ಲಿಂಗೈಕ ಮಹಾದೇವತಾತನವರ ಉಚ್ಛಾಯ ಉತ್ಸವ

Uchchaya Utsava of Lingaika Mahadevattava

ಲಿಂಗೈಕ ಮಹಾದೇವತಾತನವರ ಉಚ್ಛಾಯ ಉತ್ಸವ                                     

  ಕಂಪ್ಲಿ: 19. ತಾಲ್ಲೂಕಿನ ಮೆಟ್ರಿ ಗ್ರಾಮದ  ವಿಶ್ವಾರಾಧ್ಯ ಗುರುಕುಲ ಮಠದ ಪ್ರಣವಜ್ಯೋತಿ ಮಹಾಕ್ಷೇತ್ರ ಸಂಸ್ಥಾಪಕ ಲಿಂಗೈಕ್ಯ ಹಂದ್ಯಾಳು ಮಠದ ಮಹಾದೇವತಾತನವರ 41ನೇ ಪುಣ್ಮಸ್ಮರಣೆ ಬುಧವಾರ ವೈಭವದಿಂದ ಜರುಗಿತು. ಪುಣ್ಯಸ್ಮರಣೆ ಅಂಗವಾಗಿ ಶ್ರೀಮಠದಲ್ಲಿ ಗೌರಮ್ಮನವರ, ಶ್ರೀತಾತನವರ ಕರ್ತೃ ಗದ್ದುಗೆ, ಪ್ರಣವಜ್ಯೋತಿ ಪಂಚಪೀಠಾಧೀಶ್ವರರ ವಿಗ್ರಹಗಳಿಗೆ ವಿಶೇಷ ರುದ್ರಾಭಿಷೇಕ, ಬಿಲ್ವಾರ್ಚನೆ ನಂತರ ಗಣಾರಾಧನೆ ನಡೆಯಿತು. ಗ್ರಾಮದಲ್ಲಿ ಶ್ರೀತಾತನವರ ಉಚ್ಛಾಯ ಶ್ರೀಮಠದಿಂದ ಬಸವಣ್ಣನಪೇಟೆ ಎದುರು ಬಸವಣ್ಣ ಕಟ್ಟೆಯವರೆಗೆ ಭಕ್ತರ ಜಯಘೋಷದೊಂದಿಗೆ ತೆರಳಿ ಮತ್ತೆ ಸ್ವಸ್ಥಾನಕ್ಕೆ ಮರಳಿತು. ಮಂಗಳವಾದ್ಯ, ಸಮ್ಮಾಳ ಮೇಳ ತಂಡದವರು ಭಾಗವಹಿಸಿದ್ದರು. ನಂತರ ಭಕ್ತರಿಂದ ಕಾರ್ತಿಕ ದೀಪೋತ್ಸವ ಜರುಗಿತು. ಪುಣ್ಯಸ್ಮರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯರ ಪುರಾಣ ಪ್ರವಚನ ಮಹಾಮಂಲಗೊಂಡಿತು. ಎಚ್‌.ಎಂ. ವಿಶ್ವೇಶ್ವರಯ್ಯ ಸ್ವಾಮೀಜಿ ಪುರಾಣ ಪ್ರವಚನ, ಎ.ಎಂ. ಸೋಮಶೇಖರಯ್ಯಸ್ವಾಮಿ ಹಾರೋ​‍್ಮನಿಯಂಗೆ ಸಿ.ಡಿ. ಮೌನೇಶ್ ತಬಲಾಸಾಥ್ ನೀಡಿದರು. ಮೆಟ್ರಿ ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಹಳ್ಳಿಗಳ ಭಕ್ತರು ಭಾಗವಹಿಸಿದ್ದರು.