ಬೆಟಗೇರಿ 23: ಗ್ರಾಮೀಣ ವಲಯದ ಕೆನರಾ ಬ್ಯಾಂಕ್‌ಗಳಲ್ಲಿ ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಹಾಗೂ ಗ್ರಾಹಕರಿಗೆ, ದೊರಕುವ ಸಾಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹುಬ್ಬಳ್ಳಿಯ ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್‌ನ ಜನರಲ್ ಮ್ಯಾನೇಜರ್ ವಿಜಯಕುಮಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ಇತ್ತೀಚೆಗೆ ನಡೆದ ಕೃಷಿ ಮತ್ತು ಸ್ವ ಸಹಾಯ ಸಂಘಗಳ ಸಾಲ ವಿತರಣೆ ಹಾಗೂ ಜಾಗೃತಿ ಶಿಬಿರದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಬೆಟಗೇರಿ ಕೆನರಾ ಬ್ಯಾಂಕ್ ಶಾಖೆ ವ್ಯಾಪ್ತಿಯ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಗ್ರಾಹಕರು, ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಕೆನರಾ ಬ್ಯಾಂಕ್ ಶಾಖೆಗಳಿಂದ ವಿವಿಧ ಯೋಜನೆಯಡಿಯಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕಿನ ಪ್ರಗತಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಜಗದೀಶ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿ, ಕೆನರಾ ಬ್ಯಾಂಕಿನಿಂದ ದೊರಕುವ ವಿವಿಧ ಯೋಜನೆಯ ಸಾಲ, ಸಹಾಯ ಸೌಲಭ್ಯಗಳ ಕುರಿತು ತಿಳಿಸಿದರು. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಗ್ರಾಹಕರು, ಸಾರ್ವಜನಿಕರು ಸ್ಥಳೀಯ ಕೆನರಾ ಬ್ಯಾಂಕ್‌ನಿಂದ ದೊರಕುವ ವಿವಿಧ ಸಾಲ, ಸಹಾಯಗಳ ಕುರಿತು ಚರ್ಚಿಸಿದ ಬಳಿಕ ಎಲ್ಲರಿಗೂ ಸಿಹಿ ವಿತರಿಸಲಾಯಿತು.
ಚಿಕ್ಕೋಡಿ ಕೆನರಾ ಬ್ಯಾಂಕ್ ರಿಜನಲ್ ಆಫೀಸ್‌ನ ಡಿವಿಜಿನಲ್ ಮ್ಯಾನೇಜರ್ ರಾಜೇಶಕುಮಾರ, ಕುಲಗೋಡ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಹರೀಶಕುಮಾರ, ಚಿಕ್ಕೋಡಿ ರಿಜನಲ್ ಆಫೀಸ್ ಮ್ಯಾನೇಜರ್ ರವೀಂದ್ರ.ಕೆ., ಅರಳಿಮಟ್ಟಿ ಕೆನರಾ ಬ್ಯಾಂಕ್ ಶಾಖೆಯ ಮಾನೇಜರ್ ಮಂಜುನಾಥ, ಸ್ಥಳೀಯ ಕೆನರಾ ಬ್ಯಾಂಕಿನ ಪೀಲ್ಡ್ ಆಫೀಸರ್ ಮಲ್ಲಿಕಾರ್ಜುನ ನಿಂಬರಗಿ, ಸೋನಾಲಿ ನಾಯ್ಕ, ಪೃಥ್ವಿ ರಡ್ಡಿ, ಈರಯ್ಯ ಹಿರೇಮಠ, ಮುತ್ತೆಪ್ಪ ಕುರುಬರ, ಅಚಲ್, ರಮೇಶ ಪಾಟೀಲ, ಮಹೇಶ ಪತ್ತಾರ, ಬಸವರಾಜ, ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ, ಬೆಟಗೇರಿ ಕೆನರಾ ಬ್ಯಾಂಕ್ ಶಾಖೆ ವ್ಯಾಪ್ತಿಯ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಗ್ರಾಹಕರು, ಸಾರ್ವಜನಿಕರು, ಇತರರು ಇದ್ದರು.