ವಿಟಿಯು ಘಟಿಕೋತ್ಸವ: 67623 ವಿದ್ಯಾಥರ್ಿಗಳಿಗೆ ಪದವಿ ಪ್ರದಾನ


ಬೆಳಗಾವಿ : ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 19ನೇ ವಾಷರ್ಿಕ ಘಟಿಕೋತ್ಸವ ಫೆ. 8ರಂದು ವಿತಾವಿ ಜ್ಞಾನ ಸಂಗಮದ ಆವರಣದ ಡಾ. ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ ಹೇಳಿದರು. 

ವಿಟಿಯುನಲ್ಲಿ ಶನಿವಾರ ದಿನದಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿ ಅಧ್ಯಕ್ಷ ಪ್ರೊ. ಕೆ.ಕೆ. ಅಗರವಾಲ ಘಟಿಕೋತ್ಸವದ ಭಾಷಣ ಮಾಡುವರು. ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ ನಾರಾಯಣ ಅಧ್ಯಕ್ಷತೆ ವಹಿಸಿ ಪದವಿ ಪ್ರಮಾಣ ಮಾಡುವರು. ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ ಇವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರಧಾನ ಮಾಡಲಾಗುವುದು ಎಂದು ಅವರು ಹೇಳಿದರು. 

ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಬಿ.ಇ ವಿಭಾಗದಲ್ಲಿ 58,827, ಬಿ ಆಕರ್್ ವಿಭಾಗದಲ್ಲಿ 744, ಎಂ.ಬಿ.ಎ ವಿಭಾಗದಲ್ಲಿ 4,606, ಎಂ.ಸಿ.ಎ ವಿಭಾಗದಲ್ಲಿ 1,325, ಎಂ.ಟೆಕ್ ವಿಭಾಗದಲ್ಲಿ 1582, ಎಂ. ಆಕರ್್ ವಿಭಾಗದಲ್ಲಿ 39, ಪಿ. ಎಚ್.ಡಿ ವಿಭಾಗದಲ್ಲಿ 479 ಹಾಗೂ ಎಂ. ಎಸ್ಸಿ ವಿಭಾಗದಲ್ಲಿ 21 ವಿದ್ಯಾಥರ್ಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾಥರ್ಿಗಳು, ಫೋಷಕರು ಹಾಗೂ ಆಹ್ವಾನಿತರ ಸೌಕರ್ಯಕಕ್ಕಾಗಿ ಅಂದು ಬೆಳಗ್ಗೆ 6ರಿಂದ 8ರವರೆಗೆ ನಗರದ ಚನ್ನಮ್ಮ ವೃತ್ತದಿಂದ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಮೌಲ್ಯ ಮಾಪನ ಕುಲಸಚಿವ ಸತೀಶ ಅಣ್ಣಿಗೇರಿ, ಆನಂದ ದೇಶಪಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.