ಉನದ್ಕತ್ ಮಾರಕ ದಾಳಿ: ಸೌರಾಷ್ಟ್ರ ಎದುರು ಕರ್ನಾಟಕಕ್ಕೆೆ ಭಾರಿ ಹಿನ್ನಡೆ

ರಾಜ್ಕೋಟ್ 13: ಜಯದೇವ್ ಉನದ್ಕತ್ (49ಕ್ಕೆ 5) ಅವರ ಮಾರಕ ದಾಳಿಗೆ ನಲುಗಿದ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್  ಮತ್ತು ಬಿ ಗುಂಪಿನ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ  ಸಾಧಾರಣ ಮೊತ್ತಕ್ಕೆೆ ಕುಸಿಯಿತು ಮೂಲಕ ಭಾರಿ ಮೊತ್ತದ ಹಿನ್ನಡೆ ಅನುಭವಿಸಿತು.

ಇಲ್ಲಿನ ಮಾಧವ್ರಾವ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ ಬೆಳಗ್ಗೆೆ ಒಂದು ವಿಕೆಟ್ ಕಳೆದುಕೊಂಡು 13 ರನ್ ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ  79 ಓವರ್ ಗಳಿಗೆ  171 ರನ್ ಗಳಿಗೆ ಆಲೌಟ್ ಆಯಿತು ಮೂಲಕ ಮೊದಲನೇ ಇನಿಂಗ್ಸ್ ನಲ್ಲಿ 410 ರನ್ ಭಾರಿ ಹಿನ್ನಡೆ ಅನುಭವಿಸಿದ ಕರ್ನಾಟಕ ತಂಡ ದ್ವಿತೀಯ ಇನಿಂಗ್ಸ್ ಆರಂಭಿಸಿ ಮೂರನೇ ದಿನದ ಮುಕ್ತಾಯಕ್ಕೆೆ 16 ಓವರ್ ಗಳಿಗೆ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆಕ್ರೀಸ್ ನಲ್ಲಿ ರೋಹನ್ ಕದಮ್(16) ಹಾಗೂ ರವಿಕುಮಾರ್ ಸಮರ್ಥ್ (14) ಇದ್ದಾರೆ.

ಸೋಮವಾರ ಬೆಳಗ್ಗೆೆ ಕ್ರೀಸ್ಗೆ ಆಗಮಿಸಿದ ಆರ್ಸಮರ್ಥ್ ಹಾಗೂ ಪವನ್ ದೇಶ್ ಪಾಂಡೆ ಜೋಡಿ ಹೆಚ್ಚು ಕ್ರೀಸ್ನಲ್ಲಿ ಉಳಿಯಲಿಲ್ಲಕೇವಲ 8 ರನ್ ಗಳಿಸಿ ದೇಶ್ಪಾಂಡೆ ಮಕ್ವಾನಗೆ ವಿಕೆಟ್ ಒಪ್ಪಿಸಿದರುನಂತರಕ್ರೀಸ್ಗೆ ಬಂದ ನಾಯಕ ಶ್ರೇಯಸ್ ಗೋಪಾಲ್ 11 ರನ್ ಗಳಿಸಿ ಧರ್ಮೇಂದ ಸಿನ್ಹ್ ಜಡೇಜಾಗೆ ಔಟ್ ಆದರುಇವರ ಹಿಂದೆಯೇ ಬಿ.ಆರ್ ಶರತ್ (2) ವಿಕೆಟ್ ಒಪ್ಪಿಸಿದರು.

ಏಳನೇ ವಿಕೆಟ್ಗೆ ಜತೆಯಾದ ಆರ್ಸಮರ್ಥ್ ಹಾಗೂ ಪ್ರವೀಣ್ ದುಬೆ ಜೋಡಿ ಕೆಲಕಾಲ ಸೌರಾಷ್ಟ್ರ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿತು ಜೊಡಿ 39 ರನ್ ಜತೆಯಾಟವನ್ನು ತಂಡಕ್ಕೆೆ ಅಲ್ಪ ಕಾಣಿಕೆ ನೀಡಿತುಮುಂಬೈ ವಿರುದ್ಧ ಕಳೆದ ಪಂದ್ಯದಲ್ಲಿ ಅಲ್ಪ ಮುನ್ನಡೆ ಪಡೆಯುವಲ್ಲಿ ನೆರವಾಗಿದ್ದ ಆರ್ಸಮರ್ಥ್  ಪಂದ್ಯದಲ್ಲೂ ತಂಡಕ್ಕೆೆ ಆಸರೆಯಾದರುಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ಏಕಾಂಗಿಯಾಗಿ ಸೌರಾಷ್ಟ್ರ ಬೌಲರ್ಗಳನ್ನು ಎದುರಿಸಿದ ಸಮರ್ಥ್ ಅರ್ಧಶತಕ ಬಾರಿಸಿದರು. 174 ಎಸೆತಗಳಲ್ಲಿ ಎಂಟು ಬೌಂಡರಿಯೊಂದಿಗೆ 63 ರನ್ ಗಳಿಸಿದರುತಾಳ್ಮೆಯ ಬ್ಯಾಟಿಂಗ್ ಮಾಡುತ್ತಿದ್ದ ಇವರನ್ನು ಜಯದೇವ್ ಉನದ್ಕತ್ ಅವರು ಔಟ್ ಮಾಡಿದರು.

ಸಮರ್ಥ್ ಔಟ್ ಆದ ಬಳಿಕ ಇನಿಂಗ್ಸ್ ಮುಂದುವರಿಸಿದ ಪ್ರವೀಣ್ ದುಬೆ ತಂಡದ ಹಿನ್ನಡೆಯ ಅಂತರವನ್ನು ಸ್ವಲ್ಪ ತಗ್ಗಿಸಿದರುಕೊನೆಯ ಹಂತದವರೆಗೂ ಅಜೇಯರಾಗಿ ಉಳಿದ ಪ್ರವೀಣ್ ದುಬೆ 106 ಎಸೆತಗಳಲ್ಲಿ  46 ರನ್ ಗಳಿಸಿದರುಆದರೆಮತ್ತೊಂದು ತುದಿಯಲ್ಲಿ ಯಾರೂ ಸಾಥ್ ನಿಡಲೇ ಇಲ್ಲಸೌರಾಷ್ಟ್ರ ಪರ ಅತ್ಯುತ್ತಮ ಬೌಲಿಂಗ್ ಮಾಡಿದ  ಜಯದೇವ್ ಉನದ್ಕತ್ ಐದು ವಿಕೆಟ್ ಪಡೆದರುಕಮಲೇಶ್ ಮಕ್ವಾನ ಮೂರು ವಿಕೆಟ್ ಕಿತ್ತರು.

 ಸಂಕ್ಷಿಪ್ತ  ಸ್ಕೋರ್

ಸೌರಾಷ್ಟ್ರ

ಪ್ರಥಮ ಇನಿಂಗ್ಸ್: 581/7

ಕರ್ನಾಟಕ

ಪ್ರಥಮ ಇನಿಂಗ್ಸ್: 79 ಓವರ್ ಗಳಿಗೆ 171/10 (ಆರ್ಸಮರ್ಥ್ 63, ಪ್ರವೀಣ್ ದುಬೆ ಔಟಾಗದೆ 46, ರೋಹನ್ ಕದಮ್ 29; ಜಯದೇವ್ ಉನದ್ಕತ್ 49 ಕ್ಕೆೆ 5, ಕಮಲೇಶ್ ಮಕ್ವಾನ 27 ಕ್ಕೆೆ 30

ದ್ವಿತೀಯ ಇನಿಂಗ್ಸ್: 16 ಓವರ್ಗಳಲ್ಲಿ 30/0 (ಆರ್ಸಮರ್ಥ್ ಔಟಾಗದೆ 14, ರೋಹನ್ ಕದಮ್ ಔಟಾಗದೆ 16)