ಏ. 5ರಂದು ಯುಗಾದಿ ರಸಸಂಜೆ ಕಾರ್ಯಕ್ರಮ
ಧಾರವಾಡ 01: ಸೃಷ್ಟಿ ರಸಿಕರ ರಂಗ ಪ್ರತಿಷ್ಠಾನವು ದಿ. 05 ರಂದು ಸಂಜೆ 5.30ಕ್ಕೆ ಧಾರವಾಡ ನಿಸರ್ಗ ಬಡಾವಣೆಯ “ಸೌರಭ” ಸಭಾಂಗಣದಲ್ಲಿ ಯುಗಾದಿ ರಸಸಂಜೆ ಕಾರ್ಯಕ್ರಮವನ್ನು ಏರಿ್ಡಸಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಕಲ್ಲಯ್ಯಜ್ಜನವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅತಿಥಿ ಸನ್ಮಾನಿತ ಕಲಾ ಪೋಷಕರಾದ ಎಮ್.ಕಲ್ಲಿನಾಥ ಶಾಸ್ತ್ರೀಗಳು, ಡಾ.ಸೌಭಾಗ್ಯ ಕುಲಕರ್ಣಿ, ಮುರಳೀಧರ ಮಳಗಿ, ನಿಜಗುಣಿ ರಾಜಗುರು, ಮಲ್ಲಿಕಾರ್ಜುನ ಚಿಕ್ಕಮಠ, ವೈಷ್ಣವಿ ಹಾನಗಲ್ ಇವರನ್ನು ಸನ್ಮಾನಿಸಲಾಗುವುದು.
ನಂತರ ಯುಗಾದಿ ರಸಸಂಜೆ ಕಾರ್ಯಕ್ರಮದಲ್ಲಿ ವೈಷ್ಣವಿ ಹಾನಗಲ್ ಮತ್ತು ಜಿ. ಸುರಭಿ ಸುರೇಶ್ ಅವರ ಗಾಯನ, ಪ್ರವೀಣ ಹೂಗಾರ ಅವರ ಸಿತಾರ ವಾದನ ಪ್ರಸ್ತುತ ಪಡಿಸಲಿದ್ದಾರೆ. ತಬಲಾದಲ್ಲಿ ಹೇಮಂತ ಜೋಶಿ ಹಾಗೂ ಬಸವರಾಜ ಹಿರೇಮಠ ಹಾಗೂ ಹಾರ್ಮೊನಿಯಂದಲ್ಲಿ ಪ್ರಮೋದ ಹೆಬ್ಬಳ್ಳಿ ಸಾಥ್ ಸಂಗತ ನೀಡಲಿದ್ದಾರೆ, ನಿಸರ್ಗ ಬಡಾವಣೆಯ ಶ್ರೀಆದಿಶಕ್ತಿ ಮಹಿಳಾ ಮಂಡಳದ ಸದಸ್ಯೆಯರಿಂದ ವೈವಿಧ್ಯಮಯ ಕಾರ್ಯಕ್ರಮ ಜರುಗುವವು ಎಂದು ಸೃಷ್ಟಿ ರಸಿಕರ ರಂಗ ಪ್ರಕಟಣೆಯಲ್ಲಿ ತಿಳಿಸಿದೆ.