2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ

2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ Sankeshwar Mahalaxmi Jatra festival to begin on May 4, 2027

ಸಂಕೇಶ್ವರ : ಮುಂಬರುವ 2027ರ ಮೇ. 4ರಿಂದ ಸಂಕೇಶ್ವರದ ಶ್ರೀ ಮಹಾಲಕ್ಷಿö್ಮÃ ಜಾತ್ರಾ ಮಹೋತ್ಸವವು ಪ್ರಾರಂಭವಾಗಲಿದೆ ಎಂದು ಯಾತ್ರಾ ಕಮೀಟಿ ಪ್ರಮುಖ ಹಕ್ಕುದಾರರಾದ ಕುನಾಲ್ ಪಾಟೀಲ(ಖಾತೇದಾರ) ಇಂದಿಲ್ಲಿ ಹೇಳಿದರು.

ಪಟ್ಟಣದ ಮಹಾಲಕ್ಷಿö್ಮÃ ಮಂದಿರದಲ್ಲಿ ಶುಕ್ರವಾರ ಸಂಜೆ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಮಿಟಿಯವರು, ಇದೇ 2026ರ ಜುಲೈ 21ರಂದು ಹವಾಲ್ದಾರ್ ಅವರ ಮನೆಯಿಂದ ಬೆಳಿಗ್ಗೆ 8 ಗಂಟೆಗೆ ಕೋಣ ಬಿಡುವ ಕರ‍್ಯಕ್ರಮ ನಡೆಯಲಿದೆ ಎಂದು ಹೇಳಿದರು.  

2027ರ ಮಂಗಳವಾರ ಮೇ. 4ರಿಂದ ಮಹಾಲಕ್ಷಿö್ಮÃ ಮಹಾಯಾತ್ರೆ ಪ್ರಾರಂಭವಾಗಲಿದ್ದು, ಮೇ. 4ರಂದು ಮುಂಜಾನೆ 8 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಬಳಿಕ ಬೆಳಿಗ್ಗೆ 8ರಿಂದ 9 ಗಂಟೆಯ ಒಳಗೆ ಖಾತೇದಾರ ಪಾಟೀಲ ಮನೆತನದಿಂದ ಹಾಲಗಂಬ ನಿಲ್ಲಿಸುವ ಕರ‍್ಯಕ್ರಮ, ಸಂಜೆ 4.30 ನಂತರ ಸೀಮೆಯಿಂದ ಲಕ್ಷಿö್ಮÃ ದೇವಿಯನ್ನು ತರುವುದು ಕರ‍್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ 6 ಗಂಟಗೆ ದೀಪಕ ಅಸೂದೆ ಅವರಿಂದ ಅಕ್ಕಿ ಬೀಳುವ ಕರ‍್ಯಕ್ರಮ ನಡೆಯಲಿದೆ ಎಂದು ನುಡಿದರು.

2027ರ ಮಂಗಳವಾರ ಮೇ. 11ರಂದು ಸಂಜೆ 6 ಗಂಟೆಗೆ ಮುಖ್ಯ ಅತಿಥಿಗಳಿಂದ ಮಹಾಲಕ್ಷಿö್ಮÃ ದೇವಿಗೆ ಪೂಜಾ ಹಾಗೂ ಉಡಿ ತುಂಬುವ ಕರ‍್ಯಕ್ರಮ ನಡೆಯಲಿದೆ. ಅದೇ ದಿನ ರಾತ್ರಿ 8 ಗಂಟೆಗೆ ಮಹಾಲಕ್ಷಿö್ಮÃ ದೇವಿ ಏಳುವುದು ಮತ್ತು ಹಕ್ಕುದಾರರ ಮನೆಗೆ ಹೋಗಿ ಉಡಿ ತುಂಬಿಸಿಕೊಳ್ಳುವ ಕರ‍್ಯಕ್ರಮ ನಡೆಯಲಿದೆ.

ಅದೇ ರೀತಿ 12 ಮೇ. 2027ರಂದು ಬೆಳಿಗ್ಗೆ 5.30 ಗಂಟೆ ಒಳಗೆ ಲಕ್ಷಿö್ಮÃದೇವಿ ಸ್ಥಾಪನೆ ಮಾಡುವದು. ಮುಂಜಾನೆ 8 ಗಂಟೆಯೋಳಗೆ ಕೋಣದ ಮೆರವಣಿಗೆ ಮಾಡಿ ರಂಗದಲ್ಲಿ ಬಿಡುವ ಕರ‍್ಯಕ್ರಮ ನಡೆಯಲಿದೆ. ಮೇ. 13 ಮತ್ತು 14ರಂದು ಪಟ್ಟಣದ ಎಲ್ಲ ಸಮಾಜದ ಭಕ್ತಾಧಿಗಳಿಂದ ದೀಡ್ ನಮಸ್ಕಾರ (ದಂಡವತ್) ದೇವಿಗೆ ಉಡಿ ತುಂಬುವ ಕರ‍್ಯಕ್ರಮ ನೆರವೇರಲಿದೆ. ಮೇ. 15ರ 2027ರಂದು 2 ಗಂಟೆಯ ನಂತರ ಲಕ್ಷಿö್ಮÃದೇವಿಯನ್ನು ಸೀಮೆಗೆ ಕಳಿಸಿಕೊಡುವ ಕರ‍್ಯಕ್ರಮ ಜರುಗಲಿದೆ ಎಂದು ಖಾತೇದಾರ ಕುನಾಲ್ ಪಾಟೀಲ ಹೇಳಿದರು.

ಯಾತ್ರಾ ಕಮೀಟಿಯ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಗೌರವಾಧ್ಯಕ್ಷ ಸುನೀಲ ಪರ್ವತರಾವ್, ಕರ‍್ಯದರ್ಶಿ ಬಸನಗೌಡ ಪಾಟೀಲ ಉಪಕರ‍್ಯದರ್ಶಿ ಮಲ್ಲಿಕಾರ್ಜುನ ದೇಸಾಯಿ, ಹಕ್ಕುದಾರರಾದ ಗಿರೀಶ ಕುಲಕರ್ಣಿ, ಅಪ್ಪಾಸಾಹೇಬ ಶೆಟ್ಟಿಮನಿ, ಸಂತೋಷ ಹವಾಲ್ದಾರ್, ಬಸವಣ್ಣಿ ಕರ್ದೇಗೌಡ ಇವರುಗಳು ಪತ್ರಿಕಾಗೋಷ್ಠಿಯಲ್ಲಿಬ ಉಪಸ್ಥಿತರಿದ್ದರು.