ಜೆಡಿಎಸ್ ಕಚೇರಿಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಜನ್ಮದಿನದ ಆಚರಣೆ

Union Minister HD Kumaraswamy birthday celebration at JDS office

ಜೆಡಿಎಸ್ ಕಚೇರಿಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಜನ್ಮದಿನದ ಆಚರಣೆ

ಬಳ್ಳಾರಿ  16: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು 65 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಜೆಡಿಎಸ್ ಕಛೇರಿಯಲ್ಲಿ ಸೋಮವಾರ (ಡಿ.16) ದಂದು ಆಚರಿಸಲಾಯಿತು.ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣರವರ ನೇತೃತ್ವದಲ್ಲಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೇಕ್ ಕಟ್ ಮಾಡುವ ಮೂಲಕ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.  

ತದನಂತರ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಬಡರೋಗಿಗಳಿಗೆ ಬ್ರೇಡ್, ಹಣ್ಣು ಮತ್ತು ಹಂಪಲುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣರವರು ಕೇಂದ್ರ ಸಚಿವರಾದ ಕುಮಾರ ಸ್ವಾಮಿ ಅವರು ನಾಡಿಗೆ ಸಲ್ಲಿಸಿರುವ ಸೇವೆ ಕುರಿತು ಒಂದೆರಡು ಮಾತುಗಳನ್ನು ಹೇಳಿ, ಅವರಿಗೆ ಆಯಸ್ಸು, ಆರೋಗ್ಯ ಮತ್ತು ಐಶ್ವರ್ಯವನ್ನು ಸಿಗಲಿ, ನೂರಾರು ಕಾಲ ಸುಖವಾಗಿ ಇರಲಿ ಎಂದು ದೇವರು ಆಶೀರ್ವದಿಸಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ತಾಲೂಕು ಅಧ್ಯಕ್ಷ ಅಶೋಕ್, ಬಳ್ಳಾರಿ ನಗರ ಅಧ್ಯಕ್ಷ ವಂಡ್ರಿ, ಸೇರಿದಂತೆ ನಾಗರಾಜ್, ಮುತ್ತುರಾಜ್, ಪ್ರದೀಪ್, ರಾಮಾಂಜನಿ, ವಡ್ಡಗೆರೆ ರಾಮಣ್ಣ, ಬಳ್ಳಾರಿ ಮಹಿಳಾ ಅಧ್ಯಕ್ಷೆ ಜಮೀಲಾ, ಭವಾನಿ,ರೇಣುಕಾ, ನೀಲಾ ಶಬಾನಾ ಹಾಗೂ ಪಕ್ಷದ ಇನ್ನಿತರೇ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.