ಮಥುರಾ, ಫೆ12: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನ್ ಪ್ರದೇಶದಿಂದ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪ್ರೇಮ್ಕಾಂತ್ (12), ಭೂರಾ (11), ಬಿಡಾಂಟೆ (12) ಮತ್ತು ಯೋಗೇಂದ್ರ (13) ಅವರು ಜೈನ್ತ್ ಪೊಲೀಸ್ ಠಾಣೆ ಪ್ರದೇಶದ ಗೌಂಡಾ ಆಟಾಸ್ ಗ್ರಾಮದಿಂದ ಮಂಗಳವಾರ ಸಂಜೆ 4.30 ರ ಸುಮಾರಿಗೆ ಒಟ್ಟಿಗೆ ಮನೆಯಿಂದ ಹೊರಟಿದ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಸದರ್) ರಮೇಶ್ ಕುಮಾರ್ ತಿವಾರಿ ಮಾಹಿತಿ ನೀಡಿದ್ದಾರೆ
ತಡರಾತ್ರಿಯವರೆಗೂ ಅವರು ಹಿಂತಿರುಗದಿದ್ದಾಗ, ಕುಟುಂಬ ಸದಸ್ಯರು ಅವರನ್ನು ಹುಡುಕಲು ಪ್ರಾರಂಭಿಸಿದರು ಆದರೆ ವ್ಯರ್ಥವಾಯಿತು ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಕ್ಕಳ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ. ಬಹುಶಃ ಮಕ್ಕಳ ಅಪಹರಣವಾಗಿರಬಹುದು ಎಂದು ಪೋಷಕರು ಶಂಕಿಸಿದ್ದಾರೆ.