ಉಳ್ಳಾಗಡ್ಡಿ-ಖಾನಾಪೂರ: ಗ್ರಾಮದಲ್ಲೆ ಬಿತ್ತನೆ ಬೀಜ ವಿತರಣೆ: ರೈತರಿಗೆ ಅನುಕೂಲ

ಉಳ್ಳಾಗಡ್ಡಿ-ಖಾನಾಪೂರ 07: ಪ್ರಪ್ರಥಮ ಬಾರಿಗೆ ಗ್ರಾಮದಲ್ಲಿ ಸೋಯಾಬಿನ್ ಬಿತ್ತನೆ ಬೀಜವನ್ನು ವಿತರಿಸುವುದರೊಂದಿಗೆ ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬೇರೆ ಗ್ರಾಮಗಳಿಗೆ ತೆರಳಿ ಬಿತ್ತನೆ ಬೀಜವನ್ನು ತರಲು ಅಲೆದಾಡುತ್ತಿದ್ದ ಸಮಯದ ಉಳಿತಾಯವಾಗುವುದರೊಂದಿಗೆ ಗ್ರಾಮದಲ್ಲೆ  ಬಿತ್ತನೆ ಬೀಜ ವಿತರಿಸುತ್ತಿದ್ದು ರೈತರಿಗೆ ಅನೂಕೂಲವಾಗಿದೆ ಎಂದು ಪಿ,ಕೆ,ಪಿ,ಎಸ್,ಅಧ್ಯಕ್ಷರಾದ ಅಪ್ಪಾಗೌಡಾ ಬಾ ಪಾಟೀಲ ಹೇಳಿದರು.

ಬಿತ್ತನೆ ಬೀಜವನ್ನು ಗ್ರಾಮದಲ್ಲೆ ತಂದು ವಿತರಿಸುವ ಪ್ರಯತ್ನಕ್ಕೆ ಎಲ್ಲ ನಿದರ್ೇಶಕರು ಹಾಗೂ ಗ್ರಾಮಸ್ತರು ಸಹಕರಿಸಿದ್ದು ಈ ಕಾರ್ಯ ಗ್ರಾಮದಲ್ಲೆ ನಡೆದಿರುವುದರಿಂದ ಸಂತಸವನ್ನು ವ್ಯಕ್ತಪಡಿಸಿದ ಅವರು ಮುಂಬರುವ ದಿನಗಳಲ್ಲಿ ರೈತ ಪರವಾದ ಹಲವು ಕಾರ್ಯಕ್ರಮಗಳನ್ನು ಕೃಷಿ ಪತ್ತಿನ ಸಂಘದಿಂದ ಹಮ್ಮಿಕೊಳ್ಳಲು ರೈತರು ಸಹಕರಿಸಬೇಕು ಎಂದರು.

     ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳಾದ ಯು,ಸಿ,ಆಗನೂರ, ಮಾತನಾಡಿ ಉಳ್ಳಾಗಡ್ಡಿ-ಖಾನಾಪೂರ ಗ್ರಾಮಕ್ಕೆ ಈಗ 30 ಕೀಲೊ ತೂಕದ ಸುಮಾರು 1600 ಚೀಲಗಳುಳ್ಳ 48 ಟನ್ ಸೋಯಾಬಿನ್ ಬೀಜವನ್ನು ಸಂಗ್ರಹಿಸಿದ್ದು ರೈತರು ತಮ್ಮ ಬ್ಯಾಂಕ್ ಪಾಸಬುಕ್ಕ್, ಜಮಿನುಗಳ ಉತಾರ, ಹಾಗೂ ಆಧಾರ ಕಾರ್ಡನ ಪ್ರತಿಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಕಚೇರಿಯಲ್ಲಿ ನೀಡಿ ತಮಗೆ ಅಗತ್ಯವಿರುವ ಬೀಜವನ್ನು ತೆಗೆದುಕೊಳ್ಳುವಂತೆ ತಿಳಿಸಿದರು. ಪ,ಜಾ,ಪರಿಶಿಷ್ಟ ಪಂಗಡದ ರೈತರು ಜಾತಿ ಪ್ರಮಾಣ ಪತ್ರ ನೀಡಿ ಅಗತ್ಯವಿರುವ ದಾಖಲೆಗಳನ್ನು ನೀಡಿ ಪತ್ರಿ ಚೀಲಕ್ಕೆ  1830 ರೂ ಗಳಿದ್ದು 1125 ರಿಯಾಯತಿ ಇದೆ, ಇದರಲ್ಲಿ 705 ರೂಗಳನ್ನು ನೀಡಬೇಕಾಗುತ್ತದೆ, ಉಳಿದ ರೈತರು ಪ್ರತಿ ಚೀಲಕ್ಕೆ 1830 ರೂಗಳಿದ್ದು 750 ರೂ ರಿಯಾಯತಿ ಇದ್ದು 1080 ರೂ ಗಳನ್ನು ನೀಡಬೇಕಾಗುತ್ತದೆ, ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಇಲಾಖೆಯ ಎಸ್,ಎಸ್,ಹಿರೇಕೂಡಿ, ಉಪಾಧ್ಯಕ್ಷ ಸುಭಾಷ ದುಂ ಹೆಬ್ಬಾಳಿ, ಗ್ರಾಮ ಪಂಚಾಯತನ ಅಧ್ಯಕ್ಷರಾದ ಸುಧೀರ ಗಿರಿಗೌಡರ, ವ್ಯವಸ್ಥಾಪಕ ಅಶೋಕ ಡೂಗೆ, ಪಿ,ಎಚ್,ಪಾಟೀಲ, ಆರ್,ಕೆ,ಕುಲಕಣರ್ಿ, ರಾಜು ಅವಟೆ, ಮಾಹಾರುದ್ರ ಜರಳಿ, ಪರಶುರಾಮ ದಂಡಗಿದಾಸ, ಭರತೇಶ ವೀರಭದ್ರನವರ, ಎಮ್,ಕೆ,ಅವಟೆ, ಖಲೀಲ ಹಜರತಭಾಯಿ, ಮಲ್ಲಪ್ಪಾ ರುದ್ರಗೌಡರ, ಅಕ್ಬರ್ ಲಾಡಖಾನ್, ಬಿ,ಎ,ಜರಳಿ, ಬಸೀರ ಲಾಡಖಾನ್, ರವಿ ವೀರಭದ್ರನವರ, ಭರತೇಶ ವೀರಭದ್ರನವರ, ಹಾಗೂ ಗ್ರಾಮದ ರೈತರು  ಸಂಘದ ನಿದರ್ೇಶಕರು, ಉಪಸ್ಥಿತರಿದ್ದರು.