ಕೂಚಬಾಳ ಪಿಕೆಪಿಎಸ್ ಗೆ ಅಧ್ಯಕ್ಷ - ಉಪಾಧ್ಯಕ್ಷರ ಅವಿರೋಧ ಆಯ್ಕೆ

Unopposed election of President - Vice President for Koochabala PKPS

ತಾಳಿಕೋಟಿ 13: ತಾಲೂಕಿನ ಕೂಚಬಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರಶೇಖರ ಸಂಗಯ್ಯ ಹಿರೇಮಠ( ಕೂಚಬಾಳ) ಹಾಗೂ ಉಪಾಧ್ಯಕ್ಷರಾಗಿ ನಿಂಗಪ್ಪ ಎಲ್ಲಪ್ಪ ಮಡಿಕೇಶ್ವರ( ಗುಡ್ನಾಳ) ಅವಿರೋಧವಾಗಿ ಆಯ್ಕೆಯಾದರು.  

ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕುರಿತು ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಹಿರೇಮಠ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿಂಗಪ್ಪ ಮಡಿಕೇಶ್ವರ ಇವರಿಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶ್ರೀಮತಿ ಐ.ಜೆ.ನಾಯಕ್ ಘೋಷಿಸಿದರು. 

ಈ ವೇಳೆ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ ಈ ಸಹಕಾರಿ ಸಂಘವನ್ನು ನಮ್ಮ ಹಿರಿಯರು ಬಹಳ ಕಷ್ಟಪಟ್ಟು ಕಟ್ಟಿ ಬೆಳೆಸಿದ್ದಾರೆ ಈಗ ನಮಗೆ ಇದರ ಜವಾಬ್ದಾರಿಯನ್ನು ವಹಿಸಿದ್ದಾರೆ ನಾವು ನಮ್ಮ ನಾಯಕರಾದ ಆರ್‌. ಎಸ್‌. ಪಾಟೀಲ ಕೂಚಬಾಳ ಇವರ ಮಾರ್ಗದರ್ಶನದಲ್ಲಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು. ಇದೆ ವೇಳೆ ನೂತನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನಿರ್ದೇಶಕರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.  

ಈ ವೇಳೆ ನಿರ್ದೇಶಕರುಗಳಾದ ಅಕ್ಷಯ ಕುಮಾರ ಮುದ್ದೇಬಿಹಾಳ ಇಂಗಳಗೇರಿ, ಗುರಣ್ಣ ಗೋಳರೆಡ್ಡಿ (ಇಂಗಳಗೇರಿ)ರಾಮನಗೌಡ ಪಾಟೀಲ (ಕೂಚಬಾಳ)ಶಂಕರಗೌಡ ಬಿರಾದಾರ (ಕೂಚಬಾಳ)ಲಕ್ಷ್ಮಿ ಅಸ್ಕಿ (ಬಾವೂರ), ಶಾರದಾ ಬಿರಾದಾರ (ಕೂಚಬಾಳ),ಸಿದ್ದಪ್ಪ ದಿಡ್ಡಿ (ಇಂಗಳಗೇರಿ),ಗಂಗವ್ವ ಕೋಳ್ಯಳ( ಮಾದರ)ಕೂಚಬಾಳ, ಪರ​‍್ಪ ವಾಲಿಕರ (ಇಂಗಳಗೇರಿ),ಭೀಮಶೇಪ್ಪ ಹಿರೇಕುರುಬರ (ಕೂಚಬಾಳ), ಸಂಘದ ಮಾಜಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಮುಪ್ಪಯ್ಯ ಹಿರೇಮಠ,ಗುರು ಬಿರಾದಾರ,ಕುಮ್ಮಯ್ಯ ಹಿರೇಮಠ,ಸಿದ್ದು ಮೇಲಪ್ಪಗೋಳ,ಕಾರ್ಯದರ್ಶಿ ರಾಮನಗೌಡ ಹಂದ್ರಾಳ ಕೊಣ್ಣೂರ,ಸಿಬ್ಬಂದಿಗಳಾದ ಸಿದ್ದು ಮಡ್ಡಿಮನಿ, ಯಮನೂರ​‍್ಪ ಬೊಮ್ಮನಹಳ್ಳಿ ಮತ್ತಿತರರು ಇದ್ದರು.