ಲೋಕದರ್ಶನ ವರದಿ
ಕೊಪ್ಪಳ: ಶಿಕ್ಷಕರ ಕೊರತೆ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಉದರ್ು ಪ್ರೌಢ ಶಾಲೆಯ ವಿದ್ಯಾಥರ್ಿಗಳೊಂದಿಗೆ ಕೈಜೋಡಿಸಿ ಶೀಘ್ರ ಬೇಡಿಕೆ ಈಡೇರಿಸಲು ಕ್ಯಾಂಪಸ್ ಫ್ರಂಟ್ ವಿದ್ಯಾಥರ್ಿ ಸಂಘಟನೆ ಮತ್ತು ಅಧ್ಯಕ್ಷ ಸೈಯದ್ ಅಲಿ ಒತ್ತಾಯಿಸಿದರು.
ಅವರು ಸೋಮವಾರ ಶಾಲೆಯ ಆವರಣದಲ್ಲಿ ಕ್ಯಾಂಪಸ್ ಫ್ರಂಟ್ ನೇತ್ರತ್ವದಲ್ಲಿ ವಿದ್ಯಾಥರ್ಿಗಳು ಪ್ರತಿಭಟನೆ ನಡೆಸಿದರು.
ಮುಂದುವರೆದು ಮಾತನಾಡಿದ ಅವರು ಮುಖ್ಯವಾಗಿ ಶಿಕ್ಷಕರ ಕೊರತೆ ಹಾಗೂ ಮೂಲಭೂತ ಸೌಕರ್ಯಗಳಾದ ಪ್ರತ್ಯೇಕ ಶೌಚಾಲಯ, ನೀರಿನ ಸೌಲಭ್ಯ ಕಲ್ಪಿಸಿ ಕೊಡಬೇಕು, ಇರುವ ಕೊಠಡಿಗಳ ಮೇಲ್ಛಾವಣಿ ಉದುರುತ್ತಿರುವುದು ನವೀಕರಣಗೊಳಿಸಬೇಕು ಶೌಚಾಲಯ ನಿಮರ್ಾಣ ಮಾಡಿದ ಲ್ಯಾಂಡ್ ಆಮರ್ಿಯವರು ಉಪಯೋಗಿಸಲು ಇನ್ನೂ ಒಪ್ಪಿಸಿರುವುದಿಲ್ಲ ಅದರ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೋಭಾ ಬಾಗೆವಾಡಿಯವರಿಗೆ ತಿಳಿಸಲಾಯಿತು ಬೇಡಿಕೆಗಳು ಈಡೇರಿಸುವ ಬಗ್ಗೆ ಭರವಸೆ ಕೊಟ್ಟ ಮೇಲೆ ಧರಣಿಯನ್ನು ಹಿಂಪಡೆಯಲಾಯಿತು. ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೋರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಯಿತು. ಕ್ಯಾಂಪಸ್ ಫ್ರಂಟ್ ಕೊಪ್ಪಳ ತಾಲೂಕು ಅಧ್ಯಕ್ಷರಾದ ಸೈಯ್ಯದ್ ಅಲಿ ಮಾತನಾಡಿ ಎಂಟು ದಿವಸಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಕ್ಯಾಂಪಸ್ ಫ್ರಂಟ್ ಕೊಪ್ಪಳ ತಾಲೂಕು ಅಧ್ಯಕ್ಷರಾದ ಸೈಯ್ಯದ್ ಅಲಿ ಸಮಾಜ ಸೇವಕ ಸೈಯದ್ ಮಹೆಮೂದ್ ಹುಸೈನಿ ಬಲ್ಲೆ ಯುವ ನಾಯಕರಾದ ಯೂಸುಫ್ ಇಪ್ಪು, ಸೈಯದ ಸಲೀಂ ಖಾದ್ರಿ ಸೇರಿದಮತೆ ವಿದ್ಯಾಥರ್ಿಗಳು ಹಾಗೂ ಅವರ ಪಾಲಕರು ಇದ್ದರು.