ಅವಿಶ್ವಾಸ ನಿರ್ಣಯ ಎಫೆಕ್ಟ್: 300 ಅಂಕ ಕುಸಿದ

ಮುಂಬೈ: ವಾರದ ಆರಂಭದಲ್ಲಿ ಭಾರಿ ಏರಿಕೆ ದಾಖಲಿಸಿ ದಾಖಲೆ ಬರೆದಿದ್ದ ಷೇರುಪೇಟೆ ಇಂದು ಬರೋಬ್ಬರಿ 300 ಅಂಕಗಳಷ್ಟು ಕುಸಿಯುವ ಮೂಲಕ ಕರಡಿ ದಾಳಿಯ ಭೀತಿಗೊಳಗಾಗಿದೆ.

 ನಿನ್ನೆ 36,700 ಅಂಕಕ್ಕೆ ಏರಿಕೆ ಕಂಡಿದ್ದ ಪೇಟೆ, ಕಾಂಗ್ರೆಸ್​, ಟಿಡಿಪಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸ್ಪೀಕರ್ಗೆ ನೋಟಿಸ್ನೀಡುತ್ತಲೇ 150 ಅಂಕ ಇಳಿಕೆ ಕಂಡಿತ್ತು.  


ಇಂದು ಮುಂಜಾನೆ ಜಾಗತಿಕ ಮಾರುಕಟ್ಟೆಗಳ ಹಿಂಜರಿತ ಹಾಗೂ ಬ್ಯಾಂಕಿಂಗ್​, ಫಾರ್ಮಾ ಹಾಗೂ ಲೋಹದ ಷೇರುಗಳಲ್ಲಿ ಇಳಿಕೆ ಕಂಡು ಬಂದಿದ್ದರಿಂದ ಸುಮಾರು 300 ಅಂಕಗಳಷ್ಟ ನಷ್ಟ ಅನುಭವಿಸಿತು. ಅಲ್ಲದೇ 37,373.23 ಅಂಕಗಳಿಗೆ ಕುಸಿತ ಕಂಡಿತು