ದಾಂಡೇಲಿ ಘಟಕಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ
Unopposed election of office bearers for Dandeli unit
ಲೋಕದರ್ಶನ ವರದಿ
ದಾಂಡೇಲಿ 14 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾಂಡೇಲಿ ಘಟಕಕ್ಕೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಎಸ್.ಜಿ. ಬಿರಾದಾರ ಘೋಷಿಸಿದ್ದಾರೆ. ಮೇ 24 ರಂದು ದಾಂಡೇಲಿ ತಾಲೂಕಾ ಘಟಕಕ್ಕೆ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕಿತ್ತು ಈ ಕುರಿತಂತೆ ಚುನವಣಾ ಪ್ರಕ್ರಿಯೆ ಆರಂಭಗೊಂಡಿತ್ತು. ಚುನಾವಣಾ ಕಣದಿಂದ ಅಂತಿಮವಾಗಿ ಹಲವು ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡ ಹಿನ್ನಲೆಯಲ್ಲಿ ಕಾರ್ಯಕಾರಿ ಸಮಿತಿಗೆ ಬೇಕಾಗುವಷ್ಟೆ ಸದಸ್ಯರು ಅಂತಿಮವಾಗಿ ಉಳಿದ ಕಾರಣ ಅವರನ್ನು ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದರು. ಅಧ್ಯಕ್ಷರಾಗಿ ಸಿದ್ದಪ್ಪ ಕುರುಗುಂದ ಮತ್ತು ಸದಸ್ಯರುಗಳಾಗಿ ಗಂಗಯ್ಯಾ ರುದ್ರಯ್ಯಾ ಹಿರೇಮಠ, ಶಂಕ್ರಯ್ಯಾ ಹಿರೇಮಠ ರುದ್ರಾ್ಪ ತೋಟಗೇರ ಪ್ರಶಾಂತ ಪಾಟೀಲ್ ಶರಣಬಸಪ್ಪಾ ರಾಜೂರ್, ನಿಂಗರಾಜ್ ಮೊದಗಿ, ದುಂಡಪ್ಪಾ ಬೆಣೆ,್ಣ ಆಶ್ವಿನಕುಮಾರ ಜಟ್ಟಿ, ಶಿವನಗೌಡಾ ಗಂಗಗನ ಗೌಡರ್ ಶಂಕರಯ್ಯಾ ಜಡೇಹಿರೇಮಠ, ಚೆನ್ನಬಸಪ್ಪಾ ಮುರಗೋಡ, ಬಸನಗೌಡಾ ಪಾಟೀಲ್, ದ್ರಾಕ್ಷಾಯಣಿ ಅಂಕಲಗಿ, ಗೀತಾ ಜಟ್ಟಿ, ಮೈತ್ರಾ ಜಿಗಳಿ, ದೀಪಾ ಪಾಟೀಲ್, ಜ್ಯೋತಿ ಸೌದತ್ತಿ ಮಠ, ಸವಿತಾ ಮುಂಗರವಾಡಿ, ಸುಜಾತಾ ಗಡದ ಅವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 