ಲೋಕದರ್ಶನ ವರದಿ
ಬೆಳಗಾವಿ, 3:ಜಗತ್ತಿನಲ್ಲಿ ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ದೇಶ ಭಾರತವಾಗಿದೆ. ಯುವಕರು ದುಶ್ಚಟಕ್ಕೆ ಬಲಿಯಾಗದೇ ಕಬಡ್ಡಿಯಂತಹ ದೇಶಿಯ ಆಟಗಳ ಕಡೆಗೆ ಗಮನಹರಿಸುವುದರಿಂದ ದೈಹಿಕವಾಗಿ, ಸಧೃಡವಾಗಿ ತಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವುದು ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿದರ್ೇಶಕ ಡಾ. ರಾಜೇಶ ಎಚ್. ವಾಯ್. ಹೇಳಿದರು.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಶುಕ್ರವಾರ, ದಿ. 03 ಮೇ 2019 ರಂದು ನಡೆದ ವಿಟಿಯು ಬೆಳಗಾವಿ ವಲಯದ ಅಂತರಕಾಲೇಜುಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಸ್ಥೆಯ ಚೇರಮನ್ ಹಾಗೂ ಸಂಸದ ಸುರೇಶ ಅಂಗಡಿ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ಯುಗದಲ್ಲಿ ಜ್ಞಾನ, ಸಂಪತ್ತು ಎಷ್ಟು ಮುಖ್ಯವೋ ಅದಕ್ಕಿಂತ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಆರೋಗ್ಯವೇ ಭಾಗ್ಯ.. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯುವಕರು ಕಬ್ಬಡ್ಡಿಯಂತಹ ಗ್ರಾಮೀಣ ಕ್ರೀಡೆಗಳಲ್ಲಿ ಬಾಗವಹಿಸಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಮ್ಖಾನಾ ಚೇರಮನ್ ಪ್ರೊ. ಕಿರಣ ಪೋತದಾರ ಸ್ವಾಗತಿಸುತ್ತ ಎಲ್ಲ ವಿದ್ಯಾಥರ್ಿಗಳು ಕ್ರೀಡಾ ಮನೋಭಾವದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಲು ಕರೆ ನೀಡಿದರು.
ಈ ಪಂದ್ಯಾವಳಿಯಲ್ಲಿ ಬೆಳಗಾವಿ ವಲಯದ ಮೂವತ್ತೈದು ಇಂಜನೀಯರಿಂಗ್ ಕಾಲೇಜಿನ ತಂಡಗಳು ಭಾಗವಹಿಸಿವೆ.
ವಿಟಿಯು ಬೆಳಗಾವಿ ವಲಯದ ದೈಹಿಕ ಶಿಕ್ಷಣದ ಪ್ರಾದೇಶಿಕ ನಿದರ್ೇಶಕ ಎಸ್.ಎಫ್. ಕೊಡ್ಲಿ, ಆಡಳಿತಾಧಿಕಾರಿ ರಾಜು ಜೋಶಿ, ಪ್ರೊ. ಅಮರ ಬ್ಯಾಕೋಡಿ, ದೈಹಿಕ ನಿದರ್ೇಶಕ ಹಾಗೂ ಪಂದ್ಯಾವಳಿಯ ಸಂಚಾಲಕ ವಿಶಾಂತ ದಮೋಣೆ, ಎಮ್. ಎನ್. ಹಂಪಿಹೊಳಿ, ಎಂ.ಎನ್. ಖೋತ, ಎಲ್ಲ ಕಾಲೇಜುಗಳ ದೈಹಿಕ ಶಿಕ್ಷಕರು, ಪಂದ್ಯಗಳ ನಿಣರ್ಾಯಕರು ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಅತಿಖಾ ಬೇಗ್ ನಿರೂಪಿಸಿದರು. ದಿವ್ಯಾನಿ ಶೇಲಾರ ವಂದಿಸಿದರು.