ಬೆಂಗಳೂರು 23: ಖ್ಯಾತ ನಟಿ ತಮನ್ನಾ ಭಾಟಿಯಾ ಹಾಗು ನಟ ವಶಿಷ್ಠ ಸಿಂಹ ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಸಂಗಮ್ ಘಾಟ್‌ನಲ್ಲಿ ಪುಣ್ಯ ಸ್ನಾನ ಮಾಡಿದರು.
ತೆಲುಗಿನಲ್ಲಿ ಅಶೋಕ್ ತೇಜಾ ಅವರು ನಿರ್ದೇಶಿಸಿರುವ ಬಿಡುಗಡೆಗೆ ಸಿದ್ದವಾಗಿರುವ ಒಡೆಲಾ–2 ಹಾರರ್, ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ಹಾಗೂ ವಶಿಷ್ಠ ಸಿಂಹ ಮುಖ್ಯಪಾತ್ರಗಳಲ್ಲಿದ್ದಾರೆ. ಹೀಗಾಗಿ ಒಡೆಲಾ–2 ಚಿತ್ರತಂಡ ಸಂಗಮದಲ್ಲಿ ಮಿಂದೆದ್ದಿತು.
ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ಸಾಧ್ವಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಕುಂಭಮೇಳದಲ್ಲಿಯೇ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.