ಅಂಡರ್ 19 ಕ್ರಿಕೆಟ್: ಭಾರತಕ್ಕೆ ಸೋಲು

cricket logo

ಲಖನೌ, ನ.26- ಅಬಿದ್ ಮೊಹಮ್ಮದಿ(28ಕ್ಕೆ 4) ಹಾಗೂ ಅಬ್ದುಲ್ ರಹಮಾನ್ (22ಕ್ಕೆ 3) ಇವರು‍ಗಳ ಬಿಗುವಿನ ದಾಳಿಯ ನೆರವಿನಿಂದ 19 ವರ್ಷದೊಳಗಿನ ಕ್ರಿಕೆಟ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ 3 ವಿಕೆಟ್ ಗಳಿಂದ ಭಾರತ ತಂಡವನ್ನು ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮಣಿಸಿ, ಐದು ಪಂದ್ಯಗಳ ಸರಣಿಯಲ್ಲಿ ಪುಟಿದೆದ್ದಿದೆ.  

ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಅಬಿದ್ ಮೊಹಮ್ಮದಿ ಹಾಗೂ ಅಬ್ದುಲ್ ರಹಮಾನ್ ಕಾಡಿದರು. ಈ ಯುವ ಬೌಲರ್ ಗಳು ಭಾರತದ ಯುವ ಬ್ಯಾಟ್ಸ್ ಮನ್ ಗಳನ್ನು ಕಾಡಿದರು. ಆರಂಭಿಕ ದಿವ್ಯಾಂಶು ಸಕ್ಸೆನಾ 57 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 24 ರನ್ ಸಿಡಿಸಿದರು. ವಿಕ್ರಾಂತ್ 39, ಕರ್ನಾಟದ ಆಟಗಾರ ಹಾಗೂ ಯುವಕರ ತಂಡದ ನಾಯಕ ಶುಭ್ ಮನ್ ಹೆಗ್ಡೆ 84 ಎಸೆತಗಳಲ್ಲಿ 46 ರನ್ ಬಾರಿಸಿದರು. ಭಾರತ 49 ಓವರ್ ಗಳಲ್ಲಿ 152 ರನ್ ಗಳಿಗೆ ಆಲೌಟ್ ಆಯಿತು. 

ಅಫ್ಘಾನ್ ತಂಡದ ಆರಂಭಿಕರು ತಂಡಕ್ಕೆ ಉತ್ತಮ ಆರಂಭ ನೀಡಲಿಲ್ಲ. ಎರಡನೇ ವಿಕೆಟ್ ಗೆ ಇಮ್ರಾನ್, ಮೊಹಮ್ಮದ್ ಇಶಾಕ್ ತಂಡಕ್ಕೆ 54 ರನ್ ಜೊತೆಯಾಟದ ಕಾಣಿಕೆ ನೀಡಿತು. ಇಮ್ರಾನ್ 34, ಮೊಹಮ್ಮದ್ 32, ರಹಮನುಲ್ಲ 21, ಅಬ್ದುಲ್ ರಹಮಾನ್ ಅಜೇಯ 26 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ಅಫ್ಘಾನಿಸ್ತಾನ 46.2 ಓವರ್ ಗಳಲ್ಲಿ 7 ವಿಕೆಟ್ ಗೆ 155 ರನ್ ಸೇರಿಸಿ ಜಯ ಸಾಧಿಸಿತು.