ಹಿರೇಮುಗದೂರ ಗ್ರಾಮದ ದುರ್ಗಾಂಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆ

Unopposed election to Durgamba Primary Agricultural Cooperative Society of Hiremugadur village

ಹಿರೇಮುಗದೂರ ಗ್ರಾಮದ ದುರ್ಗಾಂಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆ

ಸವಣೂರು 19 : ಸಹಕಾರ ಕ್ಷೇತ್ರದಲ್ಲಿ ನನಗೆ ಸೇವೆ ಮಾಡಲು ಅವಕಾಶ ನೀಡಿದ ಎಲ್ಲಾ ಸಹಕಾರಿಗಳಿಗೆ ಹಾಗೂ ಸಹಕಾರ ನೀಡಿದ ಎಲ್ಲಾ ಗುರು ಹಿರಿಯರಿಗೆ ಧನ್ಯವಾದಗಳು ಎಂದು ದುರ್ಗಾಂಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾದ ಪರಶುರಾಮ ಮಾ   ಆರೇರ ಹೇಳಿದರು.ತಾಲ್ಲೂಕಿನ ಹಿರೇಮುಗದೂರ ಗ್ರಾಮದ ದುರ್ಗಾಂಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿ ಎಲ್ಲರೂ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.  ನಮ್ಮೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹಕಾರಿ ಸಂಘದ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿರಿ.ನಿಮ್ಮೆಲ್ಲರ ಬೆಂಬಲ ಹಾಗೂ ಸಹಕಾರದಿಂದ ನಾನು ಅಧ್ಯಕ್ಷರಾಗಿದ್ದು,ಸದಾ ನಿಮ್ಮ ಸೇವೆ ಮಾಡಲು ಶ್ರಮವಹಿಸುವೆ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಗ್ರಾಪಂ ಸದಸ್ಯರಾದ ನಿಂಗಪ್ಪ ಆರೇರ,ಮುಖಂಡರಾದ ಬಿ ಡಿ ಕೊಳೂರು ಹಾಗೂ ಮಾಜಿ ಅಧ್ಯಕ್ಷರಾದ ಪರಮಯ್ಯ ಮಠದ ಅವರು ಸಹಕಾರಿ ಸಂಘದ ಕುರಿತು ಹಾಗೂ ಶುಭ ಕೋರಿ ಮಾತನಾಡಿದರು .ಗ್ರಾಮಸ್ಥರ ವತಿಯಿಂದ ಅಧ್ಯಕ್ಷರಾದ ಪರಶುರಾಮ ಆರೇರ ಹಾಗೂ ಉಪಾಧ್ಯಕ್ಷರಾದ ಪೂರ್ಣಿಮಾ ಸೋಮಸಾಗರ ಅವರನ್ನು ಗೌರವಿಸಲಾಯಿತು. ಚುನಾವಣಾ ಅಧಿಕಾರಿಗಳಾಗಿ ಸತೀಶ ಚಕ್ರಸಾಲಿ  ಕಾರ್ಯನಿರ್ವಹಿಸಿದರು.ಈ ಸಂದರ್ಭದಲ್ಲಿ ಸೊಸೈಟಿಯ ಮಾಜಿ ಅಧ್ಯಕ್ಷರಾದ  ವಿಜಯಕುಮಾರ ಕನವಳ್ಳಿ,ನಿರ್ದೇಶಕರಾದ  ಶಂಭಣ್ಣ ಆರೇರ, ಜಗದೀಶ ಕುಲಕರ್ಣಿ,ಕೊಟೆಪ್ಪ ಹಿತ್ತಲಮನಿ,ಗ್ರಾಪಂ ಸದಸ್ಯರಾದ ಮರಿಯಪ್ಪ ನಡುವಿನಮನಿ, ಹಿರಿಯರಾದ ಬಸವರಾಜ ಕನವಳ್ಳಿ,ಮೈಲಾರೆಪ್ಪ ಸಾಳಂಕಿ,ಯಲ್ಲಪ್ಪ ಆರೇರ, ಶಂಕ್ರಣ್ಣ ಸೋಮಸಾಗರ, ಮಲ್ಲಪ್ಪ ತಳವಾರ,ಫಕ್ಕಿರ​‍್ಪ ಮಾಲಿ,ಈರಣ್ಣ ಚಪ್ಪರದಹಳ್ಳಿಮಠ,ಉಮೇಶ ಮಾಲಿ,ಮಲ್ಲಿಕಾರ್ಜುನ ಸೋಮಸಾಗರ, ಅಡಿವೆಪ್ಪ ಕೂರಡೂರ, ಸುರೇಶ ಬರದೂರ,ಈರಭದ್ರ​‍್ಪ ಗುಡ್ಡಪ್ಪ ತಳವಾರ,ಬಸಯ್ಯ ಮರಿಗೌಡ್ರ, ಬಿ.ಕೆ ಗೌಡ್ರ,ಶರಣಪ್ಪ ಸೋಮಸಾಗರ,ಸಂಜೀವ ಮಾಲಿ,ನಿಂಗನಗೌಡ್ರ ಕಲ್ಲನಗೌಡ್ರ,ಮೌನೇಶ ಬಡಿಗೇರ,ಫಕ್ಕಿರಯ್ಯ ಮೇವುಂಡಿ,ಯಲ್ಲಪ್ಪ ಕಾಳಿ, ರಾಕೇಶ ಹಿರೇಮಠ, ನೀಲಪ್ಪ ಕಾಳಿ,ಫಕ್ಕಿರೇಶ ರಿತ್ತಿ,ಹನಮಂತರಾಯ ಆರೇರ,ಹೊನ್ನಪ್ಪ ತಳವಾರ, ಶಿವರೆಡ್ಡಿ ಮಾಲಿ,ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀಧರ ಪಾಟೀಲ,ಅಶೋಕ ಅಳ್ಳಳ್ಳಿ,ಭರಮಪ್ಪ ಮಲ್ಲಾಡದ ಸೇರಿದಂತೆ ಗ್ರಾಮದ ಗಣ್ಯರು, ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.