ಪ್ರಾಥಮಿಕ ಕೃಷಿ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ
ಗುರ್ಲಾಪೂರ 24: ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಗುರ್ಲಾಪೂರ ಇದರ ಆಡಳಿತ ಮಂಡಳಿ ಚುನಾವಣೆ ದಿ. 29ರಿಂದ ಮುಂದಿನ ಐದು ವರ್ಷದ ಅವಧಿಗಾಗಿ 33 ಜನ ಸಂಘದ ಸದಸ್ಯರು ನಾಮ ಪತ್ರ ಸಲ್ಲಿಸಿದ್ದರು.ಆದರೆ ಸೋಮವಾರ ಸಂಜೆ ವೇಳೆಗೆ ಅವಿರೋಧವಾಗಿ ಶಿವಬಸು ಗಿರಿಮಲ್ಲಪ್ಪ ಹಂಚಿನಾಳ, ರೇವಪ್ಪ ಬಸಪ್ಪ ನೇಮಗೌಡರ, ನಾಗಪ್ಪ ಕಲ್ಲಪ್ಪ ಗಾಣಿಗೇರ (ತೇಲಿ), ರಾಮಪ್ಪ ನಂದೆಪ್ಪ ನೇಮಗೌಡರ, ಧರೇಪ್ಪ ಸಿದ್ರಾಮಪ್ಪ ಮಿರ್ಜಿ. ಮಲ್ಲಪ್ಪ ಅಲ್ಲಪ್ಪಾ ಗಾಣಿಗೇರ. ಲಕ್ಷ್ಮಣ ಸತ್ಯಪ್ಪ ಗೌರಾಣಿ, ಸುರೇಖಾ ರಮೇಶ ನೇಮಗೌಡರ, ಸಂಗಿತಾ ಸುರೇಶ ಗಾಣಿಗೇರ, ಮಾರುತಿ ಕಲ್ಲಪ್ಪ ಬಂಗೇನ್ನವರ, ರಮೇಶ ಹಣಮಂತ ದಂಡಿನವರ, ಸಂಗಮೇಶ ಗಿರಿಮಲ್ಲಪ್ಪ ನೇಮಗೌಡರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ.ವಾಯ್ ಕೌಜಲಗಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.