ನವದೆಹಲಿ, ಜ.10: ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಲ್ ರೌಂಡರ್ ದಿವ್ಯಾಂಶ್ ಜೋಶಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್ ತಂಡದಿಂದ ಹೊರಗುಳಿದಿದ್ದು, ಇವರ ಸ್ಥಾನವನ್ನು ಸಿದ್ಧೇಶ್ ವೀರ್ ತುಂಬಲಿದ್ದಾರೆ.
ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಿರಿಯರ ಆಯ್ಕೆ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಶುಕ್ರವಾರ ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ದಿವ್ಯಾಂಶ್ ಬಲ ಭುಜಕ್ಕೆ ಗಾಯ ಮಾಡಿಕೊಂಡಿದ್ದು, ಈ ಗಾಯವು ವಿಶ್ವಕಪ್ ಆಡುವ ಅವರ ಕನಸಿಗೆ ಪೆಟ್ಟು ನೀಡಿದೆ.
ಆಯ್ಕೆ ಸಮಿತಿ ದಿವ್ಯಾಂಶ್ ಬದಲಿಗೆ ಮಹಾರಾಷ್ಟ್ರದ ಸಿದ್ಧೇಶ್ ವೀರ್ ಅವರನ್ನು ಭಾರತ ತಂಡಕ್ಕೆ ಸೇರಿಸಿದೆ. ಉತ್ತರ ಪ್ರದೇಶದ ಪ್ರಿಯಮ್ ಗರ್ಗ್ವಿಶ್ವಕಪ್ನಲ್ಲಿ ಭಾರತ ತಂಡದ ನಾಯಕತ್ವ ವಹಿಸುಕೊಂಡಿದ್ದಾರೆ. ಈ ವಿಶ್ವಕಪ್ಗೆ ತಯಾರಿ ನಡೆಸಲು ಭಾರತ ನಾಲ್ಕು ದಿನಗಳ ಏಕದಿನ ಪಂದ್ಯಾವಳಿಯನ್ನು ಗೆದ್ದುಕೊಂಡಿದೆ.