ರಾಜಾಬಾಗ್ ಸವಾರ ದರ್ಗಾದ ಸಂಭ್ರಮದ ಉರುಸ್ ಆಚರಣೆ
ಕೊಪ್ಪಳ 19: ನಗರದ ಪ್ರಮುಖ ಜವಾಹರ್ ರಸ್ತೆಯಲ್ಲಿರುವ ಹಳೆಯ ಪುರಾತನ ಕಾಲದ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕ ಹಜರತ್ ರಾಜಾ ಬಾಗ್ ಸವಾರ್ ದರ್ಗಾ ದ ಉರಸ್ ಆಚರಣೆ ಬುಧವಾರದಂದು ಸಡಗರ ಸಂಭ್ರಮದಿಂದ ಧಾರ್ಮಿಕ ವಿಧಿ ವಿಧಾನ ದೊಂದಿಗೆ ಯಶಸ್ವಿಯಾಗಿ ದರ್ಗಾ ಆಡಳಿತ ಮಂಡಳಿ ಅಧ್ಯಕ್ಷರಾದ ಮೌಲಾ ಹುಸೇನ್ ಜಮೆದಾರ್ ರವರ ನೇತೃತ್ವದಲ್ಲಿ ಆಚರಣೆಗೊಂಡಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಬಸವರಾಜ್ ಹಿಟ್ನಾಳ, ಜೆಡಿಎಸ್ ಮುಖಂಡರಾದ ಸಿವಿ ಚಂದ್ರಶೇಖರ್, ಕಾಂಗ್ರೆಸ್ ಯುವ ನಾಯಕರಾದ ಅಮರೇಶ್ ಕರಡಿ, ದರ್ಗಾ ಕಮಿಟಿ ಅಧ್ಯಕ್ಷರಾದ ಮೌಲಾ ಹುಸೇನ್ ಜಮೆದಾರ್, ಹಿರಿಯ ನ್ಯಾಯವಾದಿ ಪೀರಾ ಹುಸೇನ್ ಹೊಸಳ್ಳಿ ,ಕಾರ್ಯದರ್ಶಿ ಅಬ್ದುಲ್ ಗನಿ ಅಪ್ಸರ್ ಸಾಬ್ ,ಪ್ರಾಧಿಕಾರದ ಸದಸ್ಯ ಭಾಷೂ ಸಾಬ್ ಖತೀಬ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ,ಮಾನ್ವಿ ಪಾಷಾ, ಹುಸೇನ್ ಪೀರ ಮುಜಾವರ್, ಖಾಜಾ ವಲಿ ಬನ್ನಿಕೊಪ್ಪ ,ಅಬೂಬಕರ್ ಅತ್ತಾರ್, ಸೈಯದ್ ನಾಸಿರ್ ಹುಸೇನಿ, ಮರ್ದಾನ್ ಅಲಿ ಮುಜಾವರ್ ಸೇರಿದಂತೆ ಅನೇಕರು ಉರುಸ್ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ದರ್ಗಾ ಕಮಿಟಿ ಪರವಾಗಿ ಗಣ್ಯರನ್ನು ಸನ್ಮಾನಿಸಲಾಯಿತು.