೊ.ಎನ್‌.ಚಿನ್ನಸ್ವಾಮಿ ಸೋಸಲೆ, ಡಾ.ಎಂ.ಪ್ರಭುಗೌಡ, ಮಲ್ಲಿಕಾರ್ಜುನ ಮೇಟಿ ಇತರರು ಭಾಗವಹಿಸಿದರು. 

ದಿ.28ಗುರುವಾರ ಕನ್ನಡ ವಿಶ್ವವಿದ್ಯಾಲಯದ ದಲಿತ ಸಂಸ್ಕೃತಿ ಅಧ್ಯಯನ ಪೀಠವು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಚನ ಚಳವಳಿ : ಸಮಕಾಲೀನ ಸಂದರ್ಭದ ಜೊತೆ ಮುಖಾಮುಖಿ ಎಂಬ ವಿಷಯ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗ ಡಾ.ಡಿ.ವಿ.ಪರಮಶಿವಮೂರ್ತಿ ಉದ್ಘಾಟಿಸಿ, ಮಾತನಾಡಿದ ಅವರು “ವಚನ ಚಳವಳಿ 12ನೇ ಶತಮಾನದಲ್ಲಿ ಕನ್ನಡನಾಡಿನಲ್ಲಿ ನಡೆದ ಬಹುದೊಡ್ಡ ಜನಸಂಸ್ಕೃತಿಯನ್ನು ಜನರ ಭಾವನೆಗಳ ಮೂಲಕ ಕನ್ನಡದಲ್ಲಿ ಅನಾವರಣಗೊಳಿಸಿದ ಬಹುದೊಡ್ಡ ಸಾಂಸ್ಕೃತಿಕ ಚಳವಳಿ” ಎಂದು ಹೇಳಿದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಪ್ರೊ.ಎನ್‌.ಚಿನ್ನಸ್ವಾಮಿ ಸೋಸಲೆ ಅವರು ಕ್ರಿ.ಪೂ.6ನೇ ಶತಮಾನದ ಬುದ್ಧ ಪ್ರತಿಪಾದನೆ ಮಾಡಿದ ಆಶಯಗಳು, 12ನೇ ಶತಮಾನದಲ್ಲಿ ಬಸವ ಹಾಗೂ ಬಸವಾದಿ ಶರಣ ಶರಣೆಯರು ಪ್ರತಿಪಾದನೆ ಮಾಡಿದ ಆಶಯಗಳೇ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲ ಆಶಯಗಳೇ ಆಗಿವೆ ಎಂದರು. ವಚನ ಚಳವಳಿ, ವಚನ ಸಾಹಿತ್ಯ, ಅನುಭವ ಮಂಟಪದ ಮೂಲಕ ಸಂಘಟನಾ ರೂಪವೇ ಸ್ವತಂತ್ರ ಭಾರತ ಕರ್ನಾಟಕದಲ್ಲಿ ಸಂಭವಿಸಿದ ದಲಿತ ಸಾಹಿತ್ಯ, ದಲಿತ ಚಳವಳಿ, ದಲಿತ ಸಂಘಟನೆಗಳಾಗಿ ರೂಪುಗೊಂಡವು ಎಂದು ಹೇಳಿದರು.  

ಸಭೆಯ ಅಧ್ಯಕ್ಷತೆಯನ್ನು ವಿಜಯನಗರ ಮಹಾವಿದ್ಯಾಲಯದ ಅಧ್ಯಕ್ಷತೆಯನ್ನು  ಮಲ್ಲಿಕಾರ್ಜುನ ಮೇಟಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಪ್ರಾಂಶುಪಾಲರಾದ ಡಾ.ಎಂ.ಪ್ರಭುಗೌಡ, ಸಂಸ್ಥೆಯ ಅಜೀವ ಸದಸ್ಯರಾದ ಡಾ.ಮಹಾಬಲೇಶ್ವರ ರೆಡ್ಡಿ, ಬಸವರಾಜ್ ಮಾವಿನಹಳ್ಳಿ ಅವರು ಭಾಗವಹಿಸಿದ್ದರು.  

ಗೋಷ್ಠಿ ಒಂದರಲ್ಲಿ ಬಸವ ಹಾಗೂ ಬಸವಾದಿ ಶರಣರ ಸಿದ್ದಾಂತಗಳು : ಸಂವಿಧಾನ ಆಶಯಗಳೊಂದಿಗೆ ಮುಖಾಮುಖಿ ವಿಷಯ ಕುರಿತು ಅಕ್ಕಿಮಲ್ಲಿಕಾರ್ಜುನ್, ಶರಣೆಯರ ವಚನಗಳು : ಸಮಕಾಲೀನ ಸಂದರ್ಭದ ಮುಖಾಮುಖಿ ವಿಷಯ ಕುರಿತು ಭೀಮಬಾಯಿ ಸಂ.ಮಾಳಶೆಟ್ಟಿ, ಎರಡನೇ ಗೋಷ್ಠಿಯಲ್ಲಿ ವಚನ ಚಳವಳಿ : ಕನ್ನಡ-ಕನ್ನಡಿಗ-ಕರ್ನಾಟಕದ ಅಸ್ಮಿತೆ ವಿಷಯ ಕುರಿತು ಬಡಿಗೇರ್ ಮೌನೇಶ್, ವಚನ ಚಳವಳಿ : 70ರ ದಶಕದ ದಲಿತ ಚಳವಳಿಗೆ ಪ್ರೇರಣೆ ಎಂಬ ವಿಷಯ ಕುರಿತು ಡಾ.ನರಸಿಂಹರಾಜು ಹೆಚ್‌.ಸಿ, ಮೂರನೇ ಗೋಷ್ಠಿಯಲ್ಲಿ ಸಮಕಾಲೀನ ಚಿಂತಕರ ವಾದಗಳು : ವಚನ ಚಳವಲಿ ಹೇಗೆ ಪೂರಕ ಎಂಬ ವಿಷಯ ಕುರಿತು ಡಾ.ಮಣಿಕಂಠ ಹಂಗಳ, ಸಮಕಾಲೀನ ಸಂದರ್ಭದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಅವಶ್ಯಕತೆ ಎಂಬ ವಿಷಯ ಕುರಿತು ಡಾ.ಸಾವಿತ್ರಿ ಅವರು ತಮ್ಮ ವಿದ್ವತ್ ಪ್ರಬಂಧಗಳನ್ನು ಮಂಡಿಸಿದರು. ವಿಜಯನಗರ ಕಾಲೇಜಿನ ಸುವರ್ಣ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಬಸವರಾಜ ಮೇಟಿ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು.