ವಿಆರ್ಡಿಎಲ್ ಪ್ರಯೋಗಾಲಯ ಶೀಘ್ರ ಆರಂಭ: ಜಿಲ್ಲಾಧಿಕಾರಿ

ಹಾವೇರಿ: ಜೂನ್ 12: ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿ.ಆರ್.ಡಿ.ಎಲ್.) ಸ್ಥಾಪನಾ ಕಾರ್ಯ ಅಂತಿಮ ಹಂತದಲ್ಲಿದ್ದು,  ಶೀಘ್ರವೇ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾಹಿತಿ ನೀಡಿದ ಅವರು ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳುತ್ತಿರುವ ವಿ.ಆರ್.ಡಿ.ಎಲ್. ಪ್ರಯೋಗಾಲಯ ಬಹುಉಪಯೋಗಿಯಾಗಿದ್ದು, ಕೋವಿಡ್ ವೈರಾಣು ಪತ್ತೆಪರೀಕ್ಷೆ ಜೊತೆಗೆ ಇತರ ಕಾಯಿಲೆ ಪತ್ತೆಗೂ ಈ ಪ್ರಯೋಗಾಲಯ ಬಳಕೆಮಾಡಬಹುದಾಗಿದೆ. ಈ ಪ್ರಯೋಗಾಲಯ ಸ್ಥಾಪನೆಯಿಂದ ಜಿಲ್ಲೆಯ ವೈದ್ಯಕೀಯ ಸೌಲಭ್ಯ ಉನ್ನತೀಗೊಂಡಂತಾಗುವುದು ಎಂದು ತಿಳಿಸಿದರು. 

ವಿ.ಆರ್.ಡಿ.ಎಲ್.. ಪ್ರಯೋಗಾಲಯ ಅಂದಾಜು 1.3 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 25 ಚ.ಮೀ. ಜಾಗೆಯಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. ಲ್ಯಾಬರೋಟರಿ ಉಪಕರಣಗಳು ಒಂದೆರಡು ದಿನದಲ್ಲಿ ಜಿಲ್ಲೆಗೆ ಆಗಮಿಸಲಿದ್ದು, ಈ ಉಪಕರಣಗಳ ಜೋಡಣೆ ಕಾರ್ಯ ಕೈಗೊಂಡು ಸಾರ್ವಜನಿಕ ಸೇವೆಗೆ ತೆರವುಗೊಳಿಸಲಾಗುವುದು. ಈಗಾಗಲೇ ಲ್ಯಾಬರೋಟರಿಯಲ್ಲಿ ಕಾರ್ಯನಿರ್ವಹಿಸಲು ವೈದ್ಯಕೀಯ ಮತ್ತು ಅರೇವೈದ್ಯಕೀಯ ಲ್ಯಾಬ್ ಟೆಕ್ನಿಷಿಯನ್ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಜಿಲ್ಲಾ ಆಸ್ಪತ್ರೆ ಮೈಕ್ರೋಬೈಲಾಜಿಸಿಷ್ಟ್ ಓರ್ವ ವೈದ್ಯರನ್ನು ಹಾಗೂ ಎರಡು ಜನ ಲ್ಯಾಬ್ ಟೆಕ್ನಿಷಿಯನ್ಗಳನ್ನು ಬೆಂಗಳೂರಿನ ಕಿದ್ವಾಯ್ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಿ ತರಬೇತಿ ಸಹ ಕೊಡಿಸಲಾಗಿದೆ ಎಂದು ತಿಳಿಸಿದರು.

ಏಳು ಜನ ಗುಣಮುಖ: ಕೋವಿಡ್ ಪಾಜಿಸಿವ್ ಕಾರಣದಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾದ 21 ಜನರ ಪೈಕಿ ಈಗಾಗಲೇ 14 ಜನ ಗುಣಮುಖರಾಗಿ ತೆರಳಿದ್ದು, ಇಂದು ಏಳು ಜನ ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣಗಳು ಉಳಿದಿಲ್ಲ. ಈ ಕಾರಣದಿಂದ ಮತ್ತೆ ಗ್ರೀನ್ ಜೋನ್ ಆಗಿ ಜಿಲ್ಲೆ ಶೀಘ್ರ ಗುರುತಿಸಿಕೊಳ್ಳಲಿದೆ ಎಂದು ತಿಳಿಸಿದರು.

ಜುಲೈ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗಲಿವೆ ಎಂಬ ವರದಿಯ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಅಂದಾಜು 3307 ಜನರಿಗೆ ಸೋಂಕು ಕಾಣಬಹುದು ಎಂದು ಅಂದಾಜಿಸಲಾಗಿದೆ. ಇಷ್ಟು ಸಂಖ್ಯೆಯಲ್ಲಿ ಸೋಂಕು ಕಾಣಿಸಿದರೂ ಇದನ್ನು ನಿಭಾಯಿಸಲು ಜಿಲ್ಲಾಡಳಿತ ಸಮರ್ಥವಾಗಿದೆ. ಈಗಾಗಲೇ 20 ಕೇಂದ್ರಿಕೃತ ಐ.ಸಿ.ಯು ವಾಡರ್್ಗಳಿವೆ, 14 ವೆಂಟಿಲೇಟರ್ ವ್ಯವಸ್ಥೆ ಇದೆ, ಆರು ವೆಂಟಿಲೇಟರ್ ಪೂರೈಸಲು ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್ ಪ್ರಕರಣದಲ್ಲಿ ವೆಂಟಿಲೇಟರ್ ಬಳಕೆ ಕೊನೆಯ ಹಂತದ್ದಾಗಿದೆ. ಜಿಲ್ಲೆಯಲ್ಲಿ ಈವರೆಗೆ ವೆಂಟಿಲೇಟರ್ ಬಳಸುವ ಪ್ರಕರಣ ಉದ್ಬವಿಸಿಲ್ಲ. 50 ಬೆಡ್ಡೆಡ್ ಹಾಸಿಗೆ ವ್ಯವಸ್ಥೆ ಇದೆ. ಹಿರೇಕೆರೂರು, ಸವಣೂರು, ಶಿಗ್ಗಾಂವಗಳಲ್ಲಿ 30 ಬೆಡ್ಡೆಡ್ ಆಕ್ಸಿಜನ್ ವ್ಯವಸ್ಥೆ ಇರುವ ವಾಡರ್್ಗಳು ಸಿದ್ಧವಾಗಿವೆ. ಜಿಲ್ಲೆಯಲ್ಲಿ ಒಟ್ಟಾರೆ 150 ಹಾಸಿಗೆ ಉತ್ತಮ ಸೌಲಭ್ಯವಿದೆ. 250 ರಿಂದ 500 ಕೇಸ್ಗಳು ಬಂದರೂ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಕೋವಿಡ್ ಸಂದರ್ಭದಲ್ಲಿ ಈವರೆಗೆ ಜಿಲ್ಲೆಯ ವೈದ್ಯಕೀಯ ಸೌಕರ್ಯಗಳು ಉತ್ತಮಗೊಂಡಿವೆ. ಈಗಾಗಲೇ ಮನೆ ಮನೆ ಸವರ್ೇ, ಕ್ವಾರಂಟೈನ್ ಅವಧಿಗಳು ಮುಕ್ತಾಯ ಹಂತದಲ್ಲಿವೆ. ಈ ಹಂತದಲ್ಲಿ ಸೋಂಕು ಹೆಚ್ಚಾಗಿ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಜುಲೈ ಮಾಹೆಯಲ್ಲಿ ನಮ್ಮಲ್ಲಿ ಸೋಂಕು ಹೆಚ್ಚಳವಾಗುವ ಲಕ್ಷಣಗಳಿಲ್ಲ. ಆದಾಗ್ಯೂ ಜುಲೈ ಮಾಹೆಯಲ್ಲಿ ಪ್ರಕರಣಗಳು ಹೆಚ್ಚಾಗುವ ಸಂಭವವಿದ್ದರೆ ಸಕರ್ಾರದ ಮಾರ್ಗಸೂಚಿಯಂತೆ ಖಾಸಗಿ ಹೋಟೆಲ್, ಸಕರ್ಾರಿ ಸಮುದಾಯ ಭವನವನ್ನು ಕ್ವಾರಂಟೈನ್ಗೆ ಗುರುತಿಸಿ ಕಾಯ್ದಿರಿಸಿಕೊಳ್ಳುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವೈದ್ಯಕೀಯ ಕಾಲೇಜ್: ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜಿಗೆ ಶೀಘ್ರವೇ ಶಂಕುಸ್ಥಾಪನೆ ಕಾರ್ಯ ಕೈಗೊಳ್ಳಲಾಗುವುದು. ಈಗಾಗಲೇ ಕಾಮಗಾರಿ ಟೆಂಡರ್ ಪ್ರಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. ರೈಲ್ವೆ ಅಂಡರ್ ಪಾಸ್ ಹಾಗೂ ಜಮೀನು ಸ್ವಾಧೀನ ಸಮಸ್ಯೆಯನ್ನು ಸಭೆ ನಡೆಸಿ ಇತ್ಯರ್ಥ ಪಡಿಸಲಾಗಿದೆ. ವೈದ್ಯಕೀಯ ಕಾಲೇಜಿನ ಉಸ್ತುವಾರಿಗಾಗಿ ಈಗಾಗಲೇ ಸಕರ್ಾರ ಡಾ.ಮುಳಗುಂದ ಎಂಬುವರನ್ನು ನೇಮಕ ಮಾಡಿದೆ. ಕಾಲೇಜಿಗೆ ಅಗತ್ಯವಿರುವ  ಹುದ್ದೆಗಳ ಭತರ್ಿಗೆ ಸಕರ್ಾರ ಅನುಮತಿಸಿದೆ. ಶೀಘ್ರವೇ ವೈದ್ಯಕೀಯ ಕಾಲೇಜಿನ ಎಲ್ಲ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಮಲ್ಲಿಕಾಜರ್ುನ ಬಾಲದಂಡಿ ಉಪಸ್ಥಿತರಿದ್ದರು.