ಮುದ್ದೇಬಿಹಾಳ 16: ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ಅನಧೀಕೃತವಾಗಿ ವಾಟರ್ ಮನ್ ಹುದ್ದೆಯಲ್ಲಿ ಅನುಮತಿ ನೀಡಿದ ಸಾಬಣ್ಣ ಬಸಪ್ಪ ತಳವಾರ, ರವಿಕುಮಾರ ಸೋಮಪ್ಪ ಹೊಸಮನಿ, ಸಂಗಪ್ಪ ಬೀರ್ಪ ಜಗಲಿ ಎನ್ನುವರ ಮೇಲೆ ತನಿಖೆ ನಡೆಸಿ ವಾಟರ್ ಮನ್ ಹುದ್ದೆಯಿಂದ ತೆಗೆದು ಹಾಕುವ ಮೂಲಕ ನ್ಯಾಯ ಒದಗಿಸಬೇಕು ಎಂದು ಕುಂಟೋಜಿಯ ಗ್ರಾಮಸ್ಥ ರಾಮಪ್ಪ ಬಸಪ್ಪ ಕವಡಿಮಟ್ಟಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪ್ರಕಟಣೆ ನೀಡಿದ ಅವರು ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ 2023 ರಲ್ಲಿ ಇಣಚಗಲ್ಲ ಗ್ರಾಮದ ಸಾಬಣ್ಣ ಬಸಪ್ಪ ತಳವಾರ ಎನ್ನುವರು ಕುಂಟೋಜಿ ಗ್ರಾಮ ಪಂಚಾಯಿತಿ ವಾಟರ್ ಮನ್ ಆಗಿ ಆಗಿನ ಪಿಡಿಓಗಳು ಮತ್ತು ಆಡಳಿತ ಮಂಡಳಿಯವರು ಯಾವೂದೇ ದಾಖಲೆಗಳನ್ನು ಪರೀಶೀಲನೆ ನಡೆಸದೆ ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವೂದೇ ಸಂಬಂಧಪಟ್ಟ ಮೇಲಾಧಿಕಾರಿಗಳ ಆದೇಶವಿಲ್ಲದೇ ಪೂರಕ ಖೋಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅನಧಿಕೃತವಾಗಿ ನೇಮಕ ಮಾಡಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ. ಈ ಕುರಿತು 31 ಅಗಷ್ಟ 23 ರಂದು ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ , 4 ಸಪ್ಟೆಂಬರ್ 2023 ರಂದು ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತತ್ಸರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾಯನಿರ್ವಾಹಕ ಅಧಿಕಾರಿಗಳು 27 ಅಕ್ಟೋಬರ 2023 ರಂದು 12 ಎಪ್ರೀಲ್ 2024, 30 ಸಪ್ಟೇಂಬರ್ 2024 ರಂದು ಜಿಲ್ಲಾ ಪಂಚಾಯಿತಿ ಮುಖ್ಯಕಾಯನಿರ್ವಾಹಕ ಅಧಿಕಾರಿಗಳು ತಾಲೂಕಾ ಕಾರ್ಯನಿವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಅಧಿಕಾರಿಗಳು ಸ್ಥಳಿಯವಾಗಿ ಬೇಟಿ ನೀಡಿ ವಾಸ್ಥವ ಸಮಗ್ರ ವರದಿ ಸಿದ್ಧಪಡಿಸಿ ವರದಿ ನೀಡಬೇಕು ಎಂದು ತಿಳಿಸಿದ್ದರೂ ಸಂಬಂಧಪಟ್ಟ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕುರಿತು ಯಾವೂದೇ ರೀತಿ ಸೂಕ್ತ ಪರಿಶಿಲನೇ ನಡೆಸುತ್ತಿಲ್ಲ ಕಾರಣ ಕೇಳಿದರೆ ಸಮ್ಮನೇ ವ್ಯರ್ಥ ಸಮಯ ಕಳೆದು ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ನಡೆಎಸುತ್ತಿದ್ದಾರೆ ಎದಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಕಾರಣ ಈ ಕೂಡಲೇ ಯಾವೂದೇ ಅದೀಕೃತ ದಾಖಲೆ ನೀಡದೇ ಖೋಟ್ಟಿ ದಾಖಲೆಗಳನ್ನು ನೀಡಸಿ ಸರಕಾರಕ್ಕೆ ವಂಚಿಸಿದ ಸಾಬಣ್ಣ ಬಸಪ್ಪ ತಳವಾರ ವಾಟರ್ ಮನ ಹುದ್ದೆಯಿಂದ ತೆರವುಗಳಿಸಿ ವಂಚನೆ ಆರೋದಡಿಯಲ್ಲಿ ಪ್ರಕರಣ ನನದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.