ರಾಣೇಬೆನ್ನೂರು 30: ಈ ದೇಶದ ಭದ್ರಬುನಾದಿ ಕಾರ್ಮಿಕರಾಗಿದ್ದಾರೆ. ಸರ್ಕಾರ ಅವರಿಗಾಗಿ ವಿವಿಧ ಸವಲತ್ತುಗಳನ್ನು ಕಲ್ಪಿಸಲು ಮುಂದಾಗಿದೆ ಅದರ ಪ್ರಯೋಜನವನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆದುಕೊಳ್ಳಲು ಮುಂದಾಗಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಅವರು, ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ, ಶ್ರೀ ಮಲ್ಲಿಕಾರ್ಜುನ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಸಂಘಟನೆ, ಹಾಗೂ, ಕಾರ್ಮಿಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವೃತ್ತಿ ಬದುಕಿನಲ್ಲಿ ಅನೇಕ ಏರುಪೇರುಗಳಿವೆ. ಅವುಗಳು ಸರಿಪಡಿಸಲು ಕಾರ್ಮಿಕ ಸಂಘಟನೆಗಳು, ಪ್ರಯತ್ನಿಸಬೇಕು ಎಂದ ಅವರು, ಸಂಘಟನೆಗಳು ಸಮಾನತೆಗಾಗಿ ಯಾವುದೇ ಜಾತಿ, ಮತ, ಭೇದ,ಭಾವ, ತೋರದೆ ಕಾರ್ಮಿಕರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಕಾರ್ಮಿಕ ಇಲಾಖೆಯ ನೀರೀಕ್ಷಕ ಎನ್ ದೇವೇಂದ್ರ್ಪ ಅವರು, ಕಾರ್ಮಿಕರಿಗಾಗಿ ಸರ್ಕಾರ ಎಲ್ಲ ರೀತಿಯ, ಸಹಾಯ ಸಹಕಾರ ನೀಡುತ್ತಲಿದೆ. ಕಾರ್ಮಿಕರಿಗಾಗಿಯೇ ಇಲಾಖೆ, ವೈಚಾರಿಕ ಚಿಂತನೆಯೊಂದಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆಎಂದರು. ಇತ್ತೀಚೆಗೆ ನೈಜ ಕಾರ್ಮಿಕರಿಗಿಂತ ನಕಲಿ ಕಾರ್ಮಿಕರೇ ಕಾರ್ಮಿಕರ ಎಂದು ಹೇಳಿಕೊಂಡು ಗುರುತಿನ ಕಾರ್ಡುಗಳನ್ನು ಪಡೆದುಕೊಂಡಿದ್ದಾರೆ. ಅಂಥವರನ್ನು ಇಲಾಖೆ ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದ ಅವರು, ಆಸಂಘಟಿತ ಕಾರ್ಮಿಕರು ಸಹ ಸಂಘಟನೆಯ ಒಳಗಡೆ ಬರಬೇಕು. ಅಧಿಕೃತವಾಗಿ ಚೀಟಿ ಪಡೆಯಬೇಕು, ಸರಕಾರ ದಿಂದ ಬರುವ ಎಲ್ಲ ಸವಲತ್ತುಗಳನ್ನು ಪಡೆಯಬೇಕು ಎಂದರು.
ಸಂಘಟನೆಯ ಗೌರವಾಧ್ಯಕ್ಷ ಈರಯ್ಯ ಪಿ. ಬೈರನಪಾದಮಠ, ಉಪಾಧ್ಯಕ್ಷ ಪ್ರಕಾಶ ಬ. ಪರ್ಪಗೌಡ್ರ, ಸಹ ಕಾರ್ಯದರ್ಶಿ ಲತಾ ಕ. ಮಠದ, ಕೋಶಾಧ್ಯಕ್ಷ ಅರುಣಕುಮಾರ್ ರಾ. ಚಲವಾದಿ ಸಂ ಕಾರ್ಯದರ್ಶಿ ರಾಘವೇಂದ್ರ ಬಡಿಗೇರ, ಮತ್ತಿತರರು ಉಪಸ್ಥಿತರಿದ್ದರು. ಪ್ರಸ್ತುತ ಸಂದರ್ಭದಲ್ಲಿ ನೈಜ, ನಿಜ ಕಾರ್ಮಿಕರಿಗಿಂತ ನಕಲಿ ಕಾರ್ಮಿಕರೇ ಹೆಚ್ಚಾಗಿ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುವಂತಾಗಿದೆ ಎಂದು ವಿಷಾದಿಸಿದ ಅವರು, ಸಂಘಟನೆಯ ಮುಖಂಡರು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ನಿಜವಾದ ಶ್ರಮಿಕ ಕಾರ್ಮಿಕರನ್ನು ಗುರುತಿಸಲು ಮುಂದಾಗಬೇಕು ಎಂದರು.
ತಾವು ಕಂಡಂತೆ, ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ವೃತ್ತಿ ಕಾರ್ಮಿಕರೆಂದು ಚೀಟಿ ಮಾಡಿಸಿಕೊಂಡಿದ್ದಾರೆ. ಈಗಾಗಲೇಅವರನ್ನು ಗುರುತಿಸಿ ಕಾನೂನಿಗೊಳಪಡಿಸಲಾಗಿದೆ. ನಿಜವಾದ ಕಾರ್ಮಿಕರಿಗೆ ಸವಲತ್ತುಗಳು ಸಿಗಬೇಕು ಅದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ, ಗಂಗಾಧರಯ್ಯ ಶಿ. ಪಾಟೀಲ್ ಅವರು, ಕಾರ್ಮಿಕರು ತಮ್ಮ ವೃತ್ತಿ ಬದುಕಿನಲ್ಲಿ, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ, ತಮ್ಮ ವೃತ್ತಿಯ ಮೂಲಕ ಸಮಾನತೆ ಕಾಣಬೇಕಾದ ಇಂದಿನ ಅಗತ್ಯವಿದೆ.
ಸಾಮಾಜಿಕ ಮತ್ತು ಕಾರ್ಮಿಕರ ಸಮಾನತೆ ಮತ್ತು ಭದ್ರತೆಗಾಗಿ ಸಂಘಟನೆ ಸಮಾನ ಮನಸ್ಕರನ್ನು ಒಳಗೊಂಡು ಸ್ಥಾಪಿಸಲಾಗಿದೆ. ಸಂಘಟನೆಯ ಮೂಲಕ ಎಲ್ಲ ರೀತಿಯ ಯೋಜನೆಗಳನ್ನು ಸಮರ್ಕವಾಗಿ ತಲುಪಿಸಲು ಮುಂದಾಗಿದ್ದೇವೆ ಎಂದರು. ಈಗಾಗಲೇ ತಲಾ 1500 ನೂರು ರೂಪಾಯಿಗಳ ಓಷಧೀಯ ಕಿಟ್ಟುಗಳನ್ನು, ಹಿರೇಕೆರೂರ್, ರಟ್ಟಿಹಳ್ಳಿ, ಹಾನಗಲ್, ಹಾವೇರಿ ಮತ್ತು ರಾಣಿಬೆನ್ನೂರು ನಗರ ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ವಿತರಿಸಲಾಗಿದೆ.ಎಂದರು. ಅಸಂಘಟಿತ ಕಾರ್ಮಿಕರನ್ನು ಸಂಘಟನೆಗೆ ಬರಮಾಡಿಕೊಂಡು, ಅವರಲ್ಲಿ ಸರ್ಕಾರದ ಯೋಜನೆಗಳ ಕುರಿತು ಕಾರ್ಮಿಕ ಜಾಗೃತಿಗೊಳಿಸಲಾಗುವುದು, ಕಾರ್ಮಿಕರು ಜಿಲ್ಲಾ ಸಂಘಟನೆಯ ಅಡಿಯಲ್ಲಿ ನೋಂದಾಯಿಸಿಕೊಳ್ಳಲು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ನೂರಾರು ಮುಖಂಡರನ್ನು, ಸಂಘಟನೆಗೆ ಬರಮಾಡಿಕೊಂಡು ಅವರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ, ಬ್ಯಾಡಗಿಯ ಮೀನಾಕ್ಷಮ್ಮಶಿಂದಹಟ್ಟಿ, ಮಂಜುನಾಥ ಹೆಬಸೂರ, ಮಂಜಯ್ಯ ಮಠದ, ವಿಶ್ವರಾಧ್ಯ ಅಜ್ಜೋಡಿಮಠ,ಡಾ, ಕರಬಸಪ್ಪ ಪೂಜಾರ್, ಮಂಜುನಾಥ್ ಹಂಜಿಗಿ, ಮಲ್ಲೇಶಪ್ಪ ಮದ್ಲೇರ,ಮತ್ತು ವಿವಿಧ ಸಂಘಟನೆಯ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಲಾವಿದ ಬಸವರಾಜ ಸಾವಕ್ಕನವರ್ ಪ್ರಾರ್ಥಿಸಿ, ಸ್ವಾಗತಿಸಿದರು. ಲಿಂಗರಾಜ ಎಸ್ ಇಟಗಿ ರೂಪಿಸಿ ವಾಗೀಶ ಎಮ್ಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎರಡು ನೂರಕ್ಕೂ ಹೆಚ್ಚು ಸಂಘಟಿತ ಕಾರ್ಮಿಕರು ಪಾಲ್ಗೊಂಡಿದ್ದರು.