ನ್ಯೂಯಾರ್ಕ್, ಆ 31 ವಿಶ್ವ ಶ್ರೇಷ್ಠ ಟೆನಿಸ್ ಆಟಗಾರ ರೋಜರ್ ಫೆಡರರ್ ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.
ಶುಕ್ರವಾರ ಒಂದು ಗಂಟೆ 20 ನಿಮಿಷಗಳ ಕಾಲ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಸ್ವಿಜರ್ಲೆಂಡ್ನ ಆಟಗಾರ 6-2, 6-2, 6-1 ಅಂತರದಲ್ಲಿ ನೇರ ಸೆಟ್ಗಳಿಂದ ಬ್ರಿಟನ್ನ ಡೆನಿಯಲ್ ಎವಾನ್ಸ್ ವಿರುದ್ಧ ಗೆದ್ದು ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ.
ಎಂದಿನಂತೆ ಪಂದ್ಯದ ಮೊದಲ ಸೆಟ್ನಲ್ಲಿ ಸೋಲುತಿದ್ದ ಸ್ವೀಸ್ ಆಟಗಾರ ಮೂರನೇ ಸುತ್ತಿನ ಪಂದ್ಯದಲ್ಲಿ ಹಾಗೆ ಮಾಡಲಿಲ್ಲ. ಆರಂಭದಿಂದಲೂ ಚುರುಕಿನ ಆಟವಾಡಿದರು. ಪಂದ್ಯದಲ್ಲಿ ಒಟ್ಟು 10 ಏಸ್ ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡರು. ಅಲ್ಲದೇ, ಮೊದಲನೇ ಸರ್ವಿಸ್ನಲ್ಲಿ ಶೇ.80 ರಷ್ಟು ಅಂಕಗಳನ್ನು ಹಾಗೂ ಎರಡನೇ ಸರ್ವಿಸ್ನಲ್ಲಿ ಶೇ. 70 ರಷ್ಟು ಅಂಕಗಳನ್ನು ತನ್ರನ ತೆಕ್ಕೆಗೆ ಹಾಕಿಕೊಂಡರು.
" ಪಂದ್ಯದ ಆರಂಭವಾಗುವುದಕ್ಕೂ ಮುನ್ನ ತಂಡದೊಂದಿಗೆ ಮಾತನಾಡಿದ್ದು, ಮೊದಲನೇ ಸೆಟ್ನಲ್ಲಿ ಅಗತ್ಯಕ್ಕೂ ಮೀರಿದ ಪ್ರದರ್ಶನ ತೋರಬಾರದೆಂದು ನಿರ್ಧರಿಸಲಾಗಿತ್ತು. ಸವರ್ಿಸ್ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ತಂಡ ಸಲಹೆ ನೀಡಿತ್ತು. ಪಂದ್ಯವೀಡಿ ಹೆಚ್ಚಿನ ವಿಶ್ವಾಸ ಹಾಗೂ ಸಮಯೋಜಿತವಾಗಿತ್ತು. ಹಲವು ಪಂದ್ಯಗಳ ಬಳಿಕ ಮೊದಲ ಬಾರಿ ಒಳ್ಳೆಯ ಭಾವನೆ ವ್ಯಕ್ತವಾಗುತ್ತಿದೆ" ಎಂದು ಪಂದ್ಯದ ಬಳಿಕ ಐದು ಬಾರಿ ಚಾಂಪಿಯನ್ ರೋಜರ್ ಫೆಡರರ್ ಹೇಳಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅಮೆರಿಕ ಸೆರೆನಾ ವಿಲಿಯಮ್ಸ್ ಅವರು ಜೆಕ್ ಗಣರಾಜ್ಯದ ಕೆ. ಮುಚೋವಾ ವಿರುದ್ಧ 6-3, 6-2 ಅಂತರದಲ್ಲಿ ಸುಲಭವಾಗಿ ಗೆದ್ದು ನಾಲ್ಕನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.