ಲೋಕದರ್ಶನವರದಿ
ಕುಮಟಾ30 : ಒಂದು ಕಡೆ ಉರಿ ಬಿಸಿಲು ಇನ್ನೊಂದೆಡೆ ನೀರಿನ ಬವಣೆ. ಇವುಗಳ ನಡುವೆಯೂ ಉತ್ಸಾಹದಿಂದ ಎಂಟನೆ ತರಗತಿ ಪ್ರವೇಶಕ್ಕೆ ವಿದ್ಯಾಥರ್ಿಗಳ ಶುಭಾಗಮನ. ತಳಿರು ತೋರಣಾಲಂಕಾರ.
ಕಳೆದ ಸಾಲಿನ ರ್ಯಾಂಕ್ ವಿಜೇತರ ಸ್ವಾಗತ ಕಮಾನು. ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭದ ಮೊದಲ ದಿನ ಕಂಡುಬಂದ ದ್ರಶ್ಯ.
ಶಾಲಾ ಪ್ರಾರಂಭೋತ್ಸವದ ದಿನದಂದು ಕೆನರಾ ಎಜ್ಯುಕೇಶನ್ ಸೊಸೈಟಿಯ ಸದಸ್ಯ ಕೃಷ್ಣದಾಸ ಪೈ ಅವರು ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮಕ್ಕಳಿಗೆ ಸಿಹಿ ವಿತರಿಸಿ ಸ್ಪೂತರ್ಿ ತುಂಬಿದರು. ಮುಖ್ಯಾಧ್ಯಾಪಕ ಎನ್ ಆರ್ ಗಜು ಹಾಗೂ ಸಹ ಶಿಕ್ಷಕವೃಂದದವರು ನೂರಕ್ಕೂ ಅಧಿಕ ಸಂಖ್ಯೆಯ ಹೊಸ ಮಕ್ಕಳನ್ನು ಸ್ವಾಗತಿಸಿ ಬರಮಾಡಿಕೊಂಡರು.
ತಮ್ಮ ಶಾಲೆಯ ಶಿಕ್ಷಕವರ್ಗದವರನ್ನು ಪರಿಚಯಸಿದ್ದಲ್ಲದೇ ಶಾಲಾ ಸಾಧನೆಗಳನ್ನು ಪ್ರಸ್ತುತ ಪಡಿಸಲಾಯಿತು. ಕನ್ನಡ ಮಾಧ್ಯಮದ ಅಪೂರ್ವ ಸತತ ಸಾಧನೆಗೆ ಗಮನಾರ್ಹ ಪ್ರವೇಶಾತಿ ಎದ್ದುಕಾಣುತ್ತಿತ್ತು. ಮಕ್ಕಳ ಖುಷಿ. ಹಿಗ್ಗು ಸಹಪಾಠಿಗಳೊಂದಿಗಿನ ಸಲುಗೆಗೆ ಸಾಕ್ಷಿಯಾಗಿತ್ತು.