ಕಾಗವಾಡ 17: ಕಾಗವಾಡ ತಾಲೂಕಿನ ತಹಸೀಲ್ದಾರರು, ಪೊಲೀಸ್ ಇಲಾಖೆ, ಲೊಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಹಟಾತ ದಾಳಿ ನಡೆಸಿ, ಅನಧಿಕೃತವಾಗಿ ಕೃಷ್ಣಾ ನದಿಯಿಂದ ಸಂಗ್ರಹಿಸಿದ 177 ಬ್ರಾಸ್ ಮರಳು ಜಪ್ತಿಮಾಡಲು ಯಶಸ್ವಿಯಾದರು.ಇದರ ಅಂದಾಜು ಮೌಲ್ಯ ಸುಮಾರು 8 ಲಕ್ಷವಾಗಿದೆ.
ಶುಕ್ರವಾರ ಮಧ್ಯಾಹ್ನ ತಹಸೀಲ್ದಾರ ಮೇಘರಾಜ ನಾಯಕ ಇವರ ನೇತೃತ್ವದಲ್ಲಿ, ಗ್ರೇಡ್-2 ತಹಸೀಲ್ದಾರ ವಿಜಯ ಚೌಗುಲೆ, ಪಿಎಸ್ಐ ಹನಮಂತ ಶಿರಹಟ್ಟಿ ಅವರ ಸಿಬ್ಬಂದಿದೊಂದಿಗೆ ಏಕ ಕಾಲಕ್ಕೆ ಬನಿಜವಾಡ ಗ್ರಾಮಕ್ಕೆ ಧಾವಿಸಿ ಇಲ್ಲಿಯ ನಾಗರಿಕರು ಪ್ರತಿಯೊಬ್ಬರ ಮನೆಯ ಸ್ಥಳದಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ ಮರಳು ಕಂಡುಬಂತು. ಕೂಡಲೆ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳಾದ ಎ.ಎಸ್.ಮಗದುಮ್ಮ ಇವರೊಂದಿಗೆ ಗ್ರಾಮಲೆಕ್ಕಾಧಿಕಾರಿಗಳು ಸಂಗ್ರಹಿಸಿದ ಮರಳು ಅಳತೆಮಾಡಿದರು.
ಸಂಗ್ರಹಿಸಿದ ಮರಳು ಬೇರೆಯಾರಿಗೆ ಕಂಡುಬರದಂತೆ ಅದರ ಮೇಲೆ ಕಬ್ಬಿನ ಒನ ರವದೆ, ತೆಂಗಿನ ಮರಗಳ ಒನ ಟೊಂಗೆಗಳನ್ನು ಬಳಿಸಿ ಮುಚ್ಚಿಹಾಕಿದರು. ಆದರೆ, ಬೇರೆ ಯಾರೋ ಅಧಿಕೃತವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ, ಈ ದಾಳಿ ನಡೆದಿದೆ ಎಂದು ಹೇಳುತ್ತಿದ್ದರು.
ಅಧಿಕೃತವಾಗಿ ಮಾಹಿತಿ ಲಭ್ಯವಾದ ಪ್ರಕಾರ ಕಂದಾಯ ಇಲಾಖೆಯಿಂದ ತಹಸೀಲ್ದಾರ ಮೇಘರಾಜ ನಾಯಕ ಇವರ ನೇತೃತ್ವದಲ್ಲಿ ಕಾಗವಾಡ ಪಿಎಸ್ಐ ಹನಮಂತ ಶಿರಹಟ್ಟಿ ಹಾಗೂ ಅವರ ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿ ಬಂದು ಪರಿಶೀಲಿಸಿದ್ದಾಗ ಅನಧಿಕೃತವಾಗಿ ಮರಳು ಸಂಗ್ರಹಿಸಿದ ಕಂಡುಬಂದಿದ್ದು, 177 ಬ್ರಾಸ್ ಮರಳವಿದ್ದು, ಸಕರ್ಾರದ ನಿಗಧಿಪಡಿಸಿದ ದರ 4670 ರೂ. ಪ್ರಕಾರ ಹರಾಜಮಾಡಲಾಗುವುದು ಎಂದು ಕಾಗವಾಡ ಗ್ರೇಡ್-2 ತಹಸೀಲ್ದಾರ ವಿಜಯ ಚೌಗುಲೆ ತಿಳಿಸಿದರು.
ಬನಿಜವಾಡ ಗ್ರಾಮದ ಮೇಲೆ ಅನ್ಯಾಯ:
ಕೃಷ್ಣಾ ನದಿ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿರುವ ಗ್ರಾಮವಿದೆ. ಇಲ್ಲಿಗೆ ಸಕರ್ಾರದಿಂದ ಯಾವುದೇ ಸಹಾಯ, ಸೌಲಭ್ಯವಿಲ್ಲಾ. 60 ವಿಧವೆಯರಿಗೆ ಸಕರ್ಾರದಿಂದ ಮನೆ ಮಂಜೂರು ಆಗಿದೆ. ಕಟ್ಟಡ ಮಾಡಲು ಮರಳು ಸಂಗ್ರಹಿಸಲಾಗಿತ್ತು. ಇದಕ್ಕೆ ಒಂದು ಬ್ರಾಸ್ ಮರಳಿಗೆ 5 ಸಾವಿರ ರೂ. ಹಣವು ಕೂಡಾ ನೀಡಿದ್ದೇವೆ. ಈಗ ಅಧಿಕಾರಿಗಳು ಮರಳು ಜಪ್ತಿಮಾಡಿ ಹರಾಜ ಮಾಡಲು ಮುಂದಾಗಿದ್ದಾರೆ. ಇಡಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವಾಗ ಯಾರು ಕೂಡ ಮುಂದು ಬರಲಿಲ್ಲಾ. ಹರಾಜಕ್ಕೆ ಅಷ್ಟೇ ಬರುತ್ತಿದ್ದಾರೆಯೆಂದು ಗ್ರಾಪಂ ಸದಸ್ಯ ಕುಮಾರ ಮಹಾವೀರ ಕುಂಭೋಜೆ ಆರೋಪಿಸಿದ್ದಾರೆ.
ಕಂದಾಯ ನಿರೀಕ್ಷಕ ಬಸವರಾಜ ಬೋರಗಲ, ಗ್ರಾಮಲೆಕ್ಕಾಧಿಕಾರಿಗಳಾದ ಐ.ಕೆ.ಹಿರೇಮಠ, ಎಸ್.ಎನ್.ಜೋರೆ, ಎಂ.ಎಸ್.ಕನಕನ್ನವರ, ಪರಾಗ ಕಾಂಬಳೆ, ಬಿ.ಬಿ.ಬಂದಾಯಿ, ಕೆ.ಕೆ.ಕುಲಕಣರ್ಿ, ಸೇರಿದಂತೆ ಗ್ರಾಮ ಸಹಾಯಕರು, ಪೊಲೀಸ್ ಸಿಬ್ಬಂದಿಗಳು ಮರಳು ಜಪ್ತಮಾಡಲು ಮುಂದಾಗಿದ್ದರು.