ಕಜ್ಜರಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ ಘಟಕ ವ್ಯವಸ್ಥಾಪಕರು: ಎಸ್‌ಎಫ್‌ಐ ಹೋರಾಟಕ್ಕೆ ಸಂದ ಜಯ.

ಕಜ್ಜರಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ ಘಟಕ ವ್ಯವಸ್ಥಾಪಕರು: ಎಸ್‌ಎಫ್‌ಐ ಹೋರಾಟಕ್ಕೆ ಸಂದ ಜಯ. Unit managers who arranged buses for Kajjari village: SFI's struggle is a victory.

ರಾಣೆಬೆನ್ನೂರು 10 : ತಾಲ್ಲೂಕಿನ ಕಜ್ಜರಿ, ಕೂನಬೇವು ಗ್ರಾಮಗಳಿಗೆ ಪರೀಕ್ಷೆ ಸಮಯದಲ್ಲಿ ಬಸ್ಸಿನ ಸಮಸ್ಯೆ ಎದುರುಗಿದೆ ಪರಿಹಾರಕ್ಕಾಗಿ ಬಸ್ ಬಿಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇತ್ತಿಚೆಗೆ ಮನವಿ ಮಾಡಿಕೊಂಡಿದ್ದರು ಆದರಿಂದ ಮನವಿಗೆ ಸ್ಪಂದಿಸಿದ ಸಾರಿಗೆ ಘಟಕ ವ್ಯವಸ್ಥಾಪಕರು ಬಸ್ ಬಿಟ್ಟಿದ್ದಾರೆ ಅದರ ಆದೇಶ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಅರುಣ್ ನಾಗವತ್ ಮಾತನಾಡಿ, ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು, ನೌಕರರು, ರೈತರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕ ಪ್ರಯಾಣಿಕರು ದಿನ ನಿತ್ಯವು ಸಾವಿರಾರು ಜನ ನಗರಕ್ಕೆ ಆಗಮಿಸುತ್ತಾರೆ. ಆದರೆ ಸಾರಿಗೆ ವ್ಯವಸ್ಥೆ ಸಮಸ್ಯೆ ಅತೀ ಹೇರಳವಾಗಿತ್ತು. ಶೈಕ್ಷಣಿಕ ವರ್ಷದ ಕೊನೆಯ ದಿನಗಳು ಪರೀಕ್ಷೆಯ ಸಮಯವಾಗಿದೆ ಬಸ್ ಬಿಡಿ ಎಂದು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಾರಿಗೆ ಘಟಕ ವ್ಯವಸ್ಥಾಪಕರು ಕಜ್ಜರಿ ಮತ್ತು ಕೋನಬೇವು ಗ್ರಾಮಕ್ಕೆ ಸಮಯ 3:00 ಗಂಟೆಗೆ ಸೌಲಭ್ಯ ಒದಗಿಸಿ ಕೊಟ್ಟಿದ್ದಾರೆ.

ನಮ್ಮ ಹೋರಾಟಕ್ಕೆ ಸ್ಪಂದಿಸಿದ ವಿದ್ಯಾರ್ಥಿ ಸಮುದಾಯದ ಪರವಾಗಿ ಘಟಕ ವ್ಯವಸ್ಥಾಪಕರಿಗೆ ಧನ್ಯವಾದಗಳು. ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಹಿತದೃಷ್ಟಿಯಿಂದ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿದ್ದನ್ನು ವಿದ್ಯಾರ್ಥಿ ಸಮುದಾಯದ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತದೆ ಎಂದರು.ವಿದ್ಯಾರ್ಥಿನಿ ಅನುಷ ಷಣ್ಮುಕಪ್ಪ ಮಾತನಾಡಿ, ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರು ಸರಿಯಾಗಿ ಬಸ್ ಬಿಡುವ ಕೆಲಸ ಆಗುತ್ತಿಲ್ಲ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಎಂದು ಬಸ್ ನಿಲ್ದಾಣಕ್ಕೆ ಅಲೆದಾಡಿ ಸಾಕಾಗಿತ್ತು ಆದರೂ ಯಾವುದೇ ತರಹದ ಬಸ್ಸಿನ್ ವ್ಯವಸ್ಥೆ ಕಲ್ಪಿಸಿಕೊಡಲಿಲ್ಲ

ಆದರೆ ಎಸ್‌ಎಫ್‌ಐ ಸಂಘಟನೆ ಹೋರಾಟದಿಂದ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಅವರಿಗೆ ನಮ್ಮ ವಿದ್ಯಾರ್ಥಿಗಳಿಂದ ಮತ್ತು ನಮ್ಮ ಊರಿನ ಜನಸಾಮಾನ್ಯರ ಕಡೆಯಿಂದ ಧನ್ಯವಾದಗಳು. ವಿದ್ಯಾರ್ಥಿಗಳಿಗೆ ಪರೀಕ್ಷೆ, ತರಗತಿಗಳನ್ನು ಮುಗಿಸಿಕೊಂಡು ಸಮಯಕ್ಕೆ ಸರಿಯಾಗಿ ಮಧ್ಯಾಹ್ನ ಊರಿಗೆ ಹೋಗಲು ಅನುಕೂಲವಾಗಿದೆ ಎಂದು ಖುಷಿಪಟ್ಟರು ಈ ಸಂದರ್ಭದಲ್ಲಿ ಲಕ್ಮಿ ಭರಮಪ್ಪ, ಪವಿತ್ರ ಯಲಪ್ಪ, ರೇಣುಕಾ ಬಾರ್ಕಿ, ಗಂಗಮ್ಮ ಟಿ, ಲಲಿತಾ ಬಿ, ಚೈತ್ರ ಎೈ, ಕಾವ್ಯಾ ಬಾರ್ಕಿ ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ಉಪಸ್ಥಿತರಿದರು.ವಂದನೆಗಳೊಂದಿಗೆ,ಅರುಣ್ ನಾಗವತ್‌ಎಸ್‌ಎಫ್‌ಐ ಮುಖಂಡರು