ಅಂಡರ್ 19 ವಿಶ್ವಕಪ್: ಆಸೀಸ್ ಗೆಲುವಿಗೆ 234 ರನ್ ಗುರಿ ನೀಡಿದ ಭಾರತ

ನವದೆಹಲಿ, ಜ.28 :       ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 50 ಓವರ್ ಗಳಲ್ಲಿ ಒಂಬತ್ತು ವಿಕೆಟ್ ಗೆ 233 ರನ್ ಸೇರಿಸಿದೆ.  

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ, 54 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ದಿವ್ಯಾನ್ಶ್ ಸಕ್ಸೇನಾ 14, ತಿಲಕ್ ವರ್ಮಾ ಎರಡು ಮತ್ತು ನಾಯಕ ಪ್ರಿಯಮ್ ಗರ್ಗ್ ಐದು ರನ್ ಗಳಿಗೆ ಔಟ್ ಆಯಿತು. ಯಶಸ್ವಿ ಜೈಸ್ವಾಲ್ 82 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 62 ರನ್ ಗಳಿಸಿದರು.

ವಿಕೆಟ್ ಕೀಪರ್ ಧ್ರುವ್ ಜುರೆಲ್ 15 ರನ್ ಗಳಿಸಿ ಔಟ್ ಆದರು. ಸಿದ್ಧೇಶ್ ವೀರ್ 42 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 25 ರನ್ ಗಳಿಸಿದರು, ಅಂಕೋಲೇಕರ್ 54 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ ಅಜೇಯ 55 ರನ್ ಗಳಿಸಿದರು. ರವಿ ಬಿಷ್ಣೋಯ್ 31 ಎಸೆತಗಳಲ್ಲಿ ನಾಲ್ಕು ಮತ್ತು ಒಂದು ಸಿಕ್ಸರ್ ಮೂಲಕ 30 ರನ್ ಗಳಿಸಿದರು. ಅಂಕೋಲೆಕರ್ ಮತ್ತು ಬಿಷ್ಣೋಯ್ ಅವರು ಏಳನೇ ವಿಕೆಟ್‌ಗೆ 61 ರನ್‌ಗಳ ಕಾಣಿಕೆ ನೀಡಿತು. 

ಆಸ್ಟ್ರೇಲಿಯಾ ಪರ ಕೋರೆ ಕೆಲ್ಲಿ 45 ರನ್‌ಗಳಿಗೆ ಎರಡು ವಿಕೆಟ್ ಮತ್ತು ಟಾಡ್ ಮರ್ಫಿ 40 ರನ್‌ಗಳಿಗೆ ಎರಡು ವಿಕೆಟ್ ಪಡೆದರು.